ಪ್ರಶ್ನೆಗಳ ಬೆನ್ನೇರಿ ಹೊರಡುವ ಚಿಣ್ಣರು
ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳ ವಿಜ್ಞಾನ ಹಬ್ಬ
Team Udayavani, Nov 26, 2019, 5:18 AM IST
ಉಡುಪಿ: ರಾಜ್ಯದ ಮೂವತ್ತನಾಲ್ಕು ಶೈಕ್ಷಣಿಕ ಜಿಲ್ಲೆಗಳ 623 ಕ್ಲಸ್ಟರ್‌ಗಳಲ್ಲಿ ಈ ವರ್ಷದ ಡಿಸೆಂಬರ್ ಒಳಗಾಗಿ ಮಕ್ಕಳ ವಿಜ್ಞಾನ ಹಬ್ಬಗಳನ್ನು ಸಮಗ್ರ ಶಿಕ್ಷಣ ಅಭಿಯಾನವು ಭಾರತ ಜ್ಞಾನ ವಿಜ್ಞಾನ ಸಮಿತಿಯ ನೆರವಿನೊಂದಿಗೆ ಸಂಘಟಿಸುತ್ತಿದೆ. ಉಡುಪಿ ಜಿಲ್ಲೆಯ ಆಯ್ದ ಹದಿಮೂರು ಕ್ಲಸ್ಟರಿನ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 6, 7, 8ನೇ ತರಗತಿಯ ಮಕ್ಕಳು ಈ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.
ಧನಾತ್ಮಕ ಬದಲಾವಣೆಗಾಗಿ
ಸೂಕ್ತ ರೀತಿಯಲ್ಲಿ ನಿರ್ವಹಿಸಲ್ಪಟ್ಟರೆ ಕಲಿಕೆಯ ಜತೆ ಜತೆಯೇ ಎದುರಾಗುವ ಪ್ರಶ್ನೆಗಳನ್ನು ಪ್ರಜ್ಞೆಯಾಗಿ ರೂಪಿಸುವ ಶಕ್ತಿಯೂ ಹಬ್ಬದಲ್ಲಿ ಮಕ್ಕಳು ನಡೆಸುವ ಚಟುವಟಿಕೆಗಳಿಗಿದೆ. ಈ ಚಟುವಟಿಕೆಗಳು ಹೊಸದಾಗಿ ಆವಿಷ್ಕರಿಸಿದವಲ್ಲದಿದ್ದರೂ ಮಕ್ಕಳ ವಿಜ್ಞಾನ ಹಬ್ಬದ ವ್ಯಾಪ್ತಿ ಮತ್ತು ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಮರುನಿರೂಪಿಸಲ್ಪಟ್ಟಿವೆ. ಈ ಕಾರ್ಯಕ್ರಮದ ವಿನ್ಯಾಸ, ನಿರ್ವಹಣೆ ಮತ್ತು ಸಂಘಟನೆಯೆಲ್ಲವೂ ತರಗತಿ ಕೋಣೆಯಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಬೇಕೆಂಬ ಹಂಬಲದಲ್ಲಿರುವ ಶಿಕ್ಷಕ-ಶಿಕ್ಷಕಿಯರದ್ದೇ ಆಗಿದೆ.
ಹಬ್ಬ ಏಕೆ?
ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು; ಅಪರಿಮಿತ ಸ್ವಾತಂತ್ರ್ಯ ಮತ್ತು ಸಂತೋಷ ಮಾತ್ರ ಮಗುವಿಗೆ ಹಬ್ಬದ ಸಡಗರ ವನ್ನುಂಟುಮಾಡಬಲ್ಲದು. ಮಕ್ಕಳ ಸಂತಸ ಮತ್ತು ಚೈತನ್ಯವನ್ನೇ ಬಂಡವಾಳ ಮಾಡಿಕೊಂಡು ವಿಜ್ಞಾನ ಹಬ್ಬವು ಜೀವತಳೆಯುತ್ತಿದೆ. ನಿರ್ಧಾರಗಳನ್ನು ತಳೆಯುವ, ಅವುಗಳನ್ನು ಪ್ರಶ್ನಿಸುವ ಎದೆಗಾರಿಕೆ, ಕುತೂಹಲ, ದೂರದೃಷ್ಟಿ, ಪ್ರಯೋಗಶೀಲತೆ, ಒಳಗೊಳ್ಳುವಿಕೆಯ ಮೂಲಕವೇ ವೈಜ್ಞಾನಿಕ ಮನೋವೃತ್ತಿ ಪ್ರಕಟಗೊಳಿಸುವ ಪ್ರಯತ್ನ. ಮಗುವಿನ ಕುತೂಹಲ, ಕುತೂಹಲದ ಉತ್ಪನ್ನವಾದ ಪ್ರಶ್ನಿಸುವ ಸ್ವಭಾವ, ತನ್ನ ಪ್ರಶ್ನೆಗಳಿಗೆ ತಾನೇ ಉತ್ತರಹುಡುಕಿಕೊಳ್ಳಬಲ್ಲ ಕಲಿಕಾ ಪರಿಸರ, ಪ್ರಶ್ನೆಗಳ ಮೂಲಕ ಉಂಟಾಗಬಹುದಾದ ಸಂವಾದ-ಚರ್ಚೆಗಳು ತರಗತಿಯ ಭಾಗವಾಗಿ ಮಕ್ಕಳ ವಿಜ್ಞಾನ ಹಬ್ಬವು ಕಲಿಕೆಯ ವಿಧಾನ ಮತ್ತು ಫಲಗಳ ಕುರಿತು ಸಾರ್ವಜನಿಕ ಚರ್ಚೆಯನ್ನು ಉಂಟುಮಾಡಬಲ್ಲ ಸಾಮಾಜಿಕ ವೇದಿಕೆ.
ಉಡುಪಿ ಜಿಲ್ಲೆಯಲ್ಲಿ
ನ. 25, 26 ಹಿರಿಯಡ್ಕ ಕ್ಲಸ್ಟರ್‌ನ ಕೆ.ಪಿ.ಎಸ್. ಹಿರಿಯಡ್ಕ, ಗರಡಿ ಮಜಲು ಕ್ಲಸ್ಟರ್‌ನ ಸ. ಹಿ.ಪ್ರಾ ಶಾಲೆ ಗರಡಿಮಜಲು.
ನ. 27, 28 ಸಾೖಬರಕಟ್ಟೆ ಕ್ಲಸ್ಟರ್‌ನ ಸ.ಹಿ.ಪ್ರಾ. ಶಾಲೆ ಕಾವಡಿ, ವಳಕಾಡು ಕ್ಲಸ್ಟರ್‌ನ ಸ.ಹಿ.ಪ್ರಾ. ಶಾಲೆ ವಳಕಾಡು, ಕೋಟೇಶ್ವರ ಕ್ಲಸ್ಟರ್‌ನ ಕೆ.ಪಿ.ಎಸ್. ಕೋಟೇಶ್ವರ, ಬಿದ್ಕಲ್‌ಕಟ್ಟೆ ಕ್ಲಸ್ಟರ್‌ನ ಸ.ಹಿ.ಪ್ರಾ. ಶಾಲೆ ಬಿದ್ಕಲ್‌ಕಟ್ಟೆ.
ನ. 29, 30 ಸಂತೆಕಟ್ಟೆ ಕ್ಲಸ್ಟರ್‌ನ ಸರಕಾರಿ ಹಿ.ಪ್ರಾ. ಶಾಲೆ ಸಂತೆಕಟ್ಟೆ, ಮುದ್ರಾಡಿ ಕ್ಲಸ್ಟರ್‌ನ ಸರಕಾರಿ ಹಿ.ಪ್ರಾ. ಶಾಲೆ ಮುದ್ರಾಡಿ, ನಾವುಂದ ಕ್ಲಸ್ಟರ್‌ನ ಸರಕಾರಿ ಹಿ.ಪ್ರಾ. ಶಾಲೆ ಬಡಾಕರೆ.
ಡಿ. 2, 3 ಉಪ್ಪು³ಂದ ಕ್ಲಸ್ಟರ್‌ನ ಸರಕಾರಿ ಹಿ.ಪ್ರಾ. ಶಾಲೆ ಕಂಚಿಕಾನ್, ಹೊಸ್ಮಾರು ಕ್ಲಸ್ಟರ್‌ನ ಸ.ಹಿ.ಪ್ರಾ. ಶಾಲೆ ನಲ್ಲೂರು.
ಡಿ. 4, 5 ಬೈಂದೂರು ಕ್ಲಸ್ಟರ್‌ನ ಸರಕಾರಿ ಹಿ.ಪ್ರಾ. ಶಾಲೆ ಬೈಂದೂರು, ಸಾಣೂರು ಕ್ಲಸ್ಟರ್‌ನ ಸರಕಾರಿ ಹಿ.ಪ್ರಾ. ಶಾಲೆ ಪೆರ್ವಾಜೆ.
ಕಲಿಕೆಯಲ್ಲಿ ಸಂಭ್ರಮ
ಮಕ್ಕಳ ವಿಜ್ಞಾನ ಹಬ್ಬದಲ್ಲಿ ಸƒಜನಶೀಲ ಮತ್ತು ಸಂತಸದ ಕಲಿಕೆಗೆ ಪೂರಕವಾದ ಚಟುವಟಿಕೆಗಳನ್ನು ಮಕ್ಕಳು ನಿರ್ವಹಿಸುತ್ತಾರೆ. ಈ ಚಟುವಟಿಕೆಗಳು ಮಕ್ಕಳನ್ನು ಕಲಿಯುವ ಒತ್ತಡದಲ್ಲಿ ನೂಕುವ ಬದಲು ಕಲಿಕೆಯನ್ನು ಸಂಭ್ರಮಿಸುವಂತೆ ಮಾಡಬಲ್ಲವು.
– ಡಾ| ಎಂ. ಟಿ. ರೇಜು, ರಾಜ್ಯ ಯೋಜನಾ ನಿರ್ದೇಶಕ
ಸಮಗ್ರ ಶಿಕ್ಷಣ ಕರ್ನಾಟಕ
ಅವಕಾಶ ಸೃಷ್ಟಿ
ಮಗು ಖುಷಿಪಡುವ ಏಕೈಕ ಉದ್ದೇಶದಿಂದ ಶಾಲೆಗೆ ಹೋಗಬೇಕು. ವಿದ್ಯಾರ್ಥಿಗಳು ಪ್ರಯತ್ನಶೀಲರಾಗುವಂತೆ ಮಾಡುವ ಕಲಿಕೆಯ ಸನ್ನಿವೇಶಗಳನ್ನು ಸೃಷ್ಟಿಸುವ ಮೂಲಕ ತನ್ನ ಸುತ್ತಲಿನ ಭೌತಿಕ, ಸಾಮಾಜಿಕ ಜಗತ್ತನ್ನು ಗ್ರಹಿಸಲು ವಿಜ್ಞಾನ ಹಬ್ಬವು ಅವಕಾಶ ಸೃಷ್ಟಿಸಬಲ್ಲದು.
– ಡಾ| ಪಿ. ವಿ. ಭಂಡಾರಿ, ಮನೋವೈದ್ಯರು ಹಾಗೂ ಅಧ್ಯಕ್ಷರು
ಭಾರತ ಜ್ಞಾನ ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಘಟಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.