ಶಿರ್ವ -ಕಟ್ಟಿಂಗೇರಿ ಮೂಡುಬೆಳ್ಳೆ ಸಂಪರ್ಕ ರಸ್ತೆ ಸಂಚಾರ ಮುಕ್ತ
Team Udayavani, Jul 22, 2018, 6:15 AM IST
ಶಿರ್ವ: ಜಿಲ್ಲೆ ಯಾದ್ಯಂತ ಜುಲೈ ಮೊದಲ ವಾರ ಸುರಿದ ಮಹಾಮಳೆಗೆ ಕೊಚ್ಚಿಹೋಗಿದ್ದ ಶಿರ್ವ ಮಾಣಿಬೆಟ್ಟು ಗರಡಿಯ ಬಳಿ ಮೂಡುಬೆಳ್ಳೆ- ಕಟ್ಟಿಂಗೇರಿ- ಶಿರ್ವ ಸಂಪರ್ಕ ರಸ್ತೆಯ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು ಎರಡೂ ಗ್ರಾಮಗಳ ಜನರ ಸಂಚಾರಕ್ಕೆ ಮುಕ್ತವಾಗಿದೆ.
ಶಿರ್ವ ಮಾಣಿಬೆಟ್ಟು ಹಾಗೂ ಕಟ್ಟಿಂಗೇರಿ ಪರಿಸರದ ಜನ ನಿತ್ಯ ಕೆಲಸ ಕಾರ್ಯ ಹಾಗೂ ಶಾಲೆ ಕಾಲೇಜುಗಳಿಗೆ ಹೋಗಲು ಈ ರಸ್ತೆಯನ್ನೇ ಬಳಸುತ್ತಿದ್ದು ರಸ್ತೆ ಕಡಿತಗೊಂಡಿದ್ದರಿಂದಾಗಿ ಜನ ಅತ್ತಿತ್ತ ಸಾಗಲು ಪರದಾಟ ನಡೆಸುತ್ತಿರುವ ಬಗ್ಗೆ ಪತ್ರಿಕೆ ಸಮಗ್ರ ವರದಿ ಪ್ರಕಟಿ ಸಿತ್ತು. ದಿನನಿತ್ಯಈ ಮಾರ್ಗದಲ್ಲಿ ಐದಾರು ಶಾಲಾ ವಾಹನಗಳು ಓಡಾಟ ನಡೆಸುತ್ತಿದ್ದು ರಸ್ತೆ ಕೊಚ್ಚಿ ಹೋಗಿದ್ದರಿಂದಾಗಿ ಜನರು, ಶಾಲಾ ವಿದ್ಯಾರ್ಥಿಗಳು ದೂರದ ಮಟ್ಟಾರು-ನಾಲ್ಕುಬೀದಿ ರಸ್ತೆಯನ್ನು ಬಳಸುತ್ತಿತ್ತು.
ಉದಯವಾಣಿ ವರದಿಗೆ ಸ್ಪಂದನೆ
ವರದಿಗೆ ಸ್ಪಂದಿಸಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 1 ಲಕ್ಷ ರೂ. ಬಿಡುಗಡೆ ಮಾಡಿ ತುರ್ತು ಕಾಮಗಾರಿ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಗುತ್ತಿಗೆದಾರ ಚಂದ್ರಶೇಖರ ಶೆಟ್ಟಿ ಕಾಮಗಾರಿ ನಡೆಸಿ ರಸ್ತೆ ಸರಿಪಡಿಸಿದ್ದಾರೆ. ಜಿ.ಪಂ.ಸದಸ್ಯ ವಿಲ್ಸನ್ ರೋಡ್ರಿಗಸ್ ಈ ರಸ್ತೆಗೆ ಸಂಕ ರಚಿಸುವ ಬಗ್ಗೆ ಅನುದಾನ ಜೋಡಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಕೈಗೊಳ್ಳುವಂತೆ ಗ್ರಾಮಸ್ಥರ ಪರವಾಗಿ ಸ್ಥಳೀಯ ಶಾಸಕ ಲಾಲಾಜಿ ಮೆಂಡನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
MUST WATCH
ಹೊಸ ಸೇರ್ಪಡೆ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.