ಶಿರೂರು ಗ್ರಾಮಸಭೆ: ಕರಾವಳಿ ರಸ್ತೆ, ವೈನ್ ಶಾಪ್ ತೆರವು ಗೌಜು
Team Udayavani, Mar 22, 2018, 8:10 AM IST
ಬೈಂದೂರು: ಗ್ರಾಮ ಪಂಚಾಯತ್ ಕಾರ್ಯಾಲಯ ಶಿರೂರು ಇದರ 2017-18ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ಈ ಬಾರಿಯ ಗ್ರಾಮಸಭೆಯಲ್ಲಿ ಕರಾವಳಿ ರಸ್ತೆ ಅತಿಕ್ರಮಣ ತೆರವು ಹಾಗೂ ಶಿರೂರಿನಲ್ಲಿ ಸೂಕ್ತ ಗ್ರಾಮ ಪಂಚಾಯತ್ ಆನುಮತಿ ಪಡೆಯದ ಕರಾವಳಿ ವೈನ್ ಶಾಪ್ ತೆರವುಗೊಳಿಸಬೇಕೆಂಬ ಕೂಗು ಮಾರ್ಧನಿಸಿದೆ.
ಶಿರೂರು ಕರಾವಳಿಯಲ್ಲಿ ಹೊಸದಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ.ಆದರೆ ರಸ್ತೆ ನಿರ್ಮಿಸುವಾಗ ಈ ಹಿಂದೆ ಪರಿಹಾರ ಪಡೆದು ರಸ್ತೆ ಜಾಗ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಬೇಕೆಂದು ಸ್ಥಳೀಯ ಮುಖಂಡರು ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಅಧಿಕಾರಿಗಳು ತತ್‌ಕ್ಷಣ ರಸ್ತೆ ತೆರವು ಗೊಳಿಸಲು ಸಾಧ್ಯವಾಗುವುದಿಲ್ಲ.ಮಾತ್ರವಲ್ಲದೆ ಮೀನುಗಾರಿಕಾ ರಸ್ತೆಯಾಗಿರುವ ಕಾರಣ ತೆರವು ಗೊಳಿಸಲು ಇಲಾಖೆ ಅನುದಾನ ಮೀಸಲಿರಿಸಿಲ್ಲ.ಮುಂದೆ ಗ್ರಾಮ ಪಂಚಾಯತ್ ಅನುದಾನ ಉಪಯೋಗಿಸಿ ಅತಿಕ್ರಮಣ ತೆರವುಗೊಳಿಸಲಾಗುವುದು ಎಂದು ನಿರ್ಣಯಿಸಲಾಯಿತು. ವೆಂಕಟ ಪೂಜಾರಿ ಕಾಳನಮನೆ ಹಾಗೂ ನಾಗಪ್ಪ ದೊಂಬೆ ಈ ನಿರ್ಣಯವನ್ನು ಅನುಮೋದಿಸಿದರು.
ಕರಾವಳಿ ವೈನ್ಸ್ ತೆರವುಗೊಳಿಸಲು ಪರವಿರೋಧ ವ್ಯಕ್ತವಾದ ಕಾರಣ ನಿರ್ಣಯ ಕೈಗೊಳ್ಳಲಿಲ್ಲ. ಇನ್ನುಳಿದಂತೆ ಇತರ ಮೂಲಭೂತ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.ಸಿ.ಆರ್.ಪಿ. ಲೋಕೇಶ್ ಮೊಗೇರ್ ನೋಡೆಲ್ ಅಧಿಕಾರಿಯಾಗಿ ಆಗಮಿಸಿದ್ದರು.
ಶಿರೂರು ಗ್ರಾ.ಪಂ. ಉಪಾಧ್ಯಕ್ಷ ನಾಗೇಶ್ ಮೊಗೇರ್ ಅಳ್ವೆಗದ್ದೆ, ಜಿ.ಪಂ. ಸದಸ್ಯ ಸುರೇಶ್ ಬಟ್ವಾಡಿ, ತಾ.ಪಂ. ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಮೌಲಾನ ದಸ್ತಗೀರ್, ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಸಹನಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೂರ್ಣಿಮಾ, ಅರಣ್ಯ ಇಲಾಖೆಯ ಸದಾಶಿವ, ಗ್ರಾಮ ಲೆಕ್ಕಾಧಿಕಾರಿ ಸತೀಶ್ ಪಡುವರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾ.ಪಂ. ಸದಸ್ಯರು ಹಾಜರಿದ್ದರು.ಶಂಕರ ಬಿಲ್ಲವ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ರೈಲು ಬಡಿದು ವ್ಯಕ್ತಿ ಸಾವು
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.