ಹೊಂಡ-ಗುಂಡಿಗಳ ಶಿರಿಯಾರ-ಚಾರುಕೊಟ್ಟಿಗೆ ರಸ್ತೆ
ಸಂಪೂರ್ಣ ಹದಗೆಟ್ಟ 5 ಕಿ.ಮೀ. ರಸ್ತೆ ; ವಾಹನ ಸಂಚಾರವೇ ದುಸ್ತರ
Team Udayavani, Aug 20, 2019, 5:13 AM IST
ವಿಶೇಷ ವರದಿ-ಹೆಸ್ಕಾತ್ತೂರು: ಶಿರಿಯಾರದಿಂದ ಚಾರು ಕೊಟ್ಟಿಗೆ ಕಡೆಗೆ ಸಂಚರಿಸುವ ಸುಮಾರು 5 ಕಿ.ಮೀ. ಅಂತರದ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿದ್ದು, ಸಂಪೂರ್ಣ ಹದಗೆಟ್ಟು ಹೋಗಿದೆ. ಈ ಮಾರ್ಗದಲ್ಲಿ ವಾಹನ ಸವಾರರು ಸಂಚರಿಸುವುದೇ ಕಷ್ಟಕರವಾಗಿದೆ.
ಶಿರಿಯಾರದಿಂದ ಕೊರ್ಗಿ, ಹೆಸ್ಕತ್ತೂರು, ಚಾರುಕೊಟ್ಟಿಗೆಗೆ ಸಂಚರಿಸುವ ಪ್ರಮುಖ ಮಾರ್ಗ ಇದಾಗಿದ್ದು, ನಿತ್ಯ ನೂರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ.
ಬೃಹತ್ ಹೊಂಡಗಳು
ಈ ಮಾರ್ಗದುದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ಬಾಯ್ದೆರೆದುಕೊಂಡಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಅದರಲ್ಲೂ ಈಗ ಮಳೆಗೆ ರಸ್ತೆಯಿಡೀ ನೀರು ನಿಂತಿದ್ದು, ರಸ್ತೆಯಲ್ಲಿ ಎಲ್ಲಿ ಹೊಂಡ ಇದೆ, ಎಲ್ಲಿ ರಸ್ತೆ ಸರಿ ಇದೆ ಎನ್ನುವುದೇ ತಿಳಿಯದ ಸ್ಥಿತಿ. ರಸ್ತೆ ಸರಿ ಇದೆ ಎಂದು ವಾಹನ ಚಲಾಯಿಸಿದರೆ ಗುಂಡಿಗೆ ಬಿದ್ದು, ಎಡವಿ ಬೀಳುವ ಸಂಭವವೂ ಇದೆ.
ಗುಡ್ಡಟ್ಟುಗೆ ಸಂಪರ್ಕ ರಸ್ತೆ
ಕೊರ್ಗಿಯಿಂದ ಇದೇ ಮಾರ್ಗವಾಗಿ ಪುರಾಣ ಪ್ರಸಿದ್ಧ ಗುಡ್ಡಟ್ಟು ಗಣಪತಿ ದೇವಸ್ಥಾನಕ್ಕೆ ತೆರಳಲು ಹತ್ತಿರದ ರಸ್ತೆ ಇದಾಗಿದೆ.
ಬಸ್ ಸಂಚಾರಕ್ಕೂ ಅಡ್ಡಿ
ಶಿರಿಯಾರದಿಂದ ಹೆಸ್ಕಾತ್ತೂರು ಮೂಲಕವಾಗಿ ಇದೇ ಮಾರ್ಗದಲ್ಲಿ ನಿತ್ಯ ಬಸ್‌ಗಳು ಸಂಚರಿಸುತ್ತಿದ್ದು, ಈ ಹೊಂಡ -ಗುಂಡಿಗಳ ರಸ್ತೆಯಲ್ಲಿ ಬಸ್‌ಗಳು ಸಂಚರಿಸುವುದೇ ಕಷ್ಟಕರವಾಗಿದೆ.
ದುರಸ್ತಿಗೆ ಮನವಿ ಸಲ್ಲಿಕೆ
ಕೊರ್ಗಿ, ಹೆಸ್ಕಾತ್ತೂರು, ಚಾರುಕೊಟ್ಟಿಗೆಗೆ ಸಂಚರಿಸುವ ರಸ್ತೆ ಅಭಿವೃದ್ಧಿಗೆ ಶಾಸಕರು ಅನುದಾನ ಮಂಜೂರು ಮಾಡಿಸಿದ್ದು, ಟೆಂಡರ್ ಕೂಡ ಕರೆಯಲಾಗಿದೆ. ಮಳೆ ಕಡಿಮೆಯಾದ ಬಳಿಕ ಕಾಮಗಾರಿ ಆರಂಭವಾಗಬಹುದು.
– ಶ್ರೀಲತಾ ಸುರೇಶ್ ಶೆಟ್ಟಿ, ಸ್ಥಳೀಯ ಜಿ.ಪಂ. ಸದಸ್ಯರು
ತೇಪೆ ಆದರೂ ಹಾಕಲಿ
ನಾವು ಇದೇ ಮಾರ್ಗವಾಗಿ ದಿನಾಲೂ ಸಂಚರಿಸಬೇಕಾಗುತ್ತದೆ. ಹೊಂಡ – ಗುಂಡಿಗಳಿರುವ ಈ ರಸ್ತೆಯಲ್ಲಿ ಬೈಕ್ ಚಲಾಯಿಸುವುದೇ ಸವಾಲಿನ ಸಂಗತಿ. ರಾತ್ರಿ ವೇಳೆ ಅಂತೂ ನೀರು ನಿಂತು, ಹೊಂಡ, ಗುಂಡಿಗಳು ಇರುವುದು ತಿಳಿಯುವುದೇ ಇಲ್ಲ. ಈಗ ಮಳೆಗಾಲದಲ್ಲಿ ಕನಿಷ್ಠ ತೇಪೆ ಕಾರ್ಯವಾದರೂ ಮಾಡಲಿ ಎನ್ನುವುದಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.