![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 22, 2023, 11:55 PM IST
ಮಲ್ಪೆ: ಶಿಕ್ಷಣ ಸಂಸ್ಥೆಗಳಿಗೆ ದಸರಾ ರಜೆ, ಕಚೇರಿಗಳಿಗೆ ವಾರಾಂತ್ಯ, ನವಮಿ, ವಿಜಯದಶಮಿ ಸೇರಿದಂತೆ ಸರಣಿ ರಜೆಯ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಪ್ರವಾಸಿಗರು ಕರಾವಳಿಯತ್ತ ಮುಖಮಾಡಿದ್ದಾರೆ. ಮಲ್ಪೆ ಬೀಚ್, ಧಾರ್ಮಿಕ ಕೇಂದ್ರಗಳು ಸೇರಿದಂತೆ ವಿವಿಧ ಪ್ರೇಕ್ಷಣೀಯ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ದೇವಿ ದೇವಸ್ಥಾನಗಳಲ್ಲದೆ ಮಲ್ಪೆ, ಪಡುಕರೆ, ಕೋಡಿಬೆಂಗ್ರೆ ಡೆಲ್ಟಾ ಬೀಚ್‌ಗಳು, ಸೀವಾಕ್‌ವೆà, ಪಾರ್ಕ್‌ಗಳು ಪ್ರವಾಸಿಗರಿಂದ ತುಂಬಿವೆ. ರಾತ್ರಿ ಒಂಬತ್ತಕ್ಕೆಳ್‌ಳ ನಿರ್ಜನ ವಾಗುತ್ತಿದ್ದ ಮಲ್ಪೆ ಬೀಚ್ ಶನಿವಾರ ರಾತ್ರಿ ಗಂಟೆ ಹನ್ನೊಂದಾದರೂ ಚಟುವಟಿಕೆಯಿಂದ ಕೂಡಿತ್ತು. ನಗರದ ರಸ್ತೆಗಳಲ್ಲಿ ಹೊರರಾಜ್ಯದ ನೋಂದಣಿಯ ವಾಹನಗಳೇ ಕಂಡುಬರುತ್ತಿವೆ. ಅಲ್ಲಲ್ಲಿ ಸಂಚಾರ ದಟ್ಟಣೆ ಸಮಸ್ಯೆಯೂ ಕಂಡುಬಂತು.
ಜೀವರಕ್ಷಕರ ಮಾತಿಗಿಲ್ಲ ಬೆಲೆ!
ಮಲ್ಪೆ ಬೀಚ್‌ಗೆ ಬರುವವರೆಲ್ಲರೂ ಅಪಾಯವನ್ನು ಮರೆತು ನೀರಿಗಿಳಿದು ಮೋಜು ಮಸ್ತಿಯಲ್ಲಿ ಮೈಮರೆ ಯುತ್ತಿದ್ದಾರೆ. ಗಾಳಿ ಬಿರುಸಾಗಿದ್ದು, ಅಲೆಗಳ ಅಬ್ಬರವಿದೆ. ಈಜಾಡಲೆಂದೇ ಸ್ವಿಮ್ಮಿಂಗ್ ಝೋನ್ ನಿರ್ಮಿಸಿದ್ದರೂ ಪ್ರವಾಸಿಗರು ಇತರ ಕಡೆಗಳಲ್ಲಿ ಈಜುತ್ತಿದ್ದಾರೆ. ಅಲ್ಲಿಗೆ ಹೋಗದಂತೆ ನಾವು ಎಚ್ಚರಿಕೆಯ ಮಾತುಗಳನ್ನು ಹೇಳಿದರೂ ಯಾರೂ ಕೇಳಿಸಿಕೊಳ್ಳುತ್ತಿಲ್ಲ ಎಂದು ಬೀಚ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜೀವರಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.