ಸೀ ವಾಕ್ ಆಕರ್ಷಣೆ; ಹೆಚ್ಚಿದ ಜನದಟ್ಟಣೆ
ಮಲ್ಪೆ ಬೀಚ್‌ನಲ್ಲಿ ನೀರಿಗಿಳಿಯಲು ಸಾಧ್ಯವಿಲ್ಲದ್ದರಿಂದ ಸೀ ವಾಕ್‌ನತ್ತ ಜನರ ದಂಡು
Team Udayavani, Jul 8, 2019, 5:57 AM IST
ಮಲ್ಪೆ: ಮುಂಗಾರು ಕ್ಷೀಣಗೊಂಡಿದ್ದರೂ, ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ನೀರಿಗಿಳಿಯುವಂತಿಲ್ಲ. ಆದ್ದರಿಂದ ಕಡಲ ಸೌಂದರ್ಯ ವೀಕ್ಷಿಸಲು ಜನರು ಸೀ ವಾಕ್‌ನತ್ತ ಲಗ್ಗೆ ಹಾಕುತ್ತಿದ್ದಾರೆ. ವಾರಾಂತ್ಯದಲ್ಲಂತೂ ಇಲ್ಲಿ ಜನದಟ್ಟಣೆ ಉಂಟಾಗುತ್ತಿದೆ.
ಮಲ್ಪೆ ಬೀಚ್‌ನಲ್ಲಿ 20 ಅಡಿಗಳಷ್ಟು ದೂರದಲ್ಲಿ ನೆಟ್ ಅಳವಡಿಸಲಾಗಿದ್ದು, ದೂರದಲ್ಲೇ ನಿಂತು ಸಮುದ್ರ ನೋಡಬೇಕಾಗಿದೆ. ಇದರಿಂದ ಸೀ ವಾಕ್‌ಗೆ ಜನ ಹೋಗುತ್ತಿದ್ದಾರೆ. ಸ್ಥಳೀಯರೂ ಸೀ ವಾಕ್ ಸೌಂದರ್ಯಕ್ಕೆ ಮನಸೋತಿದ್ದಾರೆ.
ದೈತ್ಯ ಅಲೆಗಳ ಆಕರ್ಷಣೆ
ಸೀ ವಾಕ್ ವೇನಲ್ಲಿ ಸಂಚರಿಸುವ ಪ್ರವಾಸಿಗರಿಗೆ ಸಮುದ್ರದ ವಿಹಂಗಮ ನೋಟದ ದರ್ಶನವಾಗುತ್ತದೆ. ಅಲ್ಲದೆ ಮಳೆಗಾಲದಲ್ಲಿ ಸಮುದ್ರದ ಅಲೆಗಳ ಅಬ್ಬರ ಜಾಸ್ತಿ ಇರುವುದರಿಂದ ದೈತ್ಯ ಅಲೆಗಳು ಬಂಡೆಕಲ್ಲಿಗೆ ಅಪ್ಪಳಿಸುವ ರಮಣೀಯ ದೃಶ್ಯವನ್ನು ಆಸ್ವಾದಿಸುವುದೇ ಒಂದು ಸೊಬಗು.
ಐಲ್ಯಾಂಡ್ ನಿಷೇಧದ ಬಳಿಕ ಮತ್ತಷ್ಟು ಹೆಚ್ಚು
ಸೀ ವಾಕ್ ಆರಂಭಗೊಂಡ ದಿನದಿಂದಲೂ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ರಜಾ ದಿನಗಳಲ್ಲಿ ಸಂಜೆ ವೇಳೆ ನೂಕು ನುಗ್ಗಲು ಇರುತ್ತದೆ. ಸೈಂಟ್‌ಮೇರೀಸ್ ಬೋಟಿನ ಯಾನ ನಿಷೇಧವಾದ ಬಳಿಕ ಸೀವಾಕ್ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಳಗೊಂಡಿದೆ. ಕಳೆದ ಮಳೆಗಾಲಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಜನ ಇಲ್ಲಿಗೆ ಬರುತ್ತಿದ್ದಾರೆ. ಇದೀಗ ನಿತ್ಯ 600ರಿಂದ 700 ಮಂದಿ ಬಂದರೆ ವಾರಾಂತ್ಯ 2,000 ಗಡಿ ದಾಟುತ್ತದೆ.
ಮೀನಿಗೆ ಗಾಳ ಹಾಕುವ ಮೋಜು
ಸೀ ವಾಕ್‌ನ ಎರಡೂ ಬದಿಯಲ್ಲಿ ಬಂಡೆಕಲ್ಲಿನಲ್ಲಿ ಕುಳಿತು ಮೀನಿಗೆ ಗಾಳ ಹಾಕುವ ದೃಶ್ಯ ಸರ್ವೇ ಸಾಮಾನ್ಯ ಇಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಗಾಳ ಹಾಕುವವರ ದಂಡೇ ಇರುತ್ತದೆ. ಸೀ ವಾಕ್ ನಿರ್ಮಾಣ ಆಗುವ ಮೊದಲು ಕೂಡ ಇಲ್ಲಿನ ಬ್ರೇಕ್ ವಾಟರ್‌ನಲ್ಲಿ ಗಾಳ ಹಾಕುತ್ತಿದ್ದರು.
ಭೇಟಿ ನೀಡುವವರ
ಸಂಖ್ಯೆ ಹೆಚ್ಚಳ
ಮಳೆಯ ಬಿಡುವಿನಿಂದಾಗಿ ಜನ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಸಮುದ್ರದ ದೊಡ್ಡ ದೊಡ್ಡ ಅಲೆಗಳು ಬಂಡೆಗೆ ಬಡಿಯುವ ದೃಶ್ಯ ರೋಮಾಂಚನವಾಗಿದೆ. ಜತೆಗೆ ಇಲ್ಲಿ ಗಾಳ ಹಾಕಿ ಮೀನು ಹಿಡಿಯುವುದನ್ನೂ ನೋಡಬಹುದು.
– ಚೇತನ್ ಬಾಪುತೋಟ, ಸ್ಥಳೀಯರು
ಹೆಚ್ಚು ಖುಷಿ
ಸಮುದ್ರವನ್ನು ನೋಡಲು ಕುಟುಂಬದೊಂದಿಗೆ ಮಲ್ಪೆ ಬೀಚ್‌ಗೆ ಬಂದಿದ್ದೆವು, ಆದರೆ ಈಗ ಅಲ್ಲಿ ನೀರಿಗೆ ಇಳಿಯಲು ಬಿಡುತ್ತಿಲ್ಲ. ದೂರದಲ್ಲಿ ನಿಂತು ನೋಡಬೇಕು. ಆದರೆ ಸೀ ವಾಕ್‌ಗೆ ಬಂದರೆ ಸಮುದ್ರದೊಳಗೆ ಬಂದ ಹೊಸ ಅನುಭವವಾಗುತ್ತಿದೆ. ಮಕ್ಕಳಿಗೂ ಖುಷಿಯಾಗುತ್ತದೆ.
– ಶ್ರೇಯಾ ಚೇತನ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.