ಸೇನಾಪುರ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಆಗ್ರಹಿಸಿ ಪ್ರತಿಭಟನೆ
Team Udayavani, Mar 22, 2018, 6:40 AM IST
ಕುಂದಾಪುರ: ಸೇನಾ ಪುರದಲ್ಲಿ ಮೂರು ಲೈನ್ ಕಂಬಿಗಳಿದ್ದರೂ ಇಲಾಖೆಯು ಸೇನಾಪುರದ ಸುತ್ತ ಮುತ್ತಲ 26 ಗ್ರಾಮಗಳ ಜನರಿಗೆ ಅನುಕೂಲವಾಗುವಂತೆ ಎಕ್ಸ್ ಪ್ರಸ್ ಪ್ರಸ್ ರೈಲು ನಿಲುಗಡೆ ಮಾಡದಿರುವುದು ಖಂಡನೀಯ ಎಂದು ಸಿಪಿಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಕುಂದಾಪುರ ತಾಲೂಕು ಸೇನಾ ಪುರ ರೈಲು ನಿಲ್ದಾಣದಲ್ಲಿ ಎಲ್ಲ ರೈಲು ಗಳನ್ನು ನಿಲುಗಡೆಗೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಅವರು ಮಾತನಾಡಿದರು.
ಸರ್ವಾಂಗೀಣ ಅಭಿವೃದ್ಧಿ ಇಲ್ಲ
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜನರನ್ನು ರೈಲು ಸೇವೆಯಿಂದ ವಂಚಿತರನ್ನಾಗಿಸಿದೆ. ಬಿಜೆಪಿ, ಕಾಂಗ್ರೆಸ್‌ನ ಸಂಸದರು, ಶಾಸಕರು ಇದಕ್ಕೆ ನೇರ ಹೊಣೆಗಾರರು. ಈ ಎರಡೂ ಪಕ್ಷಗಳೂ ಜಿಲ್ಲೆಯ ಕೆಲವೇ ಜನರ ಅಭಿವೃದ್ಧಿಯ ಕಾಳಜಿ ವಹಿಸುತ್ತಿದ್ದು ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಿಲ್ಲ ಎಂದ ಅವರು 26 ಗ್ರಾಮಗಳ ನೂರಾರು ಜನರು ದೂರದ ಮುಂಬೈ, ಗೋವ, ಕಾರವಾರ, ಬೆಂಗಳೂರು, ಮೈಸೂರುಗಳಲ್ಲಿ ವ್ಯವಹಾರ ನಡೆಸು ತ್ತಿದ್ದವರ ಬಗ್ಗೆ ಜನಪ್ರತಿನಿಧಿಗಳಿಗೆ ಕಾಳಜಿಯಿಲ್ಲದಿರುವುದು ಇದೊಂದು
ಉದಾಹರಣೆಯಾಗಿದೆ. ಈ ಹೋರಾಟ ವನ್ನು ಸಿಪಿಎಂ ಹಂತ ಹಂತವಾಗಿ ತೀವ್ರಗೊಳಿಸಲಿದೆ ಎಂದು ಅವರು ಹೇಳಿದರು.
ಸ್ಥಳೀಯವರಾದ ಪಿಲಿಪ್ ಡಿ’ಸಿಲ್ವ, ಸಿಪಿಎಂ ಪಕ್ಷದ ಬಾಲಕೃಷ್ಣ ಶೆಟ್ಟಿ, ವೆಂಕಟೇಶ್ ಕೋಣಿ, ಎಚ್. ನರಸಿಂಹ ಮಾತನಾಡಿದರು.
ಉದಯವಾಣಿ ವಿಶೇಷ ವರದಿ
ಸೇನಾಪುರ ರೈಲು ನಿಲ್ದಾಣದ ಅವ್ಯವಸ್ಥೆ ಹಾಗೂ ಇಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಆಗದೇ ಇರುವ ಕುರಿತು ಉದಯವಾಣಿ ದಿನಪತ್ರಿಕೆ ವಿಶೇಷ ವರದಿಯನ್ನು ಪ್ರಕಟಿಸಿತ್ತು.ಪ್ರತಿಭಟನೆ ನೇತೃತ್ವವನ್ನು ನಾಗರತ್ನಾ ನಾಡ, ರಾಜೇಶ್ ಪಡುಕೋಣೆ, ಪರಮೇಶ್ವರ ಗಾಣಿಗ, ಸಂತೋಷ ಹೆಮ್ಮಾಡಿ, ಗಣೇಶ ತೊಂಡೆಮಕ್ಕಿ, ಶೀಲಾವತಿ, ರೋನಾಲ್ಡ… ರಾಜೇಶ್, ಚಿಕ್ಕಮೊಗವೀರ ವಹಿಸಿದ್ದರು.
ಪಕ್ಷದ ಮುಖಂಡ ರಾಜೀವ ಪಡು ಕೋಣೆ ಸ್ವಾಗತಿಸಿದರು.ಮನೋರಮಾ ಭಂಡಾರಿ ವಂದಿಸಿದರು.ಇದಕ್ಕೂ ಮುನ್ನ ಪ್ರತಿಭಟನಾಕಾರರು ನಾಡದಿಂದ ಮೆರವಣಿಗೆ ಹೊರಟು ರೈಲ್ವೆ ನಿಲಾœಣದಲ್ಲಿ ಪ್ರತಿಭಟಿಸಿ ರೈಲ್ವೇ ಮೆನೆಜರ್ ವಿನಯ್ ಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.