ಹಿರಿಯ ಪತ್ರಕರ್ತ ಎ. ಈಶ್ವರಯ್ಯ ಇನ್ನಿಲ್ಲ
Team Udayavani, Dec 31, 2018, 12:30 AM IST
ಉಡುಪಿ: ಹಿರಿಯ ಪತ್ರಕರ್ತ, ಬಹುಮುಖ ಪ್ರತಿಭೆ ಅನಂತಪುರ ಈಶ್ವರಯ್ಯ (78) ಅಸೌಖ್ಯದಿಂದ ಡಿ. 30ರಂದು ವಿಬುಧಪ್ರಿಯನಗರದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 1972ರಲ್ಲಿ “ಉದಯವಾಣಿ’ಗೆ ಸಹಾಯಕ ಸಂಪಾದಕರಾಗಿ ಸೇರಿದ ಈಶ್ವರಯ್ಯನವರು, ನಾಲ್ಕು ದಶಕಗಳ ಕಾಲ ಪತ್ರಕರ್ತರಾಗಿ “ಉದಯವಾಣಿ’ ಸಮೂಹದಲ್ಲಿಯೇ ಸೇವೆ ಸಲ್ಲಿಸಿದರು. ಸೇರಿದ ಕೆಲವೇ ತಿಂಗಳಲ್ಲಿ ಹೊಸ “ತುಷಾರ’ ಮಾಸಪತ್ರಿಕೆಯ ಸಂಪಾದಕರಾದರು. ಬಳಿಕ ಉದಯವಾಣಿ ಪುರವಣಿ ವಿಭಾಗ ಸಂಪಾದಕರಾಗಿ ಪತ್ರಿಕೆ ಗುಣಮಟ್ಟ ಹೆಚ್ಚಿಸುವಲ್ಲಿ ಅತ್ಯಪೂರ್ವ ಕೊಡುಗೆ ನೀಡಿದ್ದ ಅವರು ಪ್ರತಿ ಶುಕ್ರವಾರದ “ಕಲಾವಿಹಾರ’ದಲ್ಲಿ ಹೊಸತನಕ್ಕೆ ಶ್ರಮಿಸಿದ್ದರು. “ಉದಯವಾಣಿ’ಯಲ್ಲಿ “ಈಶ’ ಕಾವ್ಯನಾಮದಲ್ಲಿ ರಾಜಕೀಯ ವಿಶ್ಲೇಷಣಾತ್ಮಕ ಬರೆಹಗಳನ್ನು ಬರೆಯುತ್ತಿದ್ದರು.
ಅನಂತಪುರದ ಈಶ್ವರಯ್ಯ
ಈಶ್ವರಯ್ಯನವರು ಮೂಲತಃ ಕಾಸರಗೋಡಿನ ಅನಂತಪುರದವರು. ಉಡುಪಿ ಎಂಜಿಎಂ ಕಾಲೇಜಿ ನಲ್ಲಿ ಬಿ.ಎ. ಪದವಿಗಳಿಸಿ ಕೆಲವು ವರ್ಷ
ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಲೇಖನಗಳು ಸುಧಾ, ಮಯೂರ, ಕಸ್ತೂರಿ, ಪ್ರಜಾಮತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಸಿನೆಮಾ, ಸಂಗೀತ ಲೇಖನಗಳು ಫಿಲ್ಮ್ ಫೇರ್ ಪತ್ರಿಕೆಯಲ್ಲೂ ಪ್ರಕಟ ವಾಗಿತ್ತು. ಕಲಾವಿದರೂ ಆಗಿದ್ದ ಈಶ್ವರಯ್ಯನವರು ವಿವಿಧ ಸಂಗೀತ ಉಪಕರಣ, ಕರ್ನಾಟಕ ಸಂಗೀತ ಹಾಡುಗಾರಿಕೆ, ಯಕ್ಷಗಾನ ಭಾಗವತಿಕೆ ತಿಳಿದವರಾಗಿದ್ದರು. ವಿದ್ವತೂರ್ಣ ವಿಚಾರ ಮಂಡಿಸುವ ವಾಗ್ಮಿಗಳೂ ಆಗಿದ್ದರು.
ಆಂಗ್ಲ ಭಾಷೆಯ ಹಿಡಿತ
ಈಶ್ವರಯ್ಯನವರಿಗೆ ಆಂಗ್ಲ ಭಾಷೆ, ಸಾಹಿತ್ಯದಲ್ಲಿ ಅಪಾರ ಜ್ಞಾನ ಹೊಂದಿದ್ದರು. “ತರಂಗ’ದಲ್ಲಿ ಪ್ರಕಟವಾಗುತ್ತಿದ್ದ “ಸರಸ’ ಲಘು ಹಾಸ್ಯಮಿಶ್ರಿತ ಒಯ್ನಾರದ ಬರವಣಿಗೆ ಬಲು ಜನಪ್ರಿಯವಾಗಿತ್ತು. ಸಂಗೀತ ಕಲೆಗಾಗಿಯೇ ಇವರು ಸ್ಥಾಪಿಸಿದ “ರಾಗಧನ’ ಸಂಸ್ಥೆಯ ಅನೇಕ ಕಲಾ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ಉತ್ತಮ ಛಾಯಾಗ್ರಾಹಕರಾಗಿಯೂ ಹೆಸರು ಮಾಡಿದ್ದರು. ಇವರ ಸಾಧನೆಗೆ ರಾಜ್ಯ ಪತ್ರಿಕಾ ಅಕಾಡೆಮಿ, ಲಲಿತಕಲಾ ಅಕಾಡೆಮಿ, ಪೇಜಾವರ ಮಠದ ರಾಮವಿಟ್ಟಲ ಪ್ರಶಸ್ತಿ ಹಲವಾರು ಗೌರವ ಸಂದಿವೆ. ಈಶ್ವರಯ್ಯ ನವರಿಗೆ 70 ತುಂಬಿದಾಗ 2010ರಲ್ಲಿ ಉಡುಪಿ ಅಂಬಲಪಾಡಿ ದೇವಸ್ಥಾನದ ವಠಾರದಲ್ಲಿ ಇವರ ಎಲ್ಲ ಕ್ಷೇತ್ರಗಳ ಬಗೆಗೆ ವಿಚಾರ ಸಂಕಿರಣ, ಅಭಿನಂದನೆ ಡೆದಿತ್ತು.
ಅಂತಿಮ ದರ್ಶನ
ಈಶ್ವರಯ್ಯನವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಡಿ. 31ರ ಬೆಳಗ್ಗೆ 8.30ರಿಂದ 9.30 ಗಂಟೆವರೆಗೆ ಮಣಿಪಾಲ ವಿಬುಧಪ್ರಿಯನಗರದ ಸ್ವಗೃಹದಲ್ಲಿ ಇರಿಸಲಾಗುವುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.