ಆಧುನಿಕ ಭಗೀರಥ ಸುಧಾಕರನ ಪ್ರಯತ್ನದಿಂದ ಮೈದುಂಬಿದ ಶಾಂಭವಿ
Team Udayavani, Nov 28, 2018, 1:35 AM IST
ಬೆಳ್ಮಣ್: ಬತ್ತುವ ಭೀತಿಯಲ್ಲಿದ್ದ ಕಾರ್ಕಳದ ಸಂಕಲಕರಿಯದ ಶಾಂಭವಿ ನದಿ ಇದೀಗ ಮತ್ತೆ ಮೈದುಂಬಿದೆ. ಪ್ರಗತಿಪರ ಕೃಷಿಕ ಸುಧಾಕರ ಸಾಲ್ಯಾನ್ ಅವರ ಅವಿರತ ಯತ್ನ ಫಲಕೊಟ್ಟಿದೆ. ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರಾಕೇಶ್, ಸುಧಾಕರರ ಈ ಪ್ರಯತ್ನಕ್ಕೆ ಬೆಂಬಲ ನೀಡಿದ್ದು ಇಲಾಖೆಯಿಂದ ಪೂರಕ ಹಲಗೆಗಳನ್ನು ಪೂರೈಸುವಲ್ಲಿ ಸಹಕರಿಸಿದ್ದಾರೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸುದಾಕರ ಅವರು ನದಿಗೆ ಹಲಗೆ ಹಾಕಿ ನೀರು ಶೇಖರಣೆ ಕಾರ್ಯ ಮಾಡುತ್ತಿದ್ದು ಶ್ಲಾಘನೆಗೆ ಪಾತ್ರವಾಗಿದ್ದಾರೆ.
ಕೃಷಿಗೆ ಪೂರಕ
ನವೆಂಬರ್- ಡಿಸೆಂಬರ್ ತಿಂಗಳು ಬಂತೆಂದರೆ ಗ್ರಾಮೀಣ ಪ್ರದೇಶದಲ್ಲಿನ ರೈತರು ಇನ್ನೊಂದು ಬೆಳೆಗೆ ಸಿದ್ಧರಾಗುತ್ತಾರೆ. ಈ ತಿಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುವುದರಿಂದ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿ ನೀರಿನ ಮಟ್ಟವನ್ನು ಹೆಚ್ಚಿಸಿ ಕೃಷಿ ಭೂಮಿಗೆ ನೀರುಣಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಅದರಂತೆ ಈ ಬಾರಿಯೂ ಸುಧಾಕರ ಅವರ ನೇತೃತ್ವದಲ್ಲಿ ಸಂಕಲಕರಿಯ ಅಣೆಕಟ್ಟು ಮೈದುಂಬಿದೆ.
ಮಾಜಿ ಸಚಿವರ ಪ್ರೇರಣೆ
ಕಳೆದ ಎಂಟು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಅಣೆಕಟ್ಟು ಕೆಲ ವರ್ಷಗಳಲ್ಲಿ ಸಮರ್ಪಕ ನಿರ್ವಹಣೆಯಿಲ್ಲದೆ ನೇಪಥ್ಯಕ್ಕೆ ಸರಿದಿತ್ತು. ಇದರಿಂದ ಬೇಸತ್ತ ಕೃಷಿಕರು ಸುಧಾಕರ ಸಾಲ್ಯಾನ್‌ರ ನೇತೃತ್ವದಲ್ಲಿ ಯಾವುದೇ ಅನುದಾನಕ್ಕೆ ಕಾಯದೆ ಶ್ರಮದಾನದ ಮೂಲಕ ಹಲಗೆಗಳನ್ನು ಜೋಡಿಸಿ ನದಿಯಲ್ಲಿ ನೀರು ಸಂಗ್ರಹವಾಗುವಂತೆ ಮಾಡಿ ಇತರರಿಗೆ ಮಾದರಿಯಾಗಿದ್ದರು. ಈ ಶ್ರಮದಾನದ ವೇಳೆ ಅಂದಿನ ಶಾಸಕ ಕೆ. ಅಭಯಚಂದ್ರ ಜೈನ್ 700ಕ್ಕೂ ಮಿಕ್ಕಿ ಹಲಗೆಗಳನ್ನು ನೀಡಿ ಸಹಕರಿಸಿದ್ದರು.
ಈ ಭಾಗದ ಜಲಮೂಲ
ಶಾಂಭವಿ ನದಿಗೆ ಕಟ್ಟಲಾದ ಅಣೆಕಟ್ಟಿಗೆ ಪ್ರತಿ ವರ್ಷ ಹಲಗೆ ಹಾಕುವುದರಿಂದ ನೀರಿನ ಮಟ್ಟ ಹೆಚ್ಚಾಗಿ ಐಕಳ, ಮುಂಡ್ಕೂರು, ಪಾಲಡ್ಕ ಹಾಗೂ ಕಲ್ಲಮುಂಡ್ಕೂರು ಪಂಚಾಯತ್‌ನ ವ್ಯಾಪ್ತಿಯ ಕೃಷಿಕರು ಹಾಗೂ ಸಂಕಲಕರಿಯ, ಏಳಿಂಜೆ, ಪೊಸ್ರಾಲು, ಕೊಟ್ರಪಾಡಿ, ಪಟ್ಟೆ ಕ್ರಾಸ್ ಮತ್ತಿತರರ ಗ್ರಾಮದ ರೈತರಿಗೆ ವರದಾನವಾಗಿದೆಯಲ್ಲದೆ ಪರಿಸರದ ಬಾವಿಗಳಲ್ಲೂ ನೀರಿನ ಒರತೆ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ನೀಗುತ್ತಿದೆ.
ಕೃಷಿ ಭೂಮಿಗೆ ಪ್ರಯೋಜನ
ಅಣೆಕಟ್ಟಿಗೆ ಹಲಗೆ ಹಾಕಲು-ತೆಗೆಯಲು ಸುಮಾರು 70-75 ಸಾವಿರ ರೂ. ಖರ್ಚು ಇದೆ, ಇಲಾಖೆಯಿಂದ ಸಾವಿರ ರೂ ಮಾತ್ರ ಬರುತ್ತದೆ. ಅದೂ ಸಕಾಲಕ್ಕೆ ಸಿಗುವುದಿಲ್ಲ. ಆದರೆ ಇಲ್ಲಿ ನೀರು ಸಂಗ್ರಹವಾದರೆ ನೂರಾರು ಎಕರೆ ಕೃಷಿ ಭೂಮಿಗೆ ಪ್ರಯೋಜನ ಇದೆ. ಕೃಷಿಕರು, ಸಾರ್ವಜನಿಕರು, ಪಂಚಾಯತ್‌ಗಳು, ಇಲಾಖೆ ಗಮನ ಹರಿಸಬೇಕಾಗಿದೆ.
– ಸುಧಾಕರ ಸಾಲ್ಯಾನ್, ಐಕಳ ಗ್ರಾಮ ಪಂಚಾಯತ್ ಸದಸ್ಯ (ಕಿಂಡಿ ಅಣೆ ಕಟ್ಟು ವಿನ ನಿರ್ವಾಹಕ)
ಬೆಂಬಲ ಅಗತ್ಯ
ಸುಧಾಕರ ಸಾಲ್ಯಾನ್‌ರವರ ಈ ಸಾಧನೆಗೆ ಕೃಷಿಕರು ಮತ್ತು ಇಲಾಖೆಯವರು ಪೂರಕ ಬೆಂಬಲ ನೀಡಬೇಕಾಗಿದೆ.
– ಸುಧೀರ್ ಶೆಟ್ಟಿ , ಕೃಷಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.