ಸಸಿಹಿತ್ಲು, ಪಡುಬಿದ್ರಿ, ಆದ್ರಗೊಳಿಯಲ್ಲಿ ಮುಂದುವರಿದ ಕಡಲ್ಕೊರೆತ
Team Udayavani, Aug 3, 2019, 5:17 PM IST
ಉಡುಪಿ : ಸಸಿಹಿತ್ಲು ಬೀಚ್, ಪಡುಬಿದ್ರಿ, ಕಿರಿಮಂಜೇಶ್ವರದ ಆದ್ರಗೊಳಿ ಪರಿಸರದಲ್ಲಿ ಕಡಲು ಕೊರೆತ ಹೆಚ್ಚಾಗಿದ್ದು, ಭಾರೀ ಗಾಳಿಯೊಂದಿಗೆ ಅಬ್ಬರದ ಅಲೆಗಳು ದಡಕ್ಕೆ ಬಡಿದು ಹಲವಾರು ಮರಗಳು ಕಡಲಿನ ಒಡಲಿಗೆ ಸೇರುತ್ತಿದೆ.
ಸಸಿಹಿತ್ಲುವಿನ ಕೊನೆಯ ಬಸ್ ನಿಲ್ದಾಣದ ಬಳಿಯ ಮುಂಡ ಪ್ರದೇಶದಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದ್ದು, ಸ್ಥಳೀಯ ಸುಮಾರು 10 ಮನೆಗಳ 200 ಮೀ. ಅಂತರದಲ್ಲಿ ಅಲೆಗಳು ಬಡಿಯುತ್ತಿದೆ. ಕಡಲ ಕೊರೆತದಿಂದ ತೆಂಗಿನ ಮರಗಳ ಸಹಿತ ಗಾಳಿ ಮರಗಳು ಕಡಲಿಗೆ ಈಗಾಗಲೇ ಸೇರಿದೆ. ಶನಿವಾರ ಮಧ್ಯಾಹ್ನದ ನಂತರ ಭಾರೀ ಗಾಳಿಯೂ ಬೀಸುತ್ತಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಪ್ರತಿಕ್ರಿಯಿಸಿ ಈ ಭಾಗದಲ್ಲಿ ಕಡಲ ಕೊರೆತಕ್ಕೆ ಮುಂಜಾಗ್ರತೆಗಾಗಿ ಕಲ್ಲುಗಳ ಶಾಶ್ವತ ತಡೆಗೋಡೆ ಇಲ್ಲದಿರುವುದರಿಂದ ಸಮುದ್ರದ ಅಂಚಿನಲ್ಲಿ ಆಳವಾದ ಗುಂಡಿಗಳು ಬಿದ್ದಿದೆ ಇದು ಅಲೆಗಳು ಅಬ್ಬರವಾಗಿ ಮೇಲೇಳಲು ಪ್ರಮುಖ ಕಾರಣವಾಗಿದೆ. ಗಾಳಿಯೂ ಇರುವುದರಿಂದ ಸಮುದ್ರ ಅಬ್ಬರವಾಗಿದೆ ಎಂದು ತಿಳಿಸಿದ್ದಾರೆ.
ಕಿರಿಮಂಜೇಶ್ವರ ಗ್ರಾಮದ ಆದ್ರಗೊಳಿ ಅಲ್ಲಿ ತೀವ್ರ ಕಡಲ ಕೊರೆತ ಮನೆಗಳಿಗೆ ಹಾನಿ ಆಗುತ್ತಿದೆ. ಸ್ಥಳಕೆ ಬೈಂದೂರು ತಹಶೀಲ್ದಾರು ಬಸಪ್ಪ ಪೂಜಾರ್, ತಾಲ್ಲೂಕು ಪಂಚಯಿತ್ ಅಧ್ಯಕ್ಷರು ಶ್ಯಾಮಲಾ ಕುಂದರ, ಗ್ರಾಮ ಪಂಚಯಿತ್ ಉಪಾಧ್ಯಕ್ಷರಾದ ಶೇಖರ ಖಾರ್ವಿ ,ಗ್ರಾಮ ಪಂಚಯಿತ್ ಸದಸ್ಯರಾದ ಕೃಷ್ಣ ಭೇಟಿ ನೀಡಿದರು.
ಬಡಾ ಗ್ರಾಮ ಉಚ್ಚಿಲ ಮತ್ತು ಪಡುಬಿದ್ರಿ ಗಳಲ್ಲಿ ಸಮುದ್ರ ಕೊರೆತ ಉಲ್ಬಣಿಸಿದ್ದು ಬಡಾ ಗ್ರಾಮದ ಸುಮಾರು 100 ಮೀಟರ್ ಪ್ರದೇಶಕ್ಕೆ ಬಂಡೆಗಲ್ಲುಗಳನ್ನು ಹಾಕಲಾಗುತ್ತಿದೆ. ಕೊರೆತ ಪ್ರದೇಶಗಳ ವೀಕ್ಷಣೆಗೆ ಕಾಪು ಶಾಸಕ ಲಾಲಾಜಿ ಮೆಂಡನ್ ಆಗಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.