ದ್ವಿತೀಯ ಪಿಯುಸಿ ಫಲಿತಾಂಶ: ಮತ್ತೆ ಕರಾವಳಿಗೆ ಅಗ್ರಸ್ಥಾನ
ಮತ್ತೆ ಮೊದಲ ಸ್ಥಾನಕ್ಕೇರಿದ ಉಡುಪಿ ಜಿಲ್ಲೆ
Team Udayavani, Apr 6, 2019, 6:04 AM IST
ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಈ ಬಾರಿ ಶೇ. 92.02 ಫಲಿತಾಂಶ ಗಳಿಸಿರುವ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಕಳೆದ ಬಾರಿ ಶೇ. 90.67ರಷ್ಟು ಫಲಿತಾಂಶ ಪಡೆದಿದ್ದ ಜಿಲ್ಲೆ ಈ ಬಾರಿ ಶೇ. 1.53 ಹೆಚ್ಚು ಫಲಿತಾಂಶ ಪಡೆದು ಮುನ್ನಡೆ ಸಾಧಿಸಿದೆ.
15,397 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 7,933 ಹುಡುಗಿಯರು ಮತ್ತು 7,464 ಮಂದಿ ಹುಡುಗರು. ಅವರಲ್ಲಿ ಒಟ್ಟು 13,485 ಮಂದಿ ತೇರ್ಗಡೆಯಾಗಿದ್ದಾರೆ. ನಿರೀಕ್ಷೆಯಂತೆ ಹುಡುಗಿಯರದೇ ಮೇಲುಗೈ.
ಪ್ರತಿ ವರ್ಷ ಪ.ಪೂ. ಪರೀಕ್ಷೆಯಲ್ಲಿ ಉಡುಪಿ ಮತ್ತು ದ.ಕ. ಜಿÇÉೆಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಅನೇಕ ಬಾರಿ ಪ್ರಥಮ/ ದ್ವಿತೀಯ ಸ್ಥಾನವನ್ನು ಅದಲುಬದಲು ಮಾಡಿಕೊಂಡಿವೆ.
ಉಡುಪಿ ಜಿಲ್ಲೆಯು 2006, 2010, 2011, 2013, 2016, 2017ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದಿತ್ತು. 2005, 2007, 2008, 2009, 2012, 2014, 2015, 2016, 2018ರಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ ಉಡುಪಿ ಜಿಲ್ಲೆ ಈ ಬಾರಿ ಮತ್ತೆ ಪ್ರಥಮ ಸ್ಥಾನದೊಂದಿಗೆ ಗತವೈಭವವನ್ನು ಮರುಸ್ಥಾಪಿಸಿದೆ. ಜಿಲ್ಲೆ 2013-14ರಲ್ಲಿ ಶೇ.90.93, 2014-15ರಲ್ಲಿ 92.32 ಶೇ., 2016-17ರಲ್ಲಿ ಶೇ. 90.01, 2017-18ರಲ್ಲಿ 90.67ರಲ್ಲಿ ಫಲಿತಾಂಶ ದಾಖಲಿಸಿತ್ತು.
ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ ಮತ್ತು ಹೆಬ್ರಿ ಎಸ್.ಆರ್. ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ರಾಯೀಸಾ ಅವರು ವಿಜ್ಞಾನ ವಿಭಾಗದಲ್ಲಿ 592 ಅಂಕ ಪಡೆಯುವ ಮೂಲಕ ರಾಜ್ಯದಲ್ಲಿ 3ನೇ ಸ್ಥಾನ ಹಂಚಿಕೊಂಡಿದ್ದಾರೆ.ಜಿಲ್ಲೆಯು ರಾಜ್ಯದಲ್ಲಿಯೇ ಅತ್ಯುತ್ತಮ ಫಲಿತಾಂಶ ದಾಖಲಿಸಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಹರ್ಷ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸಾಧನೆ
15 ವರ್ಷಗಳಲ್ಲಿ ಏಳು ವರ್ಷಗಳನ್ನು ಬಿಟ್ಟು ಉಳಿದೆಲ್ಲ ವರ್ಷಗಳಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಇದುವರೆಗೆ ಪ್ರಥಮ, ದ್ವಿತೀಯ ಸ್ಥಾನ ಬಿಟ್ಟು ಅದಕ್ಕಿಂತ ಕೆಳಗೆ ಹೋಗದೆ ಇರುವುದೂ ವಿಶಿಷ್ಟವಾಗಿದೆ. ದ್ವಿತೀಯ ಸ್ಥಾನ ಬರುವಾಗಲೂ ದ.ಕ. ಜಿಲ್ಲೆಗಿಂತ ಬಹಳ ಅತ್ಯಲ್ಪ ಅಂತರದ ಕಡಿಮೆ ಫಲಿತಾಂಶ ಬಂದಿರುವುದು ಗೋಚರವಾಗುತ್ತದೆ.
ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದು ಕೊಂಡಿದೆ. ಶಿಕ್ಷಣ ಸಂಸ್ಥೆ, ಶಿಕ್ಷಕರ ಹಾಗೂ ಪೋಷಕರ, ಸಾರ್ವಜನಿಕರ ಸಹಕಾರದಿಂದ ಉತ್ತಮ ಫಲಿತಾಂಶ ಪಡೆಯು ವಂತಾಗಿದೆ. ಈ ಬಾರಿ ಪ್ರಥಮ ಸ್ಥಾನ ಪಡೆಯ ಲೇ ಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನೂ ನೀಡಲಾಗಿತ್ತು.
– ಸುಬ್ರಹ್ಮಣ್ಯ ಜೋಷಿ, ಡಿಡಿಪಿಯು, ಉಡುಪಿ
ಎರಡನೇ ಸ್ಥಾನಕ್ಕಿಳಿದ ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಳೆದ ವರ್ಷ ಪ್ರಥಮ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಎರಡನೇ ಸ್ಥಾನಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು 38,069 ಮಂದಿ ವಿದ್ಯಾರ್ಥಿಗಳಲ್ಲಿ 33,088 ಮಂದಿ ಉತ್ತೀರ್ಣರಾಗಿದ್ದು, ಶೇ. 90.91 ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳು ದ.ಕ. ಜಿಲ್ಲೆಯ ಪಾಲಾಗಿದೆ.
ಮೂಡಬಿದಿರೆ ಆಳ್ವಾಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಓಲ್ವಿಟಾ ಅನ್ಸಿಲ್ಲಾ ಡಿ’ಸೋಜಾ ಹಾಗೂ ಅಳಿಕೆ ಸತ್ಯಸಾಯಿ ಲೋಕಸೇವಾ ಪ.ಪೂ. ಕಾಲೇಜಿನ ಶ್ರೀಕೃಷ್ಣ ಶರ್ಮ ಕೆ. 596 ಅಂಕ ಗಳಿಸಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದರೆ, ಕೊಡಿಯಾಲ್‌ಬೈಲ್ ಕೆನರಾ ಪ.ಪೂ. ಕಾಲೇಜು ಶ್ರೀಯಾ ಶೆಣೈ 595 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾರೆ. ಪುತ್ತೂರು ಸೈಂಟ್ ಫಿಲೋಮಿನ ಪ.ಪೂ. ಕಾಲೇಜಿನ ಸ್ವಸ್ತಿಕ್ ಪಿ. 594 ಅಂಕ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಜಾಗೃತಿ ಕೆ. ನಾಯಕ್ 592 ಅಂಕಗಳೊಂದಿಗೆ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದರೆ, ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಾದ ಪ್ರಥಮ್ ಎನ್. ಹಾಗೂ ಶಮಿತಾ ಕುಮಾರಿ ಎಸ್. 591 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ.
ಶೇಕಡಾವಾರು ಫಲಿತಾಂಶದಲ್ಲಿ ಇಳಿಕೆ
2013ರಿಂದ 2018ರ ವರೆಗಿನ ದ್ವಿತೀಯ ಪಿಯುಸಿ ಫಲಿತಾಂಶದ ಪಟ್ಟಿ ಪರಿಶೀಲಿಸಿದರೆ ಅವಿಭಜಿತ ದ.ಕ. ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಕಾಯ್ದುಕೊಂಡಿರುವುದು ವಿಶೇಷ. ದ.ಕ. ಜಿಲ್ಲೆಗೆ 2013ರಲ್ಲಿ ಶೇ. 91.76 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ, 2014, 2015, 2016ರಲ್ಲಿ ಕ್ರಮವಾಗಿ ಶೇ. 86.4, ಶೇ. 93.09, ಶೇ. 90.48 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ, 2017ರಲ್ಲಿ ಶೇ. 89. 92 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ, 2018ನೇ ಸಾಲಿನ ಫಲಿತಾಂಶದಲ್ಲಿ ಶೇ. 91.49 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಹಾಗೂ ಈ ಬಾರಿ ಶೇ. 90.91 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಲಭಿಸಿದೆ.
ದ.ಕ. ಜಿಲ್ಲೆಯಲ್ಲಿ ಪಿಯುಸಿಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಯತ್ನಗಳನ್ನು ನಡೆಸಲಾಗಿದೆ. ಸ್ಥಾನದಲ್ಲಿ ಏರಿಳಿಕೆ ಸಹಜ. ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ಜಿಲ್ಲೆಗೆ ಮೊದಲ ನಾಲ್ಕು ಸ್ಥಾನ ಬಂದಿರುವುದು ಉತ್ತಮ ಸಾಧನೆಯೇ ಆಗಿದೆ.
-ಎಲ್ವಿàರಾ ಫಿಲೋಮಿನಾ,
ಪ್ರಭಾರ ಉಪ ನಿರ್ದೇಶಕಿ,ದ.ಕ. ಜಿಲ್ಲಾ ಪ.ಪೂ. ಶಿಕ್ಷಣ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.