ಮುಂಬೈನಿಂದ ಉಡುಪಿಗೆ ಆಗಮಿಸಿದ್ದ ಬಸ್ ಗಳ ತಪಾಸಣೆ: ಆಸ್ಪತ್ರೆಗೆ ದಾಖಲಾದ ಎಂಟು ಶಂಕಿತರು
Team Udayavani, Mar 22, 2020, 5:37 PM IST
ಮಣಿಪಾಲ: ಮುಂಬೈನಿಂದ ಊರಿಗೆ ಆಗಮಿಸಿದ್ದ ಸುಮಾರು ಐದು ಖಾಸಗಿ ಬಸ್ ಗಳನ್ನು ಬೈಂದೂರಿನ ಶಿರೂರು ಗಡಿಯಲ್ಲಿ ತಪಾಸಣೆ ಮಾಡಿದ್ದು, ಒಟ್ಟು ಎಂಟು ಮಂದಿ ಸೋಂಕು ಶಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಬಸ್ ನಲ್ಲಿ ಉಳಿದವರ ವಿಳಾಸ ಮತ್ತು ಮೊಬೈಲ್ ನಂಬರ್ ಗಳನ್ನು ಪಡೆಯಲಾಗಿದೆ. ಇವರ ಮೇಲೂ ನಿಗಾ ಇಡಲಾಗಿದೆ ಎಂದರು.
ಸದ್ಯಬೈಂದೂರಿನ ಶಿರೂರಿನಲ್ಲಿ ಮಾತ್ರವೇ ಚೆಕ್ಫೋಸ್ಟ್ ತೆರೆದಿದ್ದು, ಹೆಜಮಾಡಿ ಟೋಲ್ಗೇಟ್ನಲ್ಲಿ ಚೆಕ್ಫೋಸ್ಟ್ ತೆರೆಯುವ ಇರಾದೆ ಇಟ್ಟುಕೊಂಡಿದ್ದೇವೆ. ಥರ್ಮಲ್ ಗನ್ನ ಕೊರತೆವಿದ್ದು, ಆನ್ಲೈನ್ನಲ್ಲೂ ಸಿಗುತ್ತಿಲ್ಲ. ಈ ಬಗ್ಗೆ ಸರಕಾರಕ್ಕೆ ಬರೆದಿದ್ದು, ಉಪಕರಣ ಪೂರೈಕೆಯಾದ ಕೂಡಲೇ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಿಂದ ಉಡುಪಿಗೆ ಸಂಪರ್ಕಿಸುವ ರಸ್ತೆಯಲ್ಲಿ ಚೆಕ್ಫೋಸ್ಟ್ ತೆರೆಯಲಾಗುವುದೆಂದು ಜಿಲ್ಲಾಧಿಕಾರಿ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.