ಕಡಲ್ಕೊರೆತ: ಅಪಾಯದಲ್ಲಿ ಕೈಪುಂಜಾಲು ವಿಶ್ರಾಂತಿ ಕಟ್ಟೆ, ಗೆಸ್ಟ್ ಹೌಸ್
Team Udayavani, Jul 15, 2018, 6:00 AM IST
ಕಾಪು: ಪುರಸಭಾ ವ್ಯಾಪ್ತಿಯ ಕೈಪುಂಜಾಲು – ಕೆಂಪುಗುಡ್ಡೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಜ್ವಾಲಿ ಫ್ರೆಂಡ್ಸ್ ವಿಶ್ರಾಂತಿ ಕಟ್ಟೆ, ಗೆಸ್ಟ್ ಹೌಸ್ ಸಹಿತ ಹಲವಾರು ತೆಂಗಿನ ಮರಗಳು ಅಪಾಯದ ಸ್ಥಿತಿಯಲ್ಲಿವೆ.
ಕೈಪುಂಜಾಲು ಕೆಂಪುಗುಡ್ಡೆ ಜ್ವಾಲಿ ಫ್ರೆಂಡ್ಸ್ ಕಟ್ಟೆ, ಅದರ ಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜ್ಯೋತಿ ಶೆಟ್ಟಿ ಎಂಬವರಿಗೆ ಸೇರಿದ ಗೆಸ್ಟ್ ಹೌಸ್‌ನ ಆವರಣ ಗೋಡೆ ಕುಸಿಯುವ ಭೀತಿಯಿದೆ. ಆವರಣ ಗೋಡೆ ಕುಸಿದರೆ ಇಡೀ ಗೆಸ್ಟ್ ಹೌಸ್ ಧರಾಶಾಯಿಯಾಗುವ ಸಾಧ್ಯತೆಯಿದೆ. ಅದರೊಂದಿಗೆ ದಯಾನಂದ ಸುವರ್ಣ, ಇಂದಿರಾ ಕಾಂಚನ್, ಸುಂದರಿ ಕಾಂಚನ್ ಮತ್ತು ರಮೇಶ್ ಸುವರ್ಣ ಅವರಿಗೆ ಸೇರಿದ ಹತ್ತಾರು ತೆಂಗಿನ ಮರ ,ಗಾಳಿ ಮರಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
ಕೈಪುಂಜಾಲು, ಮಟ್ಟು ಪರಿಸರದ ಕಡಲ್ಕೊರೆತದ ಪ್ರದೇಶಗಳಿಗೆ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಪುರಸಭಾ ಸದಸ್ಯೆ ರಮಾ ಶೆಟ್ಟಿ, ಕಾಪು ತಹಶೀಲ್ದಾರ್ ಗುರುಸಿದ್ಧಯ್ಯ, ಬಂದರು ಇಲಾಖೆಯ ಜಯರಾಜ್, ಮೀನುಗಾರಿಕೆ ಇಲಾಖೆಯ ಕಿರಣ್ ಮೊದಲಾದವರು ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.
ಸ್ಥಳೀಯರಾದ ಚಂದ್ರಶೇಖರ್ ಕಾಂಚನ್, ಪೂರ್ಣಿಮಾ ಕಾಂಚನ್, ನೇತ್ರಾವತಿ, ಜಗದೀಶ್ ಶ್ರೀಯಾನ್, ಸಂತೋಷ್ ಕಾಂಚನ್, ಮಾಧವ ಮೊದಲಾದವರು ಕಡಲ್ಕೊರೆತ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ, ತಾತ್ಕಾಲಿಕ ತಡೆಗೋಡೆ ರಚಿಸಿಕೊಡುವಂತೆ ಶಾಸಕರು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಡಿಸಿಗೆ ಮನವಿ
ಕೈಪುಂಜಾಲು,ಮಟ್ಟು ಪ್ರದೇಶದಲ್ಲಿನ ಕಡಲ್ಕೊರೆತ ಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪ ನಿಧಿ ಬಳಸಿ ಕೊಂಡು ತುರ್ತು ಕಾಮಗಾರಿ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳಿಂದಲೂ ಪೂರಕ ಸ್ಪಂದನೆ ದೊರಕಿದ್ದು,ತುರ್ತಾಗಿ ಇಲಾಖಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟು,ಪರಿಶೀಲನೆಗೆ ಸೂಚನೆ ನೀಡಿದ್ದಾರೆ. ಕರಾವಳಿಯ ಕಡ್ಕೊರೆತದ ಬಗ್ಗೆ ಸರಕಾರದ ಮುಂದೆ ಬಜೆಟ್ ಅಧಿವೇಶನದ ನಡುವೆಯೂ ವಿಷಯ ಮಂಡಿಸಲಾಗಿದ್ದು, ತುರ್ತು ಪರಿಹಾರ ಕಾರ್ಯಾಚರಣೆ ನಡೆಸುವ ಸರಕಾರದಿಂದಲೂ ಭರವಸೆ ದೊರಕಿದೆ.
– ಲಾಲಾಜಿ ಆರ್.ಮೆಂಡನ್,ಶಾಸಕರು ಕಾಪು
ವರದಿ ಮಂಡನೆ
ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿದ್ದು, ಇಲ್ಲಿನ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಪ್ರಾಕೃತಿಕ ವಿಕೋಪ ಅಥವಾ ಜಿಲ್ಲಾಧಿಕಾರಿಯವರ ವಿಶೇಷ ಅನುದಾನದಿಂದ ತಾತ್ಕಾಲಿಕ ತಡೆಗೋಡೆ ರಚನೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಆದಷ್ಟು ಶೀಘ್ರ ಇಲ್ಲಿ ತಾತ್ಕಾಲಿಕ ತಡೆಗೋಡೆ ರಚನೆಗೆ ಯೋಜನೆ ರೂಪಿಸುತ್ತೇವೆ.
– ಜಯರಾಜ್,ಬಂದರು ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.