ಜ.20ರಂದು ‘ಶಕಲಕ ಬೂಮ್ ಬೂಮ್’ ಚಿತ್ರ ತೆರೆಗೆ
Team Udayavani, Jan 13, 2023, 3:57 PM IST
ಉಡುಪಿ: ಯುಎನ್ ಸಿನೆಮಾಸ್ ಬ್ಯಾನರ್ ನಡಿ ಮೂಡಿಬಂದಿರುವ ಶಕಲಕ ಬೂಮ್ ಬೂಮ್ ಚಿತ್ರ ಜ.20ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ನಿತ್ಯಾನಂದ ನಾಯಕ್ ನರಸಿಂಗೆ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಚಿತ್ರಕ್ಕೆ ತುಳುನಾಡಿನ ಖ್ಯಾತ ಛಾಯಾಚಿತ್ರ ಗ್ರಾಹಕರಾದ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಕೆಮರಾ ಕೈಚಳಕವಿದೆ. ತಾರಾಗಣದ ಪ್ರಮುಖ ಭೂಮಿಕೆಯಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮಾರ್ಕಮೆ, ಮಿಮಿಕ್ರಿ ಶರಣ, ಕಥಾನಾಯಕನಾಗಿ ಗಾಡ್ವಿನ್ ಸ್ಪಾರ್ಕಲ್ ಹಾಗೂ ಕಥಾನಾಯಕಿಯಾಗಿ ಲಕ್ಷಾ ಶೆಟ್ಟಿ, ರೂಪಶ್ರೀ ವರ್ಕಾಡಿ, ಮನೋಹರ್ ಶೆಟ್ಟಿ ನಂದಳಿಕೆ, ವಸಂತ್ ಮುನಿಯಾಲ್, ಹರೀಶ್ ಗಾಳಿಪಟ, ಸುನಿಲ್ ಕಡ್ತಲ, ಯತೀಶ್ ಪೂಜಾರಿ, ಯಶವಂತ್, ಪ್ರವೀಣ್ ಆಚಾರ್ಯ, ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ರಾಜೇಶ್ವರಿ ಕುಲಾಲ್, ಧೀರಜ್, ಶಿವಾನಂದ, ಯಜ್ಞೇಶ್ ಶೆಟ್ಟಿ ಅಭಿನಯಿಸಿದ್ದಾರೆ. ಹಾಸ್ಯ ಪಾತ್ರಧಾರಿಗಳಾಗಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮರ್ಕಮೆ, ಮಿಮಿಕ್ರಿ ಶರಣ್ ಜತೆಯಾಗುವ ಸನ್ನಿವೇಶಗಳು ನೈಜ್ಯವಾದ ಹಾಸ್ಯದ ಹೊನಲಾಗಿಸಲಿವೆ. ಶುದ್ದ ಭಾಷೆ ಬಳಕೆ, ಉತ್ತಮವಾದ ಸಂಭಾಷಣೆ, ಮನ ಮುಟ್ಟುವಂತಹ ನಟನೆಯನ್ನು ಇದು ಹೊಂದಿದೆ. ತುಳು ಸಿನೆಮಾದಲ್ಲಿ ವೈವಿಧ್ಯತೆ ಇರಬೇಕು ಎಂಬ ನೆಲೆಯಲ್ಲಿ ಕಾಮಿಡಿ, ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಹೊಂದಿರುವ ಹೊಸತನದ ಚಿತ್ರ ಇದಾಗಿದೆ ಎಂದರು.
ಜನರನ್ನು ಮೋಸ ಮಾಡುತ್ತಾ ಬದುಕುವವರು, ಸಂಪತ್ತಿನ ಆಸೆಯಿಂದ ಬಂದು ಒಂದು ಪಾಳು ಬಿದ್ದ ಮನೆಯಲ್ಲಿ ಬಂಧಿಯಾಗುತ್ತಾರೆ. ಆ ಮನೆಯ ರಹಸ್ಯ ಏನು? ಈ ಹಿಂದೆ ಆ ಮನೆಯಲ್ಲಿ ಏನಾಗಿತ್ತು? ನ್ಯಾಯ ಗೆಲ್ಲುತ್ತದಾ? ಸತ್ಯಕ್ಕೆ ಜಯವಿದೆಯಾ? ಎನ್ನುವ ವಿಶಿಷ್ಟವಾದ ಕಥಾಹಂದರವನ್ನು ಚಿತ್ರ ಹೊಂದಿದೆ ಎಂದು ನಿರ್ದೇಶಕ ಶ್ರೀಶ ಎಳ್ಳಾರೆ ತಿಳಿಸಿದರು.
ಉಡುಪಿ, ಸುರತ್ಕಲ್, ಮಂಗಳೂರು, ಪಡುಬಿದ್ರಿ, ಪುತ್ತೂರು, ಸುಳ್ಯ, ಮೂಡುಬಿದಿರೆ, ಬೆಳ್ತಂಗಡಿ, ಕಾರ್ಕಳ ಸಹಿತ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನೆಮಾ ತೆರೆಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದರು.
ಅಂಗಾಂಗ ದಾನ ಜಾಗೃತಿ
ಮಾನವ ಜನ್ಮ ಶ್ರೇಷ್ಟವಾದದ್ದು ನಮ್ಮ ಜೀವನದ ಅನಂತರ ಇತರರನ್ನು ನಾವು ಬದುಕಿರುವಂತೆ ಮಾಡಲು ಸಾಧ್ಯ. ಅದಕ್ಕಾಾಗಿ ಪ್ರತಿಯೊಬ್ಬರೂ ಇಂದೇ ನಿಮ್ಮ ಚರ್ಮ ಮತ್ತು ಅಂಗಾಂಗಗಳನ್ನು ದಾನ ಮಾಡುವಂತೆ ಚಿತ್ರತಂಡದ ಸದಸ್ಯರು ವಿನಂತಿಸಿಕೊಂಡರು.
ಚಿತ್ರತಂಡದ ಅಭಿಲಾಷ್, ರಾಜೇಶ್ವರಿ ಕುಲಾಲ್, ಶ್ರುತಿನ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.