ಶಿರ್ವ ಆರೋಗ್ಯ ಮಾತಾ ಚರ್ಚ್ ವಾರ್ಷಿಕ ಮಹೋತ್ಸವ ಸಂಪನ್ನ
ಮಾತೆಯ ಮಕ್ಕಳಾಗಿ ಜೀವನ ರೂಪಿಸಿಕೊಳ್ಳೋಣ:ವಂ| ಡೆನ್ನಿಸ್ ಡೇಸಾ
Team Udayavani, Feb 1, 2023, 6:53 PM IST
ಶಿರ್ವ: ಮಾತೆ ಮೇರಿಯ ವ್ಯಕ್ತಿತ್ವವು ಆಕೆಯ ಆಂತರಿಕ ಸೌಂದರ್ಯದ ಬಳುವಳಿಯಾಗಿದೆ. ನಿಷ್ಕಳಂಕ ಮನೋಭಾವದ ಮಾತೃ ಹೃದಯದ ಮಾತೆ ಮೇರಿಯ ಆದರ್ಶಗಳನ್ನು ಪಾಲಿಸಿಕೊಂಡು ಬದುಕಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಮಾತೆಯ ಮಕ್ಕಳಾಗಿ ಜೀವನ ರೂಪಿಸಿಕೊಳ್ಳೋಣ ಎಂದು ತೊಟ್ಟಂ ಸಂತ ಆ್ಯನ್ಸ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ| ಡೆನ್ನಿಸ್ ಡೇಸಾ ಹೇಳಿದರು.
ಅವರು ಬುಧವಾರ ಬೆಳಿಗ್ಗೆ ಶಿರ್ವ ಆರೋಗ್ಯ ಮಾತಾ (ಸಾವುದ್ ಅಮ್ಮನವರ)ದೇವಾಲಯದ ವಾರ್ಷಿಕ ಮಹೋತ್ಸವದ ಪವಿತ್ರ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಶಿರ್ವ ಚರ್ಚಿನ ಪ್ರಧಾನ ಧರ್ಮಗುರು ವಂ|ಡಾ| ಲೆಸ್ಲಿ ಡಿಸೋಜಾ ಆಶೀರ್ವಚನ ನೀಡಿ ಆರೋಗ್ಯ ಮಾತೆಯ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಎಲ್ಲಾ ಭಕ್ತಾಧಿಗಳಿಗೆ ದೇವರ ಅಶೀರ್ವಾದ ಲಭಿಸಿ ಕೃತಾರ್ಥರಾಗಲಿ. ಮಾತೆ ಮೇರಿಯ ಪವಾಡಗಳು ಭಕ್ತರ ಕುಟುಂಬದಲ್ಲಿ ನಡೆದು ಭಕ್ತಾಧಿಗಳಿಗೆ ರಕ್ಷಣೆ ಸಿಗಲಿ ಎಂದರು.
ಕಲ್ಯಾಣಪುರ ಮಿಲಾಗ್ರಿಸ್ ಕೆಥಡ್ರಲ್‌ನ ರೆಕ್ಟರ್ ವಂ| ವಲೇರಿಯನ್ ಮೆಂಡೋನ್ಸಾ, ಐಸಿವೈಎಂನ ರಾಷೀrÅಯ ನಿರ್ದೇಶಕ ವಂ|ಚೇತನ್ ಮಚಾದೋ, ಸಹಾಯಕ ಧರ್ಮಗುರುಗಳಾದ ವಂ| ರೋಲ್ವಿನ್ ಅರಾನ್ಹಾ ವಂ|ಸ್ಟೀವನ್ ನೆಲ್ಸನ್ ಪೆರಿಸ್ ಮತ್ತು ಉಡುಪಿ ಮತ್ತು ಮಂಗಳೂರು ಧರ್ಮ ಪ್ರಾಂತ್ಯ ಹಾಗೂ ಶಿರ್ವ ವಲಯದ ವಿವಿಧ ಚರ್ಚುಗಳ 50ಕ್ಕೂ ಹೆಚ್ಚು ಧರ್ಮಗುರುಗಳು ಬಲಿ ಪೂಜೆಯಲ್ಲಿ ಭಾಗವಹಿಸಿದ್ದರು. ಚರ್ಚ್‌ನ ವಿವಿಧ ಕಾರ್ಯಗಳಲ್ಲಿ ಸಹಕರಿಸಿದ ಮಹನೀಯರನ್ನು ಗೌರವಿಸಲಾಯಿತು.
ಸರ್ವ ಧರ್ಮದ ಸಾವಿರಾರು ಭಕ್ತರು ಆಗಮಿಸಿ ಆರೋಗ್ಯ ಮಾತೆಯ ದರ್ಶನ ಪಡೆದು ತಮ್ಮ ಸಂಕಷ್ಟ ನಿವಾರಣೆಗಾಗಿ ಮೊಂಬತ್ತಿ ಉರಿಸಿ ಹರಕೆ ಸಲ್ಲಿಸಿ ತೀರ್ಥ,ಎಣ್ಣೆ ಪ್ರಸಾದ ಪಡೆದರು.
ಗಾಯನ ಮಂಡಳಿಯ ವಂ| ಜಾರ್ಜ್,ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹ, ಕಾರ್ಯದರ್ಶಿ ಫ್ಲಾವಿಯಾ ಡಿಸೋಜಾ, ಚರ್ಚ್ ಆಯೋಗದ ಸಂಯೋಜಕಿ ಲೀನಾ ಮಚಾದೋ, ಸಿ|ಲೆತೀಶಿಯಾ, ಚರ್ಚ್ ಆರ್ಥಿಕ ಮತ್ತು ಪಾಲನ ಮಂಡಳಿಯ ಸದಸ್ಯರು, ಧರ್ಮಗುರುಗಳು,ಧರ್ಮಭಗಿನಿಯರು,ಗಾಯನ ಮಂಡಳಿ ಸದಸ್ಯರು, ಚರ್ಚ್‌ನ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು,ಉಸ್ವಾಸ್ ಮತ್ತು ಸ್ವಾಕ್ ಸಂಘಟನೆಯ ಪದಾಧಿಕಾರಿಗಳು,ಭಕ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.