ಶೀರೂರು ಶ್ರೀಗಳ ಆರಾಧನೆಗೆ ಮೂಲಮಠ ಸಜ್ಜು
Team Udayavani, Aug 31, 2018, 12:04 PM IST
ಉಡುಪಿ: ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥರು ನಿಧನ ಹೊಂದಿ ಒಂದೂವರೆ ಬಳಿಕ ಆರಾಧನೆಗೆ ಮೂಲಮಠ ಸಜ್ಜಾಗುತ್ತಿದೆ.
ಜು. 19ರಂದು ಸ್ವಾಮೀಜಿ ನಿಧನ ಹೊಂದಿದ ಬಳಿಕ ತನಿಖೆಗಾಗಿ ಮಠವನ್ನು ಸ್ವಾಧೀನಪಡಿಸಿಕೊಂಡಿದ್ದ ಪೊಲೀಸ್ ಇಲಾಖೆ ಆ. 27ರಂದು ಬಿಟ್ಟುಕೊಟ್ಟಿದೆ. ಮಠವು ಪೊಲೀಸರ ವಶದಲ್ಲಿದ್ದ ಕಾರಣ ಎರಡು ಬಾರಿ ಆರಾಧನೆಯನ್ನು ಮುಂದೂಡಲಾಗಿತ್ತು. ಇದೀಗ ಸೆ. 5ರಂದು ಆರಾಧನೆ ನಡೆಸಲು ಶೀರೂರು ಮಠದ ದ್ವಂದ್ವ ಮಠವಾದ ಶ್ರೀ ಸೋದೆ ಮಠ ಸಜ್ಜಾಗುತ್ತಿದೆ. ಸೋಂದಾ ಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಸೋದೆ ಮಠಾಧೀಶರು ಶೀರೂರು ಮಠದ ಮೇಲ್ವಿಚಾರಣೆಗೆ ನಿಗದಿಪಡಿಸಿರುವ ಐವರು ಸದಸ್ಯರ ಸಮಿತಿ ಆರಾಧನೆಗೆ ವ್ಯವಸ್ಥೆ ಮಾಡುತ್ತಿದೆ. ಅಂದೇ ಉಡುಪಿ ಶ್ರೀಕೃಷ್ಣ ಮಠದಲ್ಲಿಯೂ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.
ಸ್ವತ್ಛತಾ ಕಾರ್ಯ
ಶೀರೂರು ಮಠದಲ್ಲಿ ಒಂದು ತಿಂಗಳಿಂದ ಕೇವಲ ಪೂಜೆಗಷ್ಟೇ ಮಾತ್ರ ಅವಕಾಶ ನೀಡಲಾಗಿತ್ತು. ತನಿಖೆಯ ಉದ್ದೇಶದಿಂದ ಯಾವುದೇ ವಸ್ತುಗಳನ್ನೂ ಮುಟ್ಟುವಂತಿರಲಿಲ್ಲ. ಈಗ ಮಠವನ್ನು ಬಿಟ್ಟುಕೊಟ್ಟ ಅನಂತರ ಇಡೀ ಮಠವನ್ನು ಸ್ವತ್ಛಗೊಳಿಸಲಾಗುತ್ತಿದೆ. ಮಠದ ಹೊರಗಿನ ಪರಿಸರವನ್ನೂ ಸ್ವತ್ಛಗೊಳಿಸಲಾಗುತ್ತಿದೆ.
ಸೆ. 5ರಂದು ನವಕ ಪ್ರಧಾನ ಕಲಶಾಭಿಷೇಕವನ್ನು ಮುಖ್ಯಪ್ರಾಣ ದೇವರಿಗೆ ಮಾಡಲಾಗು ವುದು. ವಿವಿಧ ಹೋಮ ಹವನಗಳನ್ನು ನಡೆಸಲಾಗುವುದು. ಪೂಜೆ ಮತ್ತು ಹೋಮದ ಪ್ರಸಾದವನ್ನು ಶ್ರೀ ಲಕ್ಷ್ಮೀವರತೀರ್ಥರ ವೃಂದಾವನಕ್ಕೆ ಸಮರ್ಪಿಸ ಲಾಗುತ್ತದೆ. ಇವೆಲ್ಲದರ ನೇತೃತ್ವವನ್ನು ಸೋದೆ ಮಠದ ದಿವಾನರೂ ಸ್ವತಃ ವೈದಿಕರೂ ಆಗಿರುವ ಪಾಡಿಗಾರು ಶ್ರೀನಿವಾಸ ತಂತ್ರಿಗಳು ವಹಿಸಲಿದ್ದಾರೆ. ಮುಂದೆ ಪ್ರತಿ ಶನಿವಾರ ಸಾರ್ವಜನಿಕರ ಪ್ರವೇಶದೊಂದಿಗೆ ಮುಖ್ಯಪ್ರಾಣ ದೇವರಿಗೆ ರಂಗಪೂಜೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.