Cauvery Issue ನೀರು ಹಂಚಿಕೆ ವಿಚಾರದಲ್ಲಿ ವೈಜ್ಞಾನಿಕ ವರದಿ ಅಗತ್ಯ: ಸಚಿವೆ ಶೋಭಾ


Team Udayavani, Sep 25, 2023, 10:48 PM IST

Cauvery Issue ನೀರು ಹಂಚಿಕೆ ವಿಚಾರದಲ್ಲಿ ವೈಜ್ಞಾನಿಕ ವರದಿ ಅಗತ್ಯ: ಸಚಿವೆ ಶೋಭಾ

ಮಣಿಪಾಲ: ಕಾವೇರಿ ನದಿ ನೀರಿನ್ನು ಆಶ್ರಯಿಸಿರುವ ಬೆಂಗಳೂರು ಸಹಿತ ವಿವಿಧ ಕಡೆಗಳಲ್ಲಿ ಇರುವ ಜನಸಂಖ್ಯೆ, ಕುಡಿಯಲು ಹಾಗೂ ಬೇಸಾಯಕ್ಕೆ ಅಗತ್ಯವಿರುವ ನೀರು ಮತ್ತು ಅಣೆಕಟ್ಟುಗಳಲ್ಲಿ ಶೇಖರಣೆಯಾಗಿರುವ ನೀರಿನ ಲಭ್ಯತೆಯ ವೈಜ್ಞಾನಿಕ ಮಾಹಿತಿಯನ್ನು ರಾಜ್ಯ ಸರಕಾರ ಸಿದ್ಧಪಡಿಸಿಕೊಂಡು ಸುಪ್ರೀಂ ಕೋರ್ಟ್‌, ನದಿ ನೀರು ಹಂಚಿಕೆ ಪ್ರಾಧಿಕಾರಕ್ಕೆ ನೀಡುವ ಮೂಲಕ ವಾದ ಮಂಡಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮಣಿಪಾಲದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದಲೇ ಒಂದು ತಂಡವನ್ನು ಕರ್ನಾಟಕ ಹಾಗೂ ತಮಿಳುನಾಡಿಗೆ ಕಳುಹಿಸಿ ವಸ್ತುಸ್ಥಿತಿಯ ಅಧ್ಯಯನಕ್ಕೆ ಮನವಿ ಮಾಡಿಕೊಂಡಿದ್ದೇವೆ. ಇದು ಎರಡು ರಾಜ್ಯಗಳ ಸಮಸ್ಯೆಯೇ ಹೊರತು, ಭಾರತ-ಪಾಕಿಸ್ಥಾನದ ಸಮಸ್ಯೆಯಲ್ಲ. ಹೀಗಾಗಿ ಬಗೆಹರಿಸಿಕೊಳ್ಳ ಬಹುದು ಎಂದರು.

ರಾಜ್ಯದ ಯಾವುದೇ ತಾಲೂಕಿನಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಹೀಗಾಗಿ ಬರ ಘೋಷಣೆ ಮಾಡಲಾಗಿದೆ. ಅಣೆಕಟ್ಟುಗಳು ಬರಿದಾಗುತ್ತಿವೆ. ಆದ್ದರಿಂದ ಹಳೇ ಲೆಕ್ಕ ಬಿಟ್ಟು ವೈಜ್ಞಾನಿಕ ವರದಿ ಸಿದ್ಧಪಡಿಸಿ ವಾದ ಮಂಡಿಸಬೇಕಾಗಿದೆ. ಪದೇಪದೆ ಕರ್ನಾಟಕ ವಾದದಲ್ಲಿ ಸೋಲಬಾರದು. ಕೇಂದ್ರ ಸರಕಾರ ಸದಾ ಕರ್ನಾಟಕದೊಂದಿಗೆ ಸದಾ ಇರಲಿದೆ ಎಂದರು.

ರಾಜ್ಯ ಸರಕಾರ ವಿಪಕ್ಷ ಅಥವಾ ಕನ್ನಡ ಪರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಯಾರನ್ನೂ ಕೇಳದೇ 15 ಸಾವಿರ ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಬಿಟ್ಟಿದೆ. ವೈಜ್ಞಾನಿಕವಾಗಿ ಸತ್ಯಾಸತ್ಯತೆ ತಿಳಿಯಲು ವರದಿ ಅಗತ್ಯವಿದೆ. ಯಾರಧ್ದೋ ಭಯ ಅಥವಾ ತಮಿಳುನಾಡಿನೊಂದಿಗೆ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ನೀರು ಒದಗಿಸುವುದು ಸರಿಯಲ್ಲ. ತಮಿಳುನಾಡು ಕೂಡ ಅಗತ್ಯಕ್ಕಿಂತ ಹೆಚ್ಚು ನೀರು ಬಳಕೆ ಮಾಡಿಕೊಂಡು ಬೇಸಾಯ ಮಾಡುತ್ತಿದೆ. ಇದು ಅಪಾರ ಎಂದು ಕಿಡಿಕಾರಿದರು.

ಫ್ರೆಂಡ್ಲಿ ಟಾಕ್‌ ಮಾಡಲಿ
ತಮಿಳುನಾಡಿನಲ್ಲಿರುವ ಆಡಳಿತ ಪಕ್ಷವು ಐಎನ್‌ಡಿಐಎ ಜತೆ ಇರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಹಿತ ಪ್ರಮುಖರು ತಮಿಳುನಾಡಿನ ಮುಖ್ಯಮಂತ್ರಿಯವರೊಂದಿಗೆ ಸ್ನೇಹಯುತ ಮಾತುಕತೆ ನಡೆಸಿ, ಕಾವೇರಿ ನೀರನ್ನು ಹೆಚ್ಚುವರಿಯಾಗಿ ಬಿಡಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಬೇಕು. ಈ ರೀತಿಯ ಫ್ರೆàಂಡ್ಲಿ ಟಾಕ್‌ ಆದಷ್ಟು ಬೇಗ ಆರಂಭವಾದರೆ ಉತ್ತಮ ಎಂದರು.

ರಾಜ್ಯ ವೈಜ್ಞಾನಿಕ ವರದಿಯಂತೆ
ವಾದ ಮಂಡಿಸಿದೆ: ಹೆಬ್ಬಾಳ್ಕರ್‌
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಪಾಲಿಸಬೇಕಾಗುತ್ತದೆ. ನೆಲ ಜಲದ ಸಂರಕ್ಷಣೆಯ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ಇನ್ನಷ್ಟು ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ರಾಜ್ಯ ಸರಕಾರ ಎಲ್ಲ ವರದಿಗಳನ್ನು ಇಟ್ಟುಕೊಂಡೇ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದೆ. ರಾಜ್ಯ ಸರಕಾರದ ಬಳಿ ವೈಜ್ಞಾನಿಕ ವರದಿ ಇಲ್ಲ, ವಾದ ಮಂಡಿಸಿಲ್ಲ ಎಂದು ಆರೋಪಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಹೇಗೆ ವಾದ ಮಂಡಿಸಬೇಕು ಎಂಬುದನ್ನು ಹೇಳಿಕೊಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿರುಗೇಟು ನೀಡಿದರು.

ಟಾಪ್ ನ್ಯೂಸ್

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

11

Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು 

fraudd

Udupi: ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ: ಮುಂಜಾಗ್ರತೆಗೆ ಸೂಚನೆ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

1

Manipal: ಹೊಟೇಲ್‌ ಮ್ಯಾನೇಜರ್‌ಗೆ ವಂಚಿಸಿದ ವೈಟರ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

16

Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

15

Blind Chess World C’ships: ವಿಶ್ವ ಅಂಧರ ಚೆಸ್‌: ಪ್ರಶಸ್ತಿ ಸನಿಹಕ್ಕೆ ಲುಬೋವ್‌

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.