ತಿಂಗಳು ನಾಲ್ಕು ಕಳೆದರೂ ಮುಗಿಯದ ಚರಂಡಿ ಕಾಮಗಾರಿ
40 ಲ.ರೂ .ವೆಚ್ಚದ 400 ಮೀ. ಚರಂಡಿ ನಿರ್ಮಾಣ
Team Udayavani, Mar 1, 2020, 5:07 AM IST
ಶಿರ್ವ: ಶಿರ್ವ-ಮಂಚಕಲ್ ಪೇಟೆಯಲ್ಲಿ ದ್ವಿಪಥ ರಸ್ತೆ ನಿರ್ಮಾಣಗೊಂಡರೂ, ಗುತ್ತಿಗೆದಾರ ನಿರ್ಲಕ್ಷ್ಯದಿಂದ ಚರಂಡಿ ಕಾಮಗಾರಿ ಪೂರ್ತಿಗೊಳ್ಳದೆ ಕಷ್ಟಪಡುವಂತಾಗಿದೆ.
ಕಾಮಗಾರಿ ಮುಗಿದಿಲ್ಲ
ಜಾರಂದಾಯ ದೈವಸ್ಥಾನ ದ್ವಾರದಿಂದ ಹನುಮಾನ್ ಟೈರ್ವರೆಗಿನ ಚರಂಡಿ ಕಾಮಗಾರಿ 4 ತಿಂಗಳಿನಿಂದ ಕುಂಟುತ್ತಿದೆ. 40 ಲ.ರೂ. ವೆಚ್ಚದ 400 ಮೀ. ಉದ್ದದ ಆರ್.ಸಿ.ಸಿ ಕಾಮಗಾರಿಗೆ 2019ರ ನ. 2 ರಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್‌ಗುದ್ದಲಿ ಪೂಜೆ ನೆರವೇರಿಸಿದ್ದರು. ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ರಸ್ತೆ ಬದಿ ಧೂಳು ವ್ಯಾಪಕವಾಗಿದೆ. ಇದರೊಂದಿಗೆ ವಾಹನಗಳು ಚರಂಡಿಗೆ ಬಿದ್ದು ಅಪಘಾತವೂ ಸಂಭವಿಸುತ್ತಿದೆ.
ಸೂಚನೆ ನೀಡಲಾಗುವುದು
ಚರಂಡಿ ಕಾಮಗಾರಿ ಪೂರ್ತಿ ಯಾಗದಿರುವುದು ನನ್ನ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ವಾರದೊಳಗೆ ಕಾಮಗಾರಿ ಪೂರ್ತಿಗೊಳಿಸಲು ಸೂಚನೆ ನೀಡಲಾಗುವುದು ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ವಾರದೊಳಗೆ ಮುಗಿಸಲು ಕ್ರಮ
ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾರದೊಳಗೆ ಕಾಮಗಾರಿ ಪೂರ್ತಿಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಲೋಕೋಪಯೋಗಿ ಸಹಾಯಕ ಎಂಜಿನಿಯರ್ ಸವಿತಾ ಅವರು ತಿಳಿಸಿದ್ದಾರೆ.
ಗುತ್ತಿಗೆದಾರರ ನಿರ್ಲಕ್ಷ್ಯ
ಇದರೊಂದಿಗೆ ಕಳೆದ ಒಂದು ತಿಂಗಳ ಹಿಂದೆ ಪೇಟೆಯ ಕಾರ್ ಸ್ಟಾಂಡ್ ಬಳಿಯಿಂದ ಕುತ್ಯಾರು ರಸ್ತೆಯ ವರೆಗೆ ಚರಂಡಿಗಾಗಿ ಹೊಂಡ ನಿರ್ಮಿಸಿ,ಅವೈಜ್ಞಾನಿಕವಾಗಿ ಕಬ್ಬಿಣದ ಸರಳುಗಳನ್ನು ಹಾಕಲಾಗಿದ್ದು ಆ ಕೆಲಸವೂ ಪೂರ್ತಿಯಾಗಿಲ್ಲ. ಈ ರಸ್ತೆಯಲ್ಲಿ ವಾಹನಗಳು, ಜನರು ಸಂಚರಿಸುತ್ತಿದ್ದಾರೆ. ಜನನಿಬಿಡ ಪ್ರದೇಶವಾಗಿದ್ದರೂ ಗುತ್ತಿಗೆದಾರರು ಕಾಮಗಾರಿ ನಡೆಸಲು ಯಾವುದೇ ಪೂರ್ವ ತಯಾರಿಯಿಲ್ಲದೆ ರಸ್ತೆ ಬದಿ ಅಗೆದು ಹಾಕಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.