ಪ್ರತಿಭಾವಂತರ ಸೇವೆ ಊರಿಗೆೆ ಅಗತ್ಯ: ವಂ| ಅನಿಲ್ ಡಿ’ಸೋಜಾ
Team Udayavani, Feb 22, 2017, 4:47 PM IST
ಕುಂದಾಪುರ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಪ್ರತಿಭಾವಂತ ಮತ್ತು ವಿಶೇಷವಾಗಿ ಸಾಧನೆ ಮಾಡಿದವರನ್ನು ಸಮ್ಮಾನಿಸುವ ಪ್ರತಿಭಾ ಸಂಜೆ ಕಾರ್ಯಕ್ರಮ ಸಂತ ಮೇರಿಸ್ ಪಿ. ಯು. ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೋನ್ ಡಿ’ಸೋಜಾ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೈಟ್ ಲಿಪ್ಟಿಂಗ್ (ಪವರ್ ಲಿಪ್ಟಿಂಗ್) ಪಟು ಮತ್ತು ಬಿ.ಬಿ.ಎಂ. ಪದವಿಯಲ್ಲಿ ರ್‍ಯಾಂಕ್ ಬಂದ ಒಷಿನ್ ಡಿ’ಸೋಜಾ ಇವರನ್ನು ವಲಯ ಪ್ರಧಾನ ರೋಜರಿ ಮಾತೆಯ ಧರ್ಮಗುರು ವ| ಅನಿಲ್ ಡಿ’ಸೋಜಾ ಅವರು ಸಮ್ಮಾನಿಸಿದರು.
ಅನಂತರ ಮಾತನಾಡಿದ ಅವರು, ನಾವು ಸಮ್ಮಾನಿಸುವ ಪ್ರತಿಭಾವಂತ ಮಕ್ಕಳು, ಮುಂದೆ ನಮ್ಮ ಊರಿನಲ್ಲಿ ಕಾಣಸಿಗದಂತಾಗಬಾರದು. ಇಂತಹ ಪ್ರತಿಭಾವಂತರ ಸೇವೆ ನಮ್ಮ ಊರುಗಳಿಗೆ ಬೇಕಾಗಿವೆ ಎಂದರು.
ವಿಜೇತರಿಗೆ ಬಹುಮಾನ
ಈ ಸಂದರ್ಭದಲ್ಲಿ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ಕೆಥೊಲಿಕ್ ಸಭಾ ಉಡುಪಿ ಕೇಂದ್ರ ಸಮಿತಿಯ ಅಧ್ಯಕ್ಷ ವೆಲೇರಿಯನ್ ಫೆರ್ನಾಂಡಿಸ್ ಹಂಚಿ ಶುಭ ಹಾರೈಸಿದರು.
ನಾಡಿನ ಸೇವೆ ಮಾಡಿ
ವಲಯ ಮಟ್ಟದಲ್ಲಿ ಕಲಿಕೆಯಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಮುಖ್ಯ ಅತಿಥಿ ರೋಜರಿ ಕ್ರೆಡಿಟ್ ಕೋ-ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿ’ಆಲ್ಮೇಡಾ ಸಮ್ಮಾನಿಸಿ, ಮಕ್ಕಳು ಸರಕಾರದ ಉದ್ಯೋಗಗಳನ್ನು ಪಡೆದುಕೊಂಡು ನಾಡಿನ ಸೇವೆ ಮಾಡಬೇಕೆಂದರು.
ಶೆವೊಟ್ ಪ್ರತಿಷ್ಠಾನ್ ಇದರ ಅಧ್ಯಕ್ಷ ಅಲ್ವಿನ್ ಕ್ವಾಡರ್ಸ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕೆಥೊಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷ ವಿಜೇತರನ್ನು ಶುಭ ಹಾರೈಸಿದರು ಕಾರ್ಯಕ್ರಮದ ಸಂಚಾಲಕ ಜೇಕಬ್ ಡಿ’ಸೋಜಾ ಸ್ವಾಗತಿಸಿ, ಕಾರ್ಯಕ್ರಮವನ್ನು ವಿನಯ್ ಡಿ’ಆಲ್ಮೇಡಾ, ವಿನೋದ್ ಕ್ರಾಸ್ಟೊ, ಮೇಬಲ್ ಡಿ’ಸೋಜಾ ಪ್ರಸಿಲ್ಲಾ ಮಿನೇಜಸ್ ನೆಡೆಸಿಕೊಟ್ಟರು. ಕಾರ್ಯದರ್ಶಿ ಶೈಲಾ ಡಿ’ಆಲ್ಮೇಡಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.