ಅಲಂಕಾರದಲ್ಲಿ ನಿಸ್ಸೀಮರು, ಸಂಗೀತ ಪ್ರಿಯರು
Team Udayavani, Jul 20, 2018, 2:42 PM IST
ಉಡುಪಿ: ಶೀರೂರು ಮಠಾಧೀಶರು ಶ್ರೀಕೃಷ್ಣನ ಅಲಂಕಾರದಲ್ಲಿ ನಿಸ್ಸೀಮರು. ವಾದಿರಾಜರು 365 ದಿನ 365 ವಿಧದ ಅಲಂಕಾರಗಳನ್ನು ಮಾಡಿದ್ದರು ಎಂಬ ಉಲ್ಲೇಖದಂತೆ ಶೀರೂರು ಶ್ರೀಗಳು ಕೂಡ ರಾಮಾಯಣ, ಮಹಾಭಾರತ, ಭಾಗವತಗಳ ಸಹಿತ, ಶ್ರೀಕೃಷ್ಣನ ಲೀಲಾಮಾನುಷ ವ್ಯಕ್ತಿತ್ವಗಳನ್ನು ವಿವರಿಸುವ ಗ್ರಂಥಗಳ ಆಧಾರದಲ್ಲಿ ದೃಶ್ಯಗಳನ್ನು ಕಲ್ಪಿಸಿ ದಿನಕ್ಕೊಂದು ಬಗೆಯಲ್ಲಿ ಕೃಷ್ಣನನ್ನು ಅಲಂಕರಿಸಿದ್ದರು. ಅಲ್ಲದೆ, ಶ್ರೀ ಲಕ್ಷ್ಮೀವರತೀರ್ಥರಿಗೆ ಸಂಗೀತ, ಸಂಗೀತೋಪಕರಣಗಳ ಮೇಲೆ ಅಪಾರ ಆಸಕ್ತಿ. 1982ರಿಂದ ವಿವಿಧ ರೀತಿಯ ಸಂಗೀತೋಪಕರಣಗಳನ್ನು ಸಂಗ್ರಹಿಸಲು ಆರಂಭಿಸಿದರು. ಈಗ ಅವುಗಳ ಸಂಖ್ಯೆ ನೂರಾರು. ಇದರಲ್ಲಿ ವೀಣೆ, ಸಿತಾರ್, ತಬಲಾ, ಮೃದಂಗ, ನಾಗಸ್ವರ, ಸ್ಯಾಕೊಫೋನ್, ಕ್ಲಾರೋನೆಟ್ ಹೀಗೆ ದೇಶ ವಿದೇಶಗಳ ಸಂಗೀತೋಪಕರಣಗಳು ಅವರ ಸಂಗ್ರಹದಲ್ಲಿವೆ. 2,600 ರೀತಿಯಲ್ಲಿ ಧ್ವನಿ ಹೊರಸೂಸುವ ಒಂದು ಕಿಟ್ ಇದೆ. ಇದರಲ್ಲಿ ಕಾಡಿನಲ್ಲಿ ಹಕ್ಕಿಗಳ ಚಿಲಿಪಿಲಿಯಿಂದ ಹಿಡಿದು ಹಿಂದಿನ ಕಾಲದ ಲೆಗ್ ಹಾರ್ಮೋನಿಯಂ ತನಕದ ವಿವಿಧ ಧ್ವನಿಗಳಿವೆ. ಆಯಾ ಸಂಖ್ಯೆಗಳನ್ನು ನೆನಪಿಟ್ಟುಕೊಂಡರೆ ಸಾಕು, ಧ್ವನಿ ತಂತಾನೆ ಹೊರಹೊಮ್ಮುತ್ತದೆ.
ಯಾವುದಾದರೂ ಒಂದು ಹೊಸ ಉಪಕರಣವನ್ನು ನೋಡಿದರೆ ಅದರ ಕುರಿತು ಕೂಡಲೇ ವಿಚಾರಣೆ ನಡೆಸಿ ಹಣ ತೆತ್ತು ಖರೀದಿಸುವುದು ಸ್ವಾಮೀಜಿಯವರ ವೈಖರಿ. ಪ್ಯಾಡ್‌ನಲ್ಲಿ ಐದು ವೈವಿಧ್ಯಗಳಿವೆ. 25ರಿಂದ 30 ಲ.ರೂ. ಮೌಲ್ಯದ ಸಂಗೀತೋಪಕರಣಗಳು ಅವರ ಸಂಗ್ರಹದಲ್ಲಿವೆ. ಕಡಲಲ್ಲಿ ಈಜಿ ವಿಶ್ವ ದಾಖಲೆ ಮಾಡಿರುವ ಗೋಪಾಲ ಖಾರ್ವಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅವರೊಂದಿಗೆ ಮೈಲುಗಟ್ಟಲೆ ಈಜಿ ಅಲ್ಲೂ ತಮ್ಮ
ಪ್ರಾವೀಣ್ಯ ಮೆರೆದಿದ್ದರು. 2008ರ ಸೂರ್ಯಗ್ರಹಣದಂದು ಸಮುದ್ರದಲ್ಲಿ 3 ಗಂಟೆ ಸೂರ್ಯಾಭಿಮುಖವಾಗಿ ಶವಾಸನದಲ್ಲಿ ಮಳೆಗಾಗಿ “ಪರ್ಜನ್ಯಮಂತ್ರ’ ಜಪಿಸಿದ್ದರು.
ಶಿಕ್ಷ ಣ, ಕಲೆಗೆ ಪ್ರೋತ್ಸಾಹ: ಹಲವಾರು ಶಾಲೆಗಳ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ “ಶ್ರೀಕೃಷ್ಣ ವಿದ್ಯಾನಿಧಿ’ ಯೋಜನೆ ರೂಪಿಸಿ, ಅದರ ಮೂಲಕ 35 ಲಕ್ಷ ರೂ.ವಿದ್ಯಾರ್ಥಿವೇತನ ವಿತರಣೆ ಮಾಡಿರುವ ಹೆಗ್ಗಳಿಕೆ ಶೀರೂರು ಶ್ರೀಗಳದ್ದು. ಶೀರೂರು ಮೂಲಮಠದ ಸಮೀಪದ ಹರಿಖಂಡಿಗೆ ಶಾಲೆಗೆ ಸ್ವಾಗತ ಗೋಪುರ ನೀಡಲಾಗಿದೆ. ಕಲೋಪಾಸಕರಾದ ಶ್ರೀಪಾದರು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ಪ್ರೋತ್ಸಾಹ ನೀಡಿದ್ದಾರೆ. ಪ್ರಸಿದ್ಧ ಯಕ್ಷಗಾನ ತಂಡಗಳು 200ಕ್ಕೂ ಹೆಚ್ಚು ದಿನಗಳಲ್ಲಿ ಪ್ರದರ್ಶನ ನೀಡಿವೆ. ಶಿವಮಣಿ, ಪ್ರವೀಣ್ ಗೋಡಿVಂಡಿ ಅವರಂಥ ಪ್ರಸಿದ್ಧ ಕಲಾವಿದರು ಕಲಾಸೇವೆ ಸಮರ್ಪಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ 4 ಬಾರಿ ನಾಗಮಂಡಲೋತ್ಸವ ನಡೆದಿರುವುದು ದಾಖಲೆ . ಶ್ರೀಕೃಷ್ಣಭಕ್ತಾಗ್ರೇಸರ ಕನಕದಾಸರ ಜಯಂತಿಯನ್ನು ದೊಡ್ಡ
ಮಟ್ಟದಲ್ಲಿ ಆಚರಿಸಲಾ ಯಿತು. ಎರಡು ಬಾರಿ ತಿರುಪತಿ ಶ್ರೀನಿವಾಸ ದೇವರಿಗೆ ಕಲ್ಯಾಣೋತ್ಸವ, 25 ಬಾರಿ ಅಖಂಡ ಸಪೊ¤àತ್ಸವ ನಡೆದಿರು ವುದು ವಿಶೇಷ. ಅಂತರ್ಜಾಲದ ಮೂಲಕ ಜಗತ್ತಿನೆಲ್ಲೆಡೆ ಇರುವ ಭಕ್ತರಿಗೆ ಶ್ರೀಕೃಷ್ಣಪೂಜೆಯ ವೈಭವ, ಪ್ರವಚನವನ್ನು ಬಿತ್ತರಿಸುವ ವ್ಯವಸ್ಥೆ ಮಾಡಿದರು. ಅಬಾjರಣ್ಯ ಉಡುಪಿಯ ಪೌರಾಣಿಕ ಕತೆಯನ್ನು ಸಾರುವ ಪ್ರಾಚೀನ ತಾಣ. ಉಡುಪಿ ನಗರದ ಪೂರ್ಣಪ್ರಜ್ಞ ಕಾಲೇಜಿನ ಆವರಣದಲ್ಲಿರುವ ಇದು ಶೀರೂರು ಮಠಕ್ಕೆ ಸೇರಿದ ಸ್ಥಳ. ಇಲ್ಲಿನ ನಾಗನಗುಡಿಯನ್ನು ಅಷ್ಟಪಟ್ಟಿಯಾಕೃತಿಯಲ್ಲಿ ಅಭಿವೃದ್ಧಿಪಡಿಸಿದ
ಶ್ರೀಪಾದರು ಸರೋವರವನ್ನೂ ಅಭಿವೃದ್ಧಿಪಡಿಸಿದ್ದಾರೆ.
ಶ್ರೀಕೃಷ್ಣ ಆರೋಗ್ಯ ನಿಧಿ: ರೋಗಿಯ ಬದುಕಿಗೆ ಆರ್ಥಿಕ ಸಮಸ್ಯೆ ಮಾರಕವಾಗಬಾರದು ಎಂಬ ಉದ್ದೇಶದಿಂದ ಶ್ರೀಕೃಷ್ಣ ಆರೋಗ್ಯ ನಿಧಿಯನ್ನು ಆರಂಭಿಸಿ ಪ್ರತಿ ತಿಂಗಳ ಅಂತ್ಯದಲ್ಲಿ ಸುಮಾರು 30ರಿಂದ 35 ರೋಗಿಗಳಿಗೆ 5 ಲಕ್ಷ ರೂ.ಗಳನ್ನು ಆಸ್ಪತ್ರೆ ವೆಚ್ಚಕ್ಕಾಗಿ ನೀಡಿದ್ದು ಕೃಷ್ಣ ಮಠದ ಇತಿಹಾಸದಲ್ಲೇ ಮೊದಲು. ತಮ್ಮ 2 ವರ್ಷಗಳ ಪರ್ಯಾಯದ ಅವಧಿಯಲ್ಲಿ ಸುಮಾರು 1 ಕೋಟಿ ರೂ.ಗಳನ್ನು ಕೇವಲ ಶ್ರೀಕೃಷ್ಣಆರೋಗ್ಯ ನಿಧಿಗಾಗಿ ವ್ಯಯಿಸಿದ್ದು ಶ್ರೀಗಳ ಸಮಾಜಮುಖೀ ಚಿಂತನೆಗೊಂದು ನಿದರ್ಶನ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರವಾಗಿ
ಸಂಭವಿಸುತ್ತಿರುವ ಅಪಘಾತಗಳಲ್ಲಿ ಆ್ಯಂಬುಲೆನ್ಸ್‌ನ ಕೊರತೆಯಿಂದಾಗಿ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಶ್ರೀಪಾದರು ತೆಕ್ಕಟ್ಟೆ, ಕಾಪು ಹಾಗೂ ಕೋಟೇಶ್ವರದ 4 ಪ್ರಸಿದ್ಧ ಸಂಘಟನೆಗಳಿಗೆ ಉಚಿತ ಆ್ಯಂಬುಲೆನ್ಸ್ ನೀಡಿ ಗಾಯಾಳುಗಳಿಗೆ ಪುನರ್ಜನ್ಮ ಕಲ್ಪಿಸುವ ಸೇವೆಗೆ ನಾಂದಿ ಹಾಡಿದರು. ಬಡ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕಕ್ಕಾಗಿ ಪ್ರತಿವರ್ಷ 5 ಲಕ್ಷ ರೂ.ಗೂ ಅಧಿಕ ಹಣ ವಿನಿಯೋಗಿಸು ತ್ತಿ ದ್ದಾರೆ. ತಾವೇ ಡ್ರೈವ್ ಮಾಡಿದ್ದ ಶ್ರೀಗಳು: ಸೋಮ ವಾರದಂದು ಶೀರೂರು ಮೂಲಮಠ ಪರಿಸರದಲ್ಲಿ ನಡೆದಿದ್ದ ವನಮಹೋತ್ಸವ ಸಂದರ್ಭದಲ್ಲಿ
ಶೀರೂರು ಶ್ರೀಗಳು ತಮ್ಮ ಪೆಜಾರೊ ಕಾರನ್ನು ತಾವೇ ಡ್ರೈವ್ ಮಾಡುತ್ತಿದ್ದರು
ಶ್ರೀ ಕೃಷ್ಣನಿಗೆ ವಿವಿಧ ರೀತಿಯ ಅಲಂಕಾರ ಮಾಡುವುದರಲ್ಲಿ ಸಿದ್ಧ ಹಸ್ತರಾಗಿದ್ದ ಅವರು ವಿವಿಧ ಕಲಾ
ಪ್ರಕಾರಗಳಲ್ಲಿ ಪರಿಣತಿ ಹೊಂದಿದ್ದರು. ಶ್ರೀಗಳ ಸಾವು ಅಸಹಜ ಎಂದು ವ್ಯಕ್ತವಾದಲ್ಲಿ ಅನಿವಾರ್ಯವಾಗಿ ತನಿಖೆಗೆ
ಆದೇಶಿಸಬೇಕಾಗುತ್ತದೆ. ಆದರೆ, ಇದುವರೆಗೆ ಅಂತಹ ದೂರು ಅಥವಾ ಆರೋಪಗಳು ಬಂದಿಲ್ಲ
●ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಸಂಸ್ಕೃತ ಮತ್ತು ಮಧ್ವ ತತ್ವಗಳಲ್ಲಿ ವಿದ್ವಾಂಸರಾ ಗಿದ್ದು
ಪರ್ಯಾಯದ ಅವಧಿಯಲ್ಲಿ ನಿತ್ಯವೂ ಶ್ರೀಕೃಷ್ಣನಿಗೆ
ವೈವಿಧ್ಯಮಯವಾದ ಅಲಂಕಾರಗಳನ್ನು ಮಾಡುತ್ತಿದ್ದರು.
● ಡಾ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ
ಅತ್ಯಂತ ಕಿರಿಯ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದ
ಅವರು, ಸಾಹಿತ್ಯ ಮತ್ತು ಸಂಗೀತದ ಬಗ್ಗೆ ವಿಶೇಷ ಆಸಕ್ತಿ
ಹೊಂದಿದ್ದರು. ಸಮಾಜವನ್ನು ಉತ್ತಮ ರೀತಿಯಲ್ಲಿ
ಮುನ್ನಡೆಸುವಲ್ಲಿ ಶ್ರೀಗಳು ಮಾರ್ಗದರ್ಶಕರಾಗಿದ್ದರು.
●ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.
ಕಿರಿಯ ವಯಸ್ಸಿನಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿ
ಸಾಮಾಜಿಕ ಕಾರ್ಯದಲ್ಲಿ ಸಕ್ರಿಯರಾಗಿದ್ದ
ಶ್ರೀಗಳು ಬಹುಮುಖ ಪ್ರತಿಭೆ ಹೊಂದಿದ್ದರು. ಅವರ
ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
●ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಶೀರೂರು ಶ್ರೀಗಳದ್ದು ಅಸಹಜ ಸಾವು ಎಂದು
ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಈವರೆಗೆ ಯಾರೂ ದೂರು ಕೊಟ್ಟಿಲ್ಲ. ಒಂದು
ವೇಳೆ ದೂರು ಕೊಟ್ಟರೆ ಪರಿಶೀಲಿಸಲಾಗುವುದು.
●ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ
ಶ್ರೀಗಳು ಕಿರಿಯ ವಯಸ್ಸಿನ ಉನ್ನತ ಸಾಧನೆ
ಮಾಡಿದ್ದರು. ಭಕ್ತಾದಿಗಳಿಗೆ ಶ್ರೀಗಳ ಅಗಲಿಕೆ
ತಡೆದುಕೊಳ್ಳುವ ಶಕ್ತಿ ಸಿಗಲಿ.
●ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
ಆಧ್ಯಾತ್ಮಿಕ ಸಾಧನೆಯ ಜತೆಗೆ ಸಾಮಾಜಿಕ ಕಳಕಳಿ
ಹೊಂದಿದ್ದ ಶ್ರೀಗಳು, ಸಮಕಾಲೀನ ಸಮಾಜದ
ಆಗುಹೋಗುಗಳಿಗೆ ಸ್ಪಂದಿಸುತ್ತಿದ್ದರು. ಅಕಾಲಿಕ
ನಿಧನದಿಂದ ಭಕ್ತರು ಸಮರ್ಥ ಮಾರ್ಗದರ್ಶಕರೊಬ್ಬರನ್ನು
ಕಳೆದುಕೊಂಡಂತಾಗಿದೆ.
●ಆರ್.ವಿ.ದೇಶಪಾಂಡೆ, ಸಚಿವ
ಶ್ರೀಗಳು ಧಾರ್ಮಿಕ ಕ್ಷೇತ್ರದ ಜತೆಗೆ ಕಲೆ, ಸಂಸ್ಕೃತಿ,
ಕ್ರೀಡೆ ಸೇರಿ ಅನೇಕ ವಿಚಾರದಲ್ಲಿ ಪರಿಣತಿ,
ಅನುಭವ ಹೊಂದಿದ್ದರು. ಜನ ಸಾಮಾನ್ಯರಿಗೆ ಹತ್ತಿರದಲ್ಲಿ
ಸಿಗುವ ಸ್ವಾಮೀಜಿಯಾಗಿದ್ದರು.
●ಕೋಟ ಶ್ರೀನಿವಾಸ ಪೂಜಾರಿ,
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ
ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಅಪಾರ
ಆಸಕ್ತಿ ಹೊಂದಿದ್ದ ಶ್ರೀಗಳು ಕಿರಿಯ
ವಯಸ್ಸಿÉ ಸನ್ಯಾಸ ಸ್ವೀಕರಿಸಿ, ಸಮಾಜ ಮುನ್ನಡೆಸುವ ಜವಾಬ್ದಾರಿ ವಹಿಸಿದ್ದರು.
●ಡಾ.ಜಯಮಾಲ, ಸಚಿÊ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.