ಕಾವ್ಯಗಳು ಆತ್ಮವಿಶ್ವಾಸ ಮೂಡಿಸಲಿ : ಡಾ| ಹಂಪನಾ
Team Udayavani, Jun 9, 2018, 4:10 AM IST
ಉಡುಪಿ: ಕಾವ್ಯಗಳು ಸೋತು ಹೋಗಿರುವ ಜೀವಗಳಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕೇ ವಿನಾ ಹತಾಶರನ್ನಾಗಿಸಬಾರದು. ಮನಸ್ಸು- ಮನುಷ್ಯರನ್ನು ಒಂದುಗೂಡಿಸುವ ಸೇತುವೆ ಕಾವ್ಯವಾಗಬೇಕು ಎಂದು ಹಿರಿಯ ವಿದ್ವಾಂಸ ಡಾ| ಹಂಪ ನಾಗರಾಜಯ್ಯ ಹೇಳಿದರು. ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಜರಗಿದ ಸಮಾರಂಭದಲ್ಲಿ ಮಣಿಪಾಲ ಮಾಹೆಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ವತಿಯಿಂದ ನೀಡಲಾದ ‘ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.
ಸೇಡಿಯಾಪು ಪ್ರಶಸ್ತಿ ಶಿಖರ ಪ್ರಾಯವಾದುದು. ಅದು ನನಗೆ ಸಂದಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದರು. ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಮುಖ್ಯ ಅತಿಥಿಯಾಗಿದ್ದರು. ಹಿರಿಯ ಲೇಖಕ ಪ್ರೊ| ತಾಳ್ತಜೆ ವಸಂತ ಕುಮಾರ್ ಅಭಿನಂದನ ಮಾತುಗಳನ್ನಾಡಿದರು. ಹಿರಿಯ ವಿದ್ವಾಂಸ ಪ್ರೊ| ಕೆ.ಪಿ. ರಾವ್ ‘ಸೇಡಿಯಾಪು ಕಥಾ ಸಾಹಿತ್ಯ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಶಸ್ತಿ ಸಮಿತಿಯ ಡಾ| ಎಸ್.ಜೆ. ಭಟ್ ಉಪಸ್ಥಿತರಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ| ವರದೇಶ ಹಿರೇಗಂಗೆ ಸ್ವಾಗತಿಸಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಪುತ್ತಿ ವಸಂತ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸುಷ್ಮಿತಾ ಎ. ವಂದಿಸಿದರು.
ಬಳಕೆ ನಿಲ್ಲಲಿ
ಎಲ್ಲರಿಗೂ ಅವರವರ ಧರ್ಮದ ಪ್ರಕಾರ ಪ್ರಾರ್ಥಿಸುವ ಹಕ್ಕಿದೆ. ಆದರೆ ದೇವಾಲಯ- ಪ್ರಾರ್ಥನಾಲಯಗಳಲ್ಲಿ ಧ್ವನಿವರ್ಧಕ ಬಳಕೆ ನಿಲ್ಲಿಸಬೇಕು. ದೇಶದಲ್ಲಿ ಇದ್ದ ಮೇಲೆ ಎಲ್ಲರೂ ರಾಷ್ಟ್ರಗೀತೆ ಹಾಡಲೇಬೇಕು. ಹಿಂದೂ ದೇಶ ಎಂದಿಗೂ ಹೋಳಾಗಬಾರದು. ವಂದೇ ಮಾತರಂ ಮೊಳಗುತ್ತಿರಲಿ; ಸಮನ್ವಯದ ಹಣತೆ ನಿತ್ಯ ಬೆಳಗುತ್ತಿರಲಿ ಎಂದು ಡಾ| ಹಂಪನಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.