ಶೀಂಟೂರು ನಾರಾಯಣ ರೈ ಮಹಾನ್ ಶಿಕ್ಷಣ ಪ್ರೇಮಿ
ಶೀಂಟೂರು ಸ್ಮತಿ ಕಾರ್ಯಕ್ರಮದಲ್ಲಿ ಎಂ.ಬಿ. ಸದಾಶಿವ
Team Udayavani, Aug 15, 2019, 5:41 AM IST
ಸವಣೂರು: ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣದೊಂದಿಗೆ ದೇಶಕಟ್ಟುವ ಕಾರ್ಯ ಮಾಡಬಹುದು ಎನ್ನುವ ಸಿದ್ಧಾಂತ ಹೊಂದಿದ್ದ ನಿವೃತ್ತ ಸೇನಾನಿ ಶೀಂಟೂರು ನಾರಾಯಣ ರೈ ಅವರು ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆ ನೀಡಿದ ಮಹಾನ್ ಶಿಕ್ಷಣ ಪ್ರೇಮಿ ಎಂದು ಸುಳ್ಯ ಸಾಂದೀಪ್ ವಿಶೇಷ ಮಕ್ಕಳ ಶಾಲಾ ಅಧ್ಯಕ್ಷ ಎಂ.ಬಿ. ಸದಾಶಿವ ಹೇಳಿದರು.
ಅವರು ಬುಧವಾರ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾ ಚೇತನ ಸಭಾಭವನದಲ್ಲಿ ನಡೆದ ಸ್ಥಾಪಕರ ದಿನಾಚರಣೆ ಶೀಂಟೂರು ಸ್ಮೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದರು. ದೇಶಪ್ರೇಮ ವನ್ನು ಉದ್ದೀಪನಗೊಳಿಸುವ ರೈ ಅವರಂಥವರು ಯುವಕರಿಗೆ ಮಾದರಿ ಆಗಬೇಕು ಎಂದರು.
ಸ್ಥಾಪಕರ ಪ್ರತಿಮೆಗ ಹಾರಾರ್ಪಣೆ ಮಾಡಿದ ಅಬುಧಾಬಿಯ ಉದ್ಯಮಿ ಎಂ. ಜಯರಾಮ ರೈ ಮಿತ್ರಂಪಾಡಿ ಮಾತನಾಡಿ, ಜಗತ್ತಿನಲ್ಲಿ ಶಿಕ್ಷಣವೇ ಎಲ್ಲಿಕ್ಕಿಂತ ದೊಡ್ಡದು, ಉಳಿದೆಲ್ಲವೂ ಅದರ ಮುಂದೆ ಗೌಣ. ನಾವು ಜನ್ಮಭೂಮಿ, ತಾಯಿ, ಗುರುಗಳಿಂದ ಋಣಮುಕ್ತವಾಗಬೇಕಾದರೆ ದೇಶ ಕ್ಕೋಸ್ಕರ ಸಮಾಜಕೋಸ್ಕರ ಒಂದಿಷ್ಟು ಸೇವೆ ಮಾಡಲೇಬೇಕು ಎಂದರು. ಅವರು ಶೀಂಟೂರು ದತ್ತಿ ನಿಧಿಗೆ 1 ಲಕ್ಷ ರೂ. ದೇಣಿಗೆ ಘೋಷಿಸಿದರು.
ಶೀಂಟೂರು ಸಮ್ಮಾನ
ನಿವೃತ್ತ ಕರ್ನಲ್ ಮಂಗಳೂರಿನ ಎನ್. ಬಾಲಕೃಷ್ಣ ಅವರನ್ನು ಶೀಂಟೂರು ಸಮ್ಮಾನ ನೀಡಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎನ್‌ಆರ್ ರೂರಲ್ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ಎನ್. ಸುಂದರ ರೈ ಸವಣೂರು, ಕಸ್ತೂರಿಕಲಾ ಎಸ್. ರೈ ವೇದಿಕೆಯಲ್ಲಿದ್ದರು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಪ್ರಸ್ತಾವನೆಗೈದರು. ಪ್ರಾಂಶುಪಾಲ ಸೀತಾರಾಮ ಕೇವಳ ಸಮ್ಮಾನ ಪತ್ರ ವಾಚಿಸಿದರು. ಉಪಪ್ರಾಂಶುಪಾಲೆ ಶಶಿಕಲಾ ಆಳ್ವ, ಉಪನ್ಯಾಸಕರಾದ ವೆಂಕಟ್ರಮಣ, ಕಿರಣ್‌ಚಂದ್ರ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರಶ್ಮಿ ಪದವಿ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ ಎಸ್ ರೈ ವಂದಿಸಿದರು. ಉಪನ್ಯಾಸಕಿ ರಶ್ಮಿ ಕೆ. ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.