ರಾಜ್ಯಾದ್ಯಂತ ಮಂಗಳವಾರವೂ ಶೂನ್ಯನೋಂದಣಿ!
ಉಪನೋಂದಣಿ ಕಚೇರಿಯಲ್ಲಿ ಸರ್ವರ್ ಸಮಸ್ಯೆ
Team Udayavani, Feb 19, 2020, 6:07 AM IST
ಉಡುಪಿ: ರಾಜ್ಯದ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಮಂಗಳವಾರವೂ ನೋಂದಣಿಗೆ ಸರ್ವರ್ ಕೈ ಕೊಟ್ಟಿದ್ದು, ದಾಖಲೆಗಳ ನೋಂದಣಿಗಾಗಿ ಕಚೇರಿಗೆ ಬಂದ ಜನ ದಿನವಿಡೀ ಕಾಯುವ ಸ್ಥಿತಿ ನಿರ್ಮಾಣವಾಯಿತು. ಶನಿವಾರವೇ ಸರ್ವರ್ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿತ್ತು. ಸೋಮವಾರ ಬೆಳಗ್ಗಿನಿಂದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತವಾಗಿತ್ತು. ಮಂಗಳವಾರ ಅಪರಾಹ್ನ 3.15ಕ್ಕೆ ಮತ್ತೆ ನಿಧಾನವಾಗಿ ಸರ್ವರ್ ಕಾರ್ಯಾರಂಭಿಸಿತು. ಆದರೂ ಇಸಿ ಮತ್ತು ಸ್ಕೇನ್ ಡಾಟಾಗಳು ಸ್ಟೇಟ್ ಡಾಟಾಕ್ಕೆ ರವಾನೆ ಆಗುತ್ತಿರಲಿಲ್ಲ.
ಮಂಗಳವಾರವೂ ಶೂನ್ಯ!
ಉಡುಪಿ ನೋಂದಣಾಧಿಕಾರಿ ಕಚೇರಿಯಲ್ಲಿ ಸಾಮಾನ್ಯವಾಗಿ ದಿನವೊಂದಕ್ಕೆ 250 ವಿವಿಧ ಸೇವೆಗಳ ನೋಂದಣಿಯಾಗುತ್ತಿತ್ತು. ಸೊಮವಾರ ಮತ್ತು ಮಂಗಳವಾರ ಸಂಜೆ ತನಕ ಒಂದೇ ಒಂದು ನೋಂದಣಿ ಆಗಿರಲಿಲ್ಲ. ಉಪನೋಂದಣಿ ಕಚೇರಿಯಲ್ಲಿ ನೂರಾರು ಮಂದಿ ದೂರದ ಊರುಗಳಿಂದ ಬಂದವರು ಸಂಜೆ ತನಕವೂ ತಮ್ಮ ಕೆಲಸ ಆಗಲಿಲ್ಲ ಎಂದು ಕಾದು ಕುಳಿತು ಅಳಲು ತೋಡಿಕೊಳ್ಳುತ್ತಿದ್ದರು.
ಬಹುತೇಕ ಎಲ್ಲವೂ ಸ್ತಬ್ಧ
ಆಸ್ತಿ ಖರೀದಿ, ಮಾರಾಟ, ವಿವಾಹ ನೋಂದಣಿ, ಬ್ಯಾಂಕ್ ಲೋನ್‌ಗಳಿಗೆ ದಾಖಲೆ, ಇಸಿ, ಹಳೆಯ ಪಹಣಿ, ಭೂಮಿ ಮನೆ ದಾಖಲೆಗಳ ಸೇವೆಗಳು ಸೇರಿ ಬಹುತೇಕ ಸೇವೆಗಳು ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸಿದರು. ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ತತ್‌ಕ್ಷಣ ಮುಂದಾಗಬೇಕು ಎಂದು ವಕೀಲ ಚಂದ್ರಶೇಖರ ಶೆಟ್ಟಿ ತಿಳಿಸಿದರು.
ಸಮಸ್ಯೆ ನಿವಾರಿಸದಿದ್ದರೆ ಧರಣಿ
ರಾಜ್ಯಾದ್ಯಂತ ತಿಂಗಳಿಂದ ಸರ್ವರ್ ಸಮಸ್ಯೆ ಇದೆ. ಪಡಿತರ ಚೀಟಿ, ಆಧಾರ್ ಕಾರ್ಡ್, ಸರಕಾರಿ ಕೆಲಸಗಳನ್ನು ಮಾಡಿಸಲು ಸಾಧ್ಯವಾಗದೆ ಜನಸಾಮಾನ್ಯರು ತೊಂದರೆ ಅನಿಭವಿಸುತ್ತಿದ್ದಾರೆ. ಫೆ. 15ರಿಂದ 18ರ ವರೆಗೆ ಸರ್ವರ್ ಇಲ್ಲದೆ ಜನ ಸಂಕಷ್ಟಕ್ಕೆ ಒಳಗಾಗಿದ್ದರು. ಕೂಡಲೇ ಸರ್ವರ್ ಸಮಸ್ಯೆ ನಿವಾರಣೆಗೆ ಸರಕಾರ ಮುಂದಾಗಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಎಚ್ಚರಿಸಿದ್ದಾರೆ.
ಹೊಸ ತಂತ್ರಜ್ಞಾನದಿಂದ ಸಮಸ್ಯೆ
ನೋಂದಣಿ ಕಚೇರಿಯ ವಿದ್ಯುನ್ಮಾನ ವ್ಯವಸ್ಥೆಗೆ ಫೆ. 2ರಂದು ಹೊಸ ತಂತ್ರಜ್ಞಾನವಾಗಿ 6.8 ಸರ್ವಿಸ್ ಪ್ಯಾಚ್ ಸಿಸ್ಟಮ್ ಅಳವಡಿಸಲಾಗಿದೆ. ಅನಂತರದ ದಿನಗಳಲ್ಲಿ ಸರ್ವರ್ ಸಮಸ್ಯೆ ಹೆಚ್ಚಳಗೊಂಡಿದೆ ಅನ್ನುವ ಅಂಶ ಬೆಳಕಿಗೆ ಬಂದಿದೆ. ಹಿಂದೆ ದಿನವೊಂದಕ್ಕೆ 50ಕ್ಕೂ ಮೇಲ್ಪಟ್ಟು ದಸ್ತಾವಣೆ ದಾಖಲು ಆಗುತ್ತಿತ್ತು. ಹೊಸ ಪ್ಯಾಚ್ ಅಳವಡಿಸಿದ ಬಳಿಕ ಇಸಿ ಮತ್ತು ದೃಢೀಕೃತ ನಕಲು ರಶೀದಿ ತ್ವರಿತವಾಗಿ ಆಗದೆ ಸಮಸ್ಯೆ ತಂದೊಡ್ಡಿದೆ. ಒಟಿಪಿ ಕೂಡ ವೇಗವಾಗಿ ಅಪ್‌ಲೋಡ್ ಆಗುತ್ತಿಲ್ಲ. ಈಗ ದಿನದಲ್ಲಿ 35ರಿಂದ 40ರಷ್ಟು ಮಾತ್ರ ಸಾಧ್ಯವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಉಪ ನೋಂದಣಿ ಕಚೇರಿಗಳಲ್ಲಿ ಸರ್ವರ್ ಸಮಸ್ಯೆಯಿಂದ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಬುಧವಾರವೇ ಅಧಿಕರಾರಿಗಳ ಜತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವೆ.
– ಕೋಟ ಶ್ರೀನಿವಾಸ ಪೂಜಾರಿ, ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.