ಮಕ್ಕಳ ಲಿಂಗಾನುಪಾತ: ಉಡುಪಿಯಲ್ಲಿ ಆಶಾದಾಯಕ; ದಕ್ಷಿಣ ಕನ್ನಡದಲ್ಲಿ ಕುಸಿತ
ಜಿಲ್ಲೆಯಲ್ಲಿ ಅಧಿಕೃತ 74 ಸ್ಕ್ಯಾನಿಂಗ್ ಸೆಂಟರ್ | ದ.ಕ. ಜಿಲ್ಲೆಯಲ್ಲಿ ಅನುಪಾತ ಏರಿಕೆಯಾಗಿಲ್ಲ
Team Udayavani, Jul 2, 2019, 11:38 AM IST
ಉಡುಪಿ: ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ 1,000 ಗಂಡು ಮಕ್ಕಳಿಗೆ ಹೆಣ್ಣುಮಕ್ಕಳ ಜನನ ಪ್ರಮಾಣ 972 ಆಗಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಈ ಬಾರಿ ಲಿಂಗಾನುಪಾತದಲ್ಲಿ ತುಸು ಚೇತರಿಕೆ ಕಂಡು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕುಸಿಯುತ್ತಿದೆ.
ಜಿಲ್ಲೆಯಲ್ಲಿ 2001ರಲ್ಲಿ 1,000 ಗಂಡುಮಕ್ಕಳಿಗೆ ಹೆಣ್ಣುಮಕ್ಕಳ ಜನನ ಪ್ರಮಾಣ 1,130 ಇತ್ತು. ಅನಂತರ 2011ರಿಂದ 2018ರ ವರೆಗೆ ನಿರಂತರವಾಗಿ ಲಿಂಗಾನುಪಾತ ಕುಸಿತವಾಗಿದೆ. 2014ರಲ್ಲಿ 1,000 ಗಂಡು ಮಕ್ಕಳಿಗೆ ಹೆಣ್ಣುಮಕ್ಕಳ ಜನನ ಪ್ರಮಾಣ ಕೇವಲ 938 ಆಗಿತ್ತು. 2015ರಲ್ಲಿ 936, 2016ರಲ್ಲಿ 929, 2017ರಲ್ಲಿ 929 ಇಳಿಕೆಯಾಗಿತ್ತು. ಸತತ 8 ವರ್ಷಗಳ ಬಳಿಕ 2017-18ರಲ್ಲಿ 941ಕ್ಕೆ ಏರಿಕೆಯಾಗಿದೆ.
ದ.ಕ. ಜಿಲ್ಲೆಯಲ್ಲಿ ಕುಸಿತ
ದ.ಕ. ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಲಿಂಗಾನುಪಾತ 5 ವರ್ಷಗಳಿಂದ ಕುಸಿತ ಕಂಡಿದೆ. 2001ರ ಜನಗಣತಿಯಲ್ಲಿ 1,000 ಗಂಡು ಮಕ್ಕಳಿಗೆ ಹೆಣ್ಣುಮಕ್ಕಳ ಪ್ರಮಾಣ 951 ಇತ್ತು. 2011ರ ಜನಗಣತಿಯ ಪ್ರಕಾರ ಇದು 1,000:945 ಇತ್ತು. ಪ್ರಸ್ತುತ 1000:940 ಹೆಣ್ಣುಮಕ್ಕಳ ಜನನವಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 8 ವರ್ಷದಿಂದ ಒಂದೇ ರೀತಿಯಾದ ಅಂಕಿ ಅಂಶ ಕಾಯ್ದುಕೊಂಡಿರುವುದು ವಿಶೇಷವೇ ಸರಿ.
ಸ್ಕ್ಯಾನಿಂಗ್ ಸೆಂಟರ್ ಮೇಲೆ ನಿಗಾ
ಅವಿಭಜಿತ ದ.ಕ.ದಲ್ಲಿ ಹೆಣ್ಣುಮಕ್ಕಳ ಲಿಂಗಾನುಪಾತ ಕುಸಿದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು 8 ವರ್ಷಗಳಿಂದ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಮೇಲೆ ನಿಗಾ ಇರಿಸಿದ್ದಾರೆ. ಅಧಿಕಾರಿಗಳ ತಂಡ ಆಗಿಂದಾಗ್ಗೆ ಸ್ಕ್ಯಾನಿಂಗ್ ಸೆಂಟರ್ ಮೆಲೆ ದಾಳಿ ನಡೆಸುತ್ತಿದೆ. ಇಲ್ಲಿಯವರೆಗೂ ಪ್ರಸವಪೂರ್ವ ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆ ಪ್ರಕರಣ ದಾಖಲಾಗಿಲ್ಲ.
ಲಿಂಗಾನುಪಾತ ಕುಸಿತಕ್ಕೆ ಕಾರಣ
ಲಿಂಗಾನುಪಾತವೆಂಬುದು ಜನನ ಪ್ರಮಾಣವನ್ನು ಆಧರಿಸಿದೆ. ಜಿಲ್ಲೆಯಲ್ಲಿ ಮಕ್ಕಳ ಜನನ ಪ್ರಮಾಣ ಕಡಿಮೆ. ಇದಕ್ಕೆ ಕಾರಣ ಪೋಷಕರು ಮಕ್ಕಳ ಸಂಖ್ಯೆಯನ್ನು ಒಂದು ಅಥವಾ ಎರಡಕ್ಕೆ ಸೀಮಿತಗೊಳಿಸಿರುವುದು. ವಯಸ್ಸು ಮೀರಿ ಮದುವೆ ಆಗುತ್ತಿರುವುದು ಮಕ್ಕಳ ಲಿಂಗಾನುಪಾತ ವ್ಯತ್ಯಾಸಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. 74 ಅಧಿಕೃತ ಸ್ಕ್ಯಾನಿಂಗ್ ಸೆಂಟರ್ ಉಡುಪಿ ಜಿಲ್ಲೆಯಲ್ಲಿ 74 ಸ್ಕ್ಯಾನಿಂಗ್ ಸೆಂಟರ್‌ಗಳಿವೆ. ಅಲ್ಲಿ ಆಳವಡಿಸಲಾದ ಬಾಲಿಕಾ ತಂತ್ರಾಂಶದಲ್ಲಿ ಯಾರು ಎಷ್ಟು ಬಾರಿ ಸ್ಕ್ಯಾನಿಂಗ್ ಮಾಡಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.
ಪ್ರತ್ಯೇಕ ಕಡತ ಅಗತ್ಯ
ಉಡುಪಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯಕೀಯ ಗರ್ಭಪಾತ ಮತ್ತು ಟಿಒಪಿ ಗರ್ಭಪಾತಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಕಡತ ನಿರ್ವಹಣೆ ಮಾಡಬೇಕಾಗಿದೆ. ಆಗ ಮಾತ್ರ ಗರ್ಭಪಾತ ನಿಖರ ಕಾರಣವನ್ನು ಕಂಡು ಹಿಡಿಯಬಹುದಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯಕೀಯ ಗರ್ಭಪಾತ ಮತ್ತು ಟಿಒಪಿ ಗರ್ಭಪಾತ ಪ್ರಕರಣಗಳನ್ನು ಒಂದೇ ಕಡತದಲ್ಲಿ ಉಲ್ಲೇಖೀಸಿರುವುದರಿಂದ ಗರ್ಭಪಾತಕ್ಕೆ ನಿಖರ ಕಾರಣ ತಿಳಿದು ಬರುತ್ತಿಲ್ಲ ಎಂದು ಜಿಲ್ಲಾ ಪ್ರಭಾರ ಡಿಎಚ್‌ಒ ಡಾ| ರಾಮ್ ರಾವ್ ತಿಳಿಸಿದ್ದಾರೆ.
ಲಿಂಗಾನುಪಾತ ಹೆಚ್ಚಳಕ್ಕೆ ಪ್ರಯತ್ನ
ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ. “ನನ್ನ ಮಗು ನನ್ನ ಗ್ರಾಮ’ದ ಅಡಿಯಲ್ಲಿ ಲಿಂಗಾನುಪಾತದ ಮಾಹಿತಿಯನ್ನು ಗ್ರಾ.ಪಂ. ಬೋರ್ಡ್‌ನಲ್ಲಿ ಆಳವಡಿಸಲಾಗಿದೆ. ಅಂಗನವಾಡಿ ಕಾರ್ಯಕರ್ತರ ಮೂಲಕ ಭಾಗ್ಯ ಲಕ್ಷ್ಮೀ ಯೋಜನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಶಿಕ್ಷಣ ಇಲಾಖೆಯಿಂದ ಹೆಣ್ಣು ಮಗು ರಕ್ಷಿಸಿ ಮತ್ತು ಓದಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೈದ್ಯ ತಜ್ಞರಿಲ್ಲದ ಕ್ಲಿನಿಕ್‌ಗಳ ಸ್ಕ್ಯಾನಿಂಗ್ ಸೆಂಟರ್ ಜಪ್ತಿ ಮಾಡಲಾಗಿದೆ. ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ನಿಗಾವಹಿಸಲಾಗಿದೆ ಎಂದು ಜಿಲ್ಲಾ ಪ್ರಭಾರ ಡಿಎಚ್‌ಒ ಡಾ| ರಾಮ್ ರಾವ್ ತಿಳಿಸಿದ್ದಾರೆ.
ಭ್ರೂಣಲಿಂಗ ಪತ್ತೆ ಮಾಡುವ ಕುರಿತು ಸಾರ್ವಜನಿಕರಿಗೆ ತಿಳಿದು ಬಂದರೆ ಇಲಾಖೆಯ ದೂರವಾಣಿ 080-2527499 ದೂರು ನೀಡಬಹುದು. ಮಾಹಿತಿದಾರರನ್ನು ಗೌಪ್ಯವಾಗಿ ಇಡಲಾಗುತ್ತದೆ ಮತ್ತು ಅವರಿಗೆ ಬಹುಮಾನ ನೀಡಲಾಗುತ್ತದೆ.
ಡಾ| ರಾಮ್ ರಾವ್, ಪ್ರಭಾರ ಡಿಎಚ್‌ಒ ಉಡುಪಿ ಜಿಲ್ಲೆ.
ಜಿಲ್ಲೆಯಲ್ಲಿ ಲಿಂಗಾನುಪಾತ ಉತ್ತಮವಾಗಿದೆ. 0-6 ವರ್ಷದ ಒಳಗಿನ ಮಕ್ಕಳ ಲಿಂಗಾನುಪಾತ 5 ವರ್ಷಗಳಿಂದ ಕಡಿಮೆಯಾಗಿದೆ. ಆದ್ದರಿಂದ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾ.ಪಂ. ಮಟ್ಟದಲ್ಲಿ ತಿಂಗಳಿಗೆ ಹೆಣ್ಣು ಮತ್ತು ಗಂಡು ಮಗು ಜನನದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಡಾ| ಆರ್. ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.