ಗ್ರಾಮ ಪಂಚಾಯತ್‌ಗಳಲ್ಲಿ 9/11ಕ್ಕಾಗಿ ಗ್ರಾಮಸ್ಥರು, ಸಿಬಂದಿಗಳ ಪರದಾಟ
ರಾಜ್ಯಾದ್ಯಂತ ಸರ್ವರ್ ಡೌನ್
Team Udayavani, Mar 1, 2020, 6:11 AM IST
ಸಾಂದರ್ಭಿಕ ಚಿತ್ರ
ಕೈಕಂಬ/ಉಡುಪಿ: ರಾಜ್ಯಾದ್ಯಂತ ಇ-ಸ್ವತ್ತು ತಂತ್ರಾಂಶದ ಸರ್ವರ್ ಕಳೆದ ಒಂದು ತಿಂಗಳಿಂದ ಸಮರ್ಪಕವಾಗಿ ಕಾರ್ಯಾಚರಿಸದ ಕಾರಣ ಗ್ರಾಮ ಪಂಚಾಯತ್‌ಗಳಲ್ಲಿ ಕ್ರಮಬದ್ಧವಾದ ಆಸ್ತಿಗಳ ನೋಂದಣಿ ಆಗುತ್ತಿಲ್ಲ. ಪ್ರಶ್ನಿಸಿದರೆ ಸಾಫ್ಟ್ವೇರ್ ಅಪ್ ಗ್ರೇಡ್ ನಡೆಯುತ್ತಿದೆ ಎಂಬ ಹಾರೈಕೆ ಉತ್ತರವಷ್ಟೇ ಸಿಗುತ್ತಿದೆ. ಗ್ರಾ.ಪಂ. ಅಧಿಕಾರಿಗಳು, ಸಿಬಂದಿ ಒಂದೆಡೆ ಜನರ ಆಕ್ರೋಶವನ್ನು ಸಹಿಸಲಾಗದೆ
ಮತ್ತೂಂದೆಡೆ ವ್ಯವಸ್ಥೆಯನ್ನು ಸರಿಪಡಿಸಲೂ ಆಗದೆ ಒದ್ದಾಡುತ್ತಿದ್ದಾರೆ. ಕ್ರಮಬದ್ಧ ಆಸ್ತಿಗಳಿ ಗಾಗಿ ಈ 9/11 (ಇ-ಸ್ವತ್ತು)ನ ಅರ್ಜಿಯನ್ನು ಸಲ್ಲಿಸಿ 45 ದಿನದೊಳಗೆ ನೀಡಬೇಕು. ಅದರೆ ಈಗ ಸರ್ವರ್ ಸಮಸ್ಯೆಯಿಂದಾಗಿ ಸಿಗುತ್ತಿಲ್ಲ.
ಸರತಿ ಸಾಲು
9/11ನ್ನು ಪಡೆಯಲು ಪ್ರತಿದಿನ ಸರತಿ ಸಾಲು. ಬೆಳಗ್ಗೆ ಬಂದವರು ಸಂಜೆಯ ತನಕ ನಿಂತರೂ ಕೆಲಸವಾಗದೆ ವ್ಯವಸ್ಥೆಯನ್ನು ಶಪಿಸುತ್ತ ವಾಪಸಾಗುವುದು ಮಾಮೂಲಿ. ಇಂದು ಸರಿಯಾದೀತು – ನಾಳೆ ಸರಿಯಾ ದೀತು ಎಂಬ ನಂಬಿಕೆಯಿಂದ ವಾರ ಗಟ್ಟಲೆ ಕಾದು ಕೂರುವವರೂ ಇದ್ದಾರೆ.
ಪಂಚಾಯತ್ ಸಿಬಂದಿ ಬೆಳಗ್ಗೆ ಕಂಪ್ಯೂಟರ್ ಮುಂದೆ ಕೂತರೆ ಸಂಜೆ ತನಕ ಏಳುವಂತಿಲ್ಲ. ಕಾರಣ ಯಾವ ಕ್ಷಣದಲ್ಲಾದರೂ ಸರ್ವರ್ ಸರಿಯಾಗಬಹುದು ಎಂಬ ನಿರೀಕ್ಷೆ. ಕೆಲವೊಮ್ಮೆ ಸರ್ವರ್ ತೆರೆದುಕೊಂಡು ಮಾಹಿತಿ ಅಪ್‌ಲೋಡ್ ಅಗತ್ತದೆ ಅದರೆ ಸೇವ್ ಆಗುತ್ತಿಲ್ಲ. ಕೆಲವೊಮ್ಮೆ ಸೇವ್ ಅದರೂ ಅನುಮೋದನೆ ಆಗುತ್ತಿಲ್ಲ. ಅನುಮೋದನೆ ಸಿಕ್ಕರೂ ಪ್ರಮಾಣ ಪತ್ರ ಮುದ್ರಣ ಆಗುತ್ತಿಲ್ಲ.
ಕೆಲವು ದಿನಗಳಲ್ಲಿ ಮೂರು ಅಥವಾ ನಾಲ್ಕು 9/11 ಆಗಿದೆ. ಅದರಲ್ಲೂ ಒಂದು ತಿಂಗಳಿಂದ
ವಸತಿ ಸಮುಚ್ಚಯ 9 ಮತ್ತು 11ಎ ಜನರೇಟ್ ಆಗುತ್ತಿಲ್ಲ. 9/11ಕ್ಕಾಗಿ ವಿದೇಶದಿಂದ ಬಂದ ವರು ಕೆಲಸವಾಗದೆ ಮರಳುವಂತಿಲ್ಲ. ತುರ್ತು ನೋಂದಣಿ ಆಗಬೇಕಾದ ಅನಿವಾರ್ಯ ವಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆ ನಂಬ್ರ, ಕಟ್ಟಡ ಪರವಾನಿಗೆ, ಸಾಲ ತೆಗೆಯಲು, ಅಡಮಾನಕ್ಕೆ, ಖಾತೆ ಬದಲಾವಣೆಗೆ ಇದು ಅಗತ್ಯವಾಗಿದೆ ಬೇಕಾಗಿದೆ.
ಸಂದೇಶ ಮಾತ್ರ!
ಜಿ.ಪಂ.ನಿಂದ ಎನ್‌ಐಸಿಯಿಂದ ಈಗ ಸರ್ವರ್ ಸರಿಪಡಿಸಲಾಗುತ್ತದೆ ಎಂಬ ಸಂದೇಶಗಳು ಬರುತ್ತಾ ಇವೆಯಾದರೂ ಸರಿಯಾಗುತ್ತಿಲ್ಲ. ಅಸಹಾಯಕ ಜನರು “ಸರ್ವರ್ ಡೌನ್’ ಎಂಬ ಸಂದೇಶ ತೋರುವ ಕಂಪ್ಯೂಟರ್‌ನ ಪರದೆಯ ಚಿತ್ರವನ್ನು ತಮ್ಮ ಮೊಬೈಲ್‌ಗಳಲ್ಲಿ ತೆಗೆದು ಮನೆಯವರಿಗೆ/ ಸಂಬಂಧ ಪಟ್ಟ ಪಾರ್ಟಿಯವರಿಗೆ ತೋರಿಸಿ ಸಮಾಜಾಯಿಸಿ ನೀಡುತ್ತಿದ್ದಾರೆ. ಒಟ್ಟಾರೆ ಈಗ ಸರ್ವರ್ ಡೌನ್‌ನ ಚಿತ್ರಗಳು ವೈರಲ್ ಆಗುತ್ತಿವೆ. ಇಲ್ಲಿ ಸಾಫ್ಟ್ವೇರ್ ಲಾಬಿ ನಡೆಯು ತ್ತಿದೆ ಎಂಬ ಅನುಮಾನ ಜನರಲ್ಲಿ ಮೂಡಿದೆ.
ಬಿಎಸ್‌ಎನ್‌ಎಲ್ ಸರ್ವರ್ ಸಮಸ್ಯೆ ಇರುವುದರಿಂದ ಕೆಲವೊಮ್ಮೆ ಸಮಸ್ಯೆ ಉಂಟಾಗುತ್ತದೆ. ಸರಕಾರ 9/11ಗೆ ಸಂಬಂಧಿಸಿದ ಸಾಫ್ಟ್ವೇರ್ ಬದಲಿಸುವ ನಿರ್ಧಾರ ಮಾಡಿದರೆ ಅದು ಎಲ್ಲ ಜಿಲ್ಲೆಗಳಲ್ಲೂ ಏಕಕಾಲದಲ್ಲಿ ಜಾರಿಯಾಗುತ್ತದೆ.
-ಕಿರಣ್ ಪಡ್ನ್ ಕರ್, ಉಪ ಕಾರ್ಯದರ್ಶಿ, ಉಡುಪಿ ಜಿ.ಪಂ.
9/11ಗೆ ಸಂಬಂಧಿಸಿದ ಸಾಫ್ಟ್ವೇರನ್ನು ಶುಕ್ರವಾರ ಬದಲಾಯಿಸಲಾಗಿದೆ. ಅದು ಸಮರ್ಪಕವಾಗಿ ಕಾರ್ಯಾಚರಿಸಲು ಒಂದೆರಡು ದಿನ ಬೇಕಿದ್ದು ಬಳಿಕ ಸಮಸ್ಯೆ ಬಗೆಹರಿಯಲಿದೆ.
– ಡಾ| ಸೆಲ್ವಮಣಿ ಆರ್., ದ.ಕ. ಜಿ.ಪಂ. ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.