ಕುತ್ಪಾಡಿ ಪಡುಕರೆ ಕಡಲ್ಕೊರೆತ; ಕಾಂಕ್ರೀಟ್ ರಸ್ತೆ ಬಿರುಕು
Team Udayavani, Jun 29, 2017, 3:55 AM IST
ಮಲ್ಪೆ: ಕುತ್ಪಾಡಿ ಪಡುಕರೆ ಸಮೀಪ ರವಿವಾರ ಕಾಣಿಸಿಕೊಂಡಿದ್ದ ಕಡಲಕೊರೆತ ಮಂಗಳವಾರದವರೆಗೂ ಮುಂದುವರಿದಿದ್ದು ದಿನೇದಿನೇ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೇವಲ ಮೂರೇ ದಿನಗಳಲ್ಲಿ ಸಮುದ್ರ ಈ ಭಾಗದಲ್ಲಿ ಸುಮಾರು 60- 70 ಮೀಟರ್‌ನಷ್ಟು ಭೂ ಪ್ರದೇಶವನ್ನು ನುಂಗಿ ಹಾಕಿದ್ದು ಕಾಂಕ್ರಿಟ್ ರಸ್ತೆಯನ್ನು ಆಪೋಶನ ತೆಗೆದುಕೊಳ್ಳಲು ಮುಂದಾಗಿದೆ. ಕಡಲ ದಂಡೆಯಲ್ಲಿದ್ದ ಮರಗಳು ಸಮುದ್ರಪಾಲಾಗಿವೆ. ದೈತ್ಯಗಾತ್ರದ ಅಲೆಗಳು ಎತ್ತರದಿಂದ ಅಪ್ಪಳಿಸಿ ಕಾಂಕ್ರಿಟ್ ರಸ್ತೆಯನ್ನು ದಾಟಿ ಬಂದು ತೋಟದ ಮೂಲಕ ಹರಿದು ಸಮೀಪದ ಹೊಳೆಯನ್ನು ಸೇರುತ್ತಿವೆ. ಸಮೀಪದ ಮೀನುಗಾರ ಮನೆಗಳು ಅಪಾಯದಲ್ಲಿದ್ದು ಉಪ್ಪುನೀರು ಮನೆಯ ಸುತ್ತ ಆವರಿಸುತ್ತಿದೆ.
ಬಸ್ ಸಂಚಾರ ಸ್ಥಗಿತ
ರಕ್ಕಸಗಾತ್ರ ಅಲೆಯ ಹೊಡೆತಕ್ಕೆ ಸುಮಾರು 50 ಮೀಟರ್ ಉದ್ದಕ್ಕೆ ರಸ್ತೆಯ ಅಡಿಭಾಗ ಕೊರೆದು ಹೋಗಿದ್ದು ಅಲ್ಲಲ್ಲಿ ರಸ್ತೆ ಬಿರುಕು ಬಿಟ್ಟಿದ್ದು ಸಂಚಾರ ಕಡಿದುಕೊಳ್ಳುವ ಭೀತಿ ಎದುರಾಗಿದೆ. ಇದರಿಂದಾಗಿ ಮಂಗಳವಾರ ಬಸ್ ಸಂಚಾರ ಸ್ಥಗಿತಗೊಂಡಿದೆ. ದ್ವಿಚಕ್ರ ವಾಹನ ಬಿಟ್ಟರೆ ಯಾವುದೇ ದೊಡ್ಡ ವಾಹನಗಳು ಸಂಚರಿಸುತ್ತಿಲ್ಲ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾಪು, ಕೈಪುಂಜಾಲು ಮಟ್ಟುವಿನಿಂದ ಮಲ್ಪೆ ಕಡೆಗೆ ಬರುವ ಜನರಿಗೆ ತುಂಬ ತೊಂದರೆ ಉಂಟಾಗಿದೆ. ಗಾಳಿಯ ವೇಗ ಇದೇ ರೀತಿ ಮುಂದುವರಿದರೆ ಅಲೆ ಅಬ್ಬರಕ್ಕೆ ರಸ್ತೆ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಶಿವರಾಮ ಪುತ್ರನ್ ತಿಳಿಸಿದ್ದಾರೆ.
ಮಾರ್ಯ ಬೀಳುವುದರಿಂದ
ಸಮುದ್ರದಲ್ಲಿ ಒಂದೊಂದು ಕಡೆ ಒಂದೊಂದು ಸಲ ಮಾರ್ಯ ಬೀಳುತ್ತದೆ. (ಮಾರ್ಯ = ಸಮುದ್ರ ತಳದಲ್ಲಿ ಮೂರು ಕಡೆಗಳಿಂದ ಏಕಕಾಲದಲ್ಲಿ ತೆರೆಗಳು ಬಂದು ಮರಳು ಎದ್ದು ಹೋಗುವ ಪ್ರಕ್ರಿಯೆ – ಸ್ಥಳೀಯ ಭಾಷೆ). ಮಾರ್ಯ ಬಿದ್ದ ಜಾಗದ ಕೆಲವು ಕಿ.ಮೀ. ಉದ್ದಕ್ಕೆ ಕಡಲಕೊರೆತ ಕಂಡುಬರುತ್ತದೆ. ಸಮುದ್ರದಲ್ಲಿ ಮೂರು ಕಡೆಗಳಿಂದ ಆಳವಾಗಿ ಬರುವ ತೆರೆಗಳು ಒಂದಾಗಿ ಅತೀ ವೇಗದಲ್ಲಿ ಬಂದು ದಡಕ್ಕೆ ಅಪ್ಪಳಿಸಿ ಅಷ್ಟೇ ವೇಗದಲ್ಲಿ ಮರಳನ್ನು ಕೊರೆಯುತ್ತಾ ಸಮುದ್ರ ಸೇರುತ್ತದೆ. ಇದಕ್ಕೆ ಸ್ಥಳೀಯರು ಮಾರ್ಯ ಬೀಳುವುದು ಎನ್ನುತ್ತಾರೆ. ಕೆಲವು ದಿನಗಳವರೆಗೆ ಒಂದೇ ಕಡೆಯಲ್ಲಿರುತ್ತದೆ. ಇದಕ್ಕೆ ಯಾವುದೇ ದೋಣಿ ಸಿಲುಕಿಕೊಂಡರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯರಾದ ಪ್ರಭಾಕರ ಸಿ. ಕೋಟ್ಯಾನ್ ಅವರು. ರವಿವಾರದಿಂದ ಕೊರೆತ ಉಂಟಾದ ಜಾಗಕ್ಕೆ ಕಲ್ಲು ಹಾಕುವ ಪ್ರಕ್ರಿಯೆ ನಡೆಯುತ್ತಿದ್ದರೂ ರಕ್ಕಸ ಗಾತ್ರದ ಅಲೆಗಳಿಂದಾಗಿ ಕಲ್ಲುಗಳು ಒಂದೊಂದಾಗಿ ಜಾರಿ ಸಮುದ್ರ ಸೇರುತ್ತಿವೆ. ವರ್ಷಂಪ್ರತಿ ಕಡಲ ಕೊರೆತಕ್ಕೆ ತಾತ್ಕಾಲಿಕ ಪರಿಹಾರವೆಂದು ಸಮುದ್ರ ಬದಿಗೆ ಬಂಡೆಗಳನ್ನು ಹಾಕಲಾಗುತ್ತದೆ. ಆದರೆ ಅವೈಜ್ಞಾನಿಕವಾಗಿ ಕಲ್ಲುಗಳನ್ನು ಹಾಕಿರುವ ಪರಿಣಾಮ ಆ ಕಲ್ಲುಗಳೆಲ್ಲಾ ಅಲೆಯ ಹೊಡೆತಕ್ಕೆ ಕೊಚ್ಚಿ ಹೋಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.