![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 27, 2019, 1:00 AM IST
ಮಣಿಪಾಲ: ಕೆಲವು ಹೊಟೇಲ್, ಲಾಡ್ಜ್, ರೆಸ್ಟಾರೆಂಟಿನವರು ಚರಂಡಿಗೆ ಕೊಳಚೆ ನೀರು ಹಾಯಿಸುವ ಪರಿಣಾಮ ಮಣಿಪಾಲ ರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹವಾಗಿದೆ. ಲಕ್ಷ್ಮೀಂದ್ರನಗರದ ಮೇಲ್ಭಾಗದ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿದ್ದು ರಸ್ತೆಯಲ್ಲಿ ಹರಿಯುತ್ತಿದೆ. ವಾಸನೆಯ ಜತೆಗೆ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಕಾರಣ ಏನು?
ಹೊಟೇಲ್, ಲಾಡ್ಜ್, ರೆಸ್ಟಾರೆಂಟ್‌ಗಳ ಸೇಪ್ಟಿ ಟ್ಯಾಂಕ್‌ನಲ್ಲಿ ನೀರು ಇಂಗದೆ ಇರುವುದರಿಂದ ಓವರ್‌ಫ್ಲೋ ಆಗಿ ಚರಂಡಿಗೆ ಹರಿಯುವುದು ಒಂದು ಕಾರಣವಾದರೆ, ಕೆಲವರು ನೇರವಾಗಿ ಚರಂಡಿಗೇ ಅಕ್ರಮವಾಗಿ ಸಂಪರ್ಕ ನೀಡಿದ್ದಾರೆ. ಕೆಲವರು ಸಾಕಷ್ಟು ಸಾಮರ್ಥ್ಯದ ಸೇಪ್ಟಿ ಟ್ಯಾಂಕ್ ನಿರ್ಮಿಸಿಲ್ಲ. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಚರಂಡಿಯನ್ನು ನಿರ್ಮಿಸಲಾಗುತ್ತಿದೆ. ಹಿಂದಿನ ಮೋರಿಗಳನ್ನು ತೆಗೆಯಲಾಗಿದ್ದು ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಕಾಮಗಾರಿ ನಡೆಯುತ್ತಿರುವ ರಸ್ತೆಯ ಭಾಗದಲ್ಲಿ ಮಣ್ಣು ಹಾಕಿ ಕೊಳಚೆ ನೀರು ಕೆಳಗೆ ಹರಿಯದಂತೆ ಬ್ಲಾಕ್ ಮಾಡಲಾಗಿದೆ. ಹಾಗಾಗಿ ನೀರು ಸಂಚಾರವಿರುವ ರಸ್ತೆಯಲ್ಲಿ ಹರಿಯುತ್ತಿದೆ.
ಏನು ಕ್ರಮ?
ನಗರಸಭೆಯ ಅಧಿಕಾರಿಗಳು ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿರುವುದನ್ನು ಗಮನಿಸಿ ಸಿಮೆಂಟ್ ಸ್ಲಾéಬ್‌ಗಳನ್ನು ಒಡೆದು ಅಕ್ರಮ ಸಂಪರ್ಕಗಳನ್ನು ಬ್ಲಾಕ್ ಮಾಡಿಸುತ್ತಿದ್ದಾರೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಈ ಕಾರ್ಯ ಆಗಿಲ್ಲ.
ನೊಟೀಸ್‌ಗೆ ಬೆಲೆ ಇಲ್ಲ
ಚರಂಡಿಗೆ ಕೊಳಚೆ ನೀರು ಬಿಡುವುದರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿ ನಗರಸಭೆ ಹಲವು ಬಾರಿ ನೊಟೀಸ್‌ಗಳನ್ನು ಜಾರಿ ಮಾಡಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ತೊಂದರೆ ಆಗುತ್ತಿದೆ.
ರಸ್ತೆಯಲ್ಲಿ ಕೊಳಚೆ ನೀರು ಹರಿಯುವುದರಿಂದ ಪಾದಚಾರಿಗಳಿಗೆ, ಮಕ್ಕಳಿಗೆ, ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ರಸ್ತೆಗೆ ಕೊಳಚೆ ನೀರು ಬಿಡುವುದನ್ನು ನಗರಸಭೆ ಅಧಿಕೃತರು ತಡೆಯಬೇಕು.
-ಪ್ರಶಾಂತ್, ಸ್ಥಳೀಯ ನಿವಾಸಿ
ನೊಟೀಸ್ ನೀಡಲಾಗಿದೆ
ಚರಂಡಿಗೆ ಕೊಳಚೆ ನೀರನ್ನು ಬಿಡುತ್ತಿರುವವರಿಗೆ ನೊಟೀಸ್ ನೀಡಲಾಗಿದೆ. ಕೊಳಚೆ ನೀರು ಸಂಪರ್ಕಗಳನ್ನು ಬ್ಲಾಕ್ ಮಾಡಿಸಲಾಗುತ್ತಿದೆ.
-ಕರುಣಾಕರ್, ಹೆಲ್ತ್ ಇನ್‌ಸ್ಪೆಕ್ಟರ್
You seem to have an Ad Blocker on.
To continue reading, please turn it off or whitelist Udayavani.