ಸಾಸ್ತಾನ: ಸರಣಿ ಕಳ್ಳತನ
Team Udayavani, Jul 30, 2018, 11:33 AM IST
ಕೋಟ: ಸಾಸ್ತಾನದಲ್ಲಿ ಶನಿವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಂಡೇಶ್ವರ ರಸ್ತೆಯ ಎದುರಿನ ರಾ.ಹೆ. ಸಮೀಪದ ಅಮೂಲ್ಯ ಫ್ಯಾಶನ್, ಬಿಟ್ಸ್ ಮೊಬೈಲ್ ಶಾಪ್, ಉದ್ಗೀಥ ಎಂಟರ್‌ಪ್ರೈಸಸ್‌ನ ರೋಲಿಂಗ್ ಶೆಟರ್ ಅನ್ನು ಹೈಡ್ರೋಲಿಕ್ ಜಾಕ್ ಬಳಸಿ ಮುರಿದು ಒಳ ನುಗ್ಗಿದ್ದಾರೆ.
ಮೊಬೈಲ್ ಶಾಪ್‌ನಲ್ಲಿ ಗ್ಲಾಸ್ ಡೋರ್ ಇರುವ ಕಾರಣ ಒಳ ನುಗ್ಗಲು ಸಾಧ್ಯವಾಗಿಲ್ಲ. ಉಳಿದ ಎರಡು ಅಂಗಡಿಗೆ ನುಗ್ಗಿದ ಕಳ್ಳರು ಕ್ಯಾಶ್ ಟೇಬಲ್ ಸಹಿತ ಇನ್ನಿತರ ಸ್ಥಳವನ್ನು ಜಾಲಾಡಿದ್ದಾರೆ. ರವಿವಾರ ಬೆಳಗ್ಗೆ ಮಾಲಕರು ಬಂದಾಗ ಘಟನೆ ತಿಳಿದು ಬಂದಿದೆ.
ಸಾಸ್ತಾನ ಪೇಟೆಯ ಸಮೀಪದಲ್ಲಿರುವ ನ್ಯೂ ಲಕ್ಷಿ$¾à ಜುವೆಲರ್ನ ರೋಲಿಂಗ್ ಶೆಟರ್ ಅನ್ನು ಮುರಿದ ಕಳ್ಳರು ಸುಮಾರು 2 ಕೆ.ಜಿ.ಯಷ್ಟು ಹಳೆಯ ಬೆಳ್ಳಿಯನ್ನು ಕದ್ದೊಯ್ದಿದ್ದಾರೆ. ಮಾಬುಕಳ ಸಮೀಪದ ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಹಿಂಭಾಗದ ಬಾಗಿಲನ್ನು ಮುರಿದು ನುಗ್ಗಿದ ಕಳ್ಳರು ಸಣ್ಣಪುಟ್ಟ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಶ್ವಾನ, ಬೆರಳಚ್ಚು ತಜ್ಞರ ಭೇಟಿ
ಸ್ಥಳಕ್ಕೆ ಶ್ವಾನದಳ ಮತ್ತು ಬೆರ ಳಚ್ಚು ತಜ್ಞರು ಭೇಟಿ ನೀಡಿದ್ದಾರೆ. ಸಾಸ್ತಾನದ ಫ್ಯಾಶನ್ ಅಂಗಡಿಯ ಒಳಗೆ ಹೋದ ಶ್ವಾನ ಅಲ್ಲಿಂದ ಸ್ಥಳೀಯ ದೇವಸ್ಥಾನ ದವರೆಗೆ ತೆರಳಿ ನಿಂತಿತ್ತು.
ಉಡುಪಿ ಎಎಸ್‌ಪಿ ಕುಮಾರ್‌ಚಂದ್ರ, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಕೋಟ ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಪರಿಶೀಲಿಸಿದರು.
ಮದ್ಯವನ್ನೂ ಕೊಂಡೊಯ್ದರು!
ಹಂಗಾರುಕಟ್ಟೆ ಚಕ್ರವರ್ತಿ ಬಾರ್‌ನಿಂದ 16 ಸಾ.ರೂ., 1 ಮದ್ಯದ ಕೇಸ್ ಅನ್ನು ಕೊಂಡೊಯ್ದಿದ್ದಾರೆ. ಬಾರ್‌ನಲ್ಲಿದ್ದ ಸಿಸಿಕೆಮರಾದ ಕೇಬಲ್ ಅನ್ನು ಕಟ್ ಮಾಡುವ ಬದಲು ಟಿವಿಯ ಕೇಬಲ್‌ನ್ನು ಕತ್ತರಿಸಿದ್ದರು. ಪೊಲೀಸರು ರವಿವಾರ ಬೆಳಗ್ಗೆ ಸಿಸಿ ಕೆಮರಾವನ್ನು ಪರಿಶೀಲಿಸಿದಾಗ ಮುಸುಕುಧಾರಿ ಕಳ್ಳರು ಒಳಗಡೆ ಓಡಾಡುತ್ತಿರುವುದು ಕಂಡು ಬಂದಿತ್ತು ಎನ್ನಲಾಗಿದೆ. ಸಾಸ್ತಾನದ ಮೊಬೈಲ್ ಶಾಪ್‌ನಲ್ಲಿ ಸಿಸಿ ಕೆಮರಾವಿದ್ದರೂ, ಅದರ ಡಿವಿಆರ್ ಹಾಳಾಗಿದೆ ಎನ್ನಲಾಗಿದೆ.
ಬ್ರಹ್ಮಾವರದ ಆಕಾಶವಾಣಿ ಬಳಿ ಇದೇ ರೀತಿ ಎರಡು ಅಂಗಡಿಗಳಲ್ಲಿ ಕಳ್ಳತನ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.