ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣು
Team Udayavani, Mar 10, 2019, 1:00 AM IST
ಕೋಟ: ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಸುಮಾರು 15ದಿನಗಳಿಂದ ಆನ್‌ಲೈನ್ ಸಮಸ್ಯೆ ಎದು ರಾಗಿದ್ದು ಜಿಲ್ಲೆಯ ಅಟಲ್ ಜೀ ಜನಸ್ನೇಹಿ ಕೇಂದ್ರಗಳಿಗೆ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಗಮಿಸುವವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ನಮೂನೆ 57 ಅರ್ಜಿ ಸಲ್ಲಿಕೆಗೆ ಸಮಸ್ಯೆ
ಸರಕಾರಿ ಭೂಮಿಯಲ್ಲಿ ಅನ ಧಿಕೃತ ಸಾಗುವಳಿ ಮಾಡಿರುವ ಜಾಗವನ್ನು ಸಕ್ರಮ ಗೊಳಿಸಿಕೊಳ್ಳುವುದಕ್ಕಾಗಿ ನಮೂನೆ 57ರಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ನೂರಾರು ಮಂದಿ ಅರ್ಜಿ ಸಲ್ಲಿಕೆಗೆ ಆಗಮಿಸುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ದಿನವಿಡೀ ಕಾಯ ಬೇಕಾಗುತ್ತಿದೆ.
ಬೆಳಗ್ಗೆ 6 ಗಂಟೆಯಿಂದಲೇ ಜನ
ಕೋಟದ ಜನಸ್ನೇಹಿ ಕೇಂದ್ರದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದಲೇ ಅರ್ಜಿ ಸಲ್ಲಿಕೆಗಾಗಿ ಸರತಿಯ ಸಾಲು ಆರಂಭವಾಗುತ್ತದೆ, ಕಚೇರಿ ಬಾಗಿಲು ತೆರೆವಾಗ ನೂರಾರು ಮಂದಿ ಸಾಲಿನಲ್ಲಿ ನಿಂತಿರುತ್ತಾರೆ. ಆರಂಭದಲ್ಲಿ ಸುಮಾರು 50 ಅರ್ಜಿ ಹಾಕಲು ಅವಕಾಶವಿತ್ತು. ಆದರೆ ವಾರದಿಂದ ಸಮಸ್ಯೆ ಬಿಗಡಾಯಿಸಿದ್ದು 10-20 ಅರ್ಜಿ ಅಪ್‌ಲೋಡ್ ಮಾಡುವುದೂ ಕಷ್ಟವಾಗಿದೆ. ಇದರಿಂದ ಜನ ದಿನವಿಡೀ ಕಾದು ವಾಪಸ್ಸಾಗುತ್ತಿದ್ದಾರೆ. ಜತೆಗೆ ಆಧಾರ್, ಆದಾಯ ಪ್ರಮಾಣ ಪತ್ರ ಮುಂತಾದ ಕೆಲಸ-ಕಾರ್ಯಗಳಿಗೂ ಹಿನ್ನಡೆಯಾಗುತ್ತಿದೆ.
ಬೇರೆ ಕೌಂಟರ್, ಸಿಬಂದಿ ಅಗತ್ಯ
ಜನಸ್ನೇಹಿ ಕೇಂದ್ರದ ಹೆಚ್ಚಿನ ಕಡೆಗಳಲ್ಲಿ ಒಂದೇ ಕಂಪ್ಯೂಟರ್, ಓರ್ವನೇ ಸಿಬಂದಿ ಕಾರ್ಯ ನಿರ್ವಹಿಸುವುದರಿಂದ ಹಿನ್ನಡೆಯಾಗಿದೆ. ಹೀಗಾಗಿ ಹೆಚ್ಚುವರಿ ಕೌಂಟರ್ ಹಾಗೂ ಸಿಬಂದಿ ನೇಮಿಸಬೇಕು ಎನ್ನುವ ಬೇಡಿಕೆ ಇದೆ.
ಕಾಲಾವಕಾಶ ವಿಸ್ತರಿಸಲು ಆಗ್ರಹ
ನಮೂನೆ 57 ಅರ್ಜಿ ಸಲ್ಲಿಕೆಗೆ ಮಾ.16ರವರೆಗೆ ಅವಕಾಶ ನೀಡಲಾಗಿದೆ. ಆದರೆ ಅಷ್ಟರೊಳಗೆ ಚುನಾವಣೆ ಘೋಷಣೆಯಾದರೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎನ್ನುವ ಆತಂಕದಿಂದ ಜನರು ಮುಗಿಬೀಳುತ್ತಿದ್ದಾರೆ. ಪ್ರಸ್ತುತ ಸಾಕಷ್ಟು ಸಮಸ್ಯೆ ಇರುವುದರಿಂದ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಬೇಕು ಅಥವಾ ತತ್‌ಕ್ಷಣ ಚುನಾವಣೆ ಘೋಷಣೆಯಾದರೆ, ಚುನಾವಣೆಯ ಅನಂತರ ಅರ್ಜಿ ಸ್ವೀಕರಿಸುವ ಭರವಸೆ ನೀಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಶೀಘ್ರ ಸರ್ವರ್ ಸರಿಪಡಿಸಿ
ನಾಲ್ಕು ದಿನದಿಂದ ಅರ್ಜಿ ಸಲ್ಲಿಕೆಗೆ ಬರುತ್ತಿದ್ದೇನೆ. ಬೆಳಗ್ಗೆ 6 ಗಂಟೆಗೆ ಬಂದು ನಿಂತಿದ್ದೇನೆ. ನನಗಿಂತ ಮೊದಲು ಸಾಕಷ್ಟು ಮಂದಿ ಕಾಯುತ್ತಿದ್ದರಿಂದ ಸಂಜೆಯ ತನಕವೂ ಕೆಲಸವಾಗಿಲ್ಲ. ಶೀಘ್ರ ಸರ್ವರ್ ಸರಿಪಡಿಸಿ, ಇಲ್ಲವಾದರೆ ಅರ್ಜಿ ಸಲ್ಲಿಕೆಗೆ ಹೆಚ್ಚಿನ ಕಾಲಾವಕಾಶ ನೀಡಿ.
-ಶಂಕರ ಕಾಂಚನ್, ಅರ್ಜಿ ಸಲ್ಲಿಸಲು ಬಂದವರು
ಸಮಸ್ಯೆ ಶೀಘ್ರ ಪರಿಹಾರ
ಸರ್ವರ್ ಸಮಸ್ಯೆಯಿಂದ ಈ ರೀತಿಯಾಗುತ್ತಿದ್ದು ಕೆ.ಡಿ.ಪಿ. ಸಭೆಯಲ್ಲೂ ಈ ಕುರಿತು ಚರ್ಚೆಯಾಗಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಕ್ರಮಕೈಗೊಳ್ಳಲಾಗುತ್ತದೆ.
-ಡಾ| ಎಸ್.ಎಸ್. ಮಧುಕೇಶ್ವರ್, ಎ.ಸಿ. ಕುಂದಾಪುರ
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
MUST WATCH
ಹೊಸ ಸೇರ್ಪಡೆ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.