ಶಿರ್ವ ಪಾಂಬೂರು: ಬೋನಿಗೆ ಬಿದ್ದ ಚಿರತೆ
Team Udayavani, Aug 7, 2018, 10:59 AM IST
ಶಿರ್ವ : ಕಳೆದ ಹಲವಾರು ದಿನಗಳಿಂದ ಪಾಂಬೂರು ಪರಿಸರದಲ್ಲಿ ಜನರನ್ನು, ಜಾನುವಾರುಗಳನ್ನು ಭಯಭೀತಗೊಳಿಸಿದ್ದ ಚಿರತೆಯೊಂದು ಮಂಗಳವಾರ ಬೆಳಿಗ್ಗೆ ಅರಣ್ಯಾಧಿಕಾರಿಗಳ ಬೋನಿಗೆ ಬಿದ್ದಿದೆ. ಪಡುಬೆಳ್ಳೆ ಗ್ರಾಮದ ಪಾಂಬೂರು ನಿವಾಸಿ ಜಾರ್ಜ್ ಫ್ಲೊರಿನ್ ಸಲ್ಡಾನರ ಮನೆಯ ಹತ್ತಿರ ಇಡಲಾಗಿದ್ದ ಬೋನಿಗೆ ಚಿರತೆ ಬಿದ್ದಿದೆ.
ಕಳೆದ ಕೆಲ ದಿನಗಳಿಂದ ಈ ಪರಿಸರದಲ್ಲಿ ಚಿರತೆ ಕಾಟ ಜೋರಾಗಿತ್ತು. ಸ್ಥಳೀಯ ನಿವಾಸಿ ಭಾಸ್ಕರ ಶೆಟ್ಟಿ ಅವರ ನಾಯಿಯನ್ನು ಮನೆಯವರ ಕಣ್ಣೆದುರೆ ಕೊಂಡೊಗಿದ್ದು ಸ್ಥಳಿಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಚಿರತೆ ಸಮಸ್ಯೆ ಬಗ್ಗೆ ಕೆಲ ದಿನಗಳ ಹಿಂದೆ ಉದಯವಾಣಿಯು ವಿಸ್ತೃತ ವರದಿ ಮಾಡಿತ್ತು.ಈ ಬಗ್ಗೆ ಎಚ್ಚೆತ್ತ ಅರಣ್ಯಾಧಿಕಾರಿಗಳು ಮೂರು ದಿನಗಳ ಹಿಂದೆ ಚಿರತೆ ಹಿಡಿಯಲು ಪಾಂಬೂರು ಪ್ರದೇಶದಲ್ಲಿ ಬೋನು ಇಟ್ಟಿದ್ದರು.
ಕಾರ್ಯಾಚರಣೆಯಲ್ಲಿ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ಉಪ ವಲಯ ಅಧಿಕಾರಿ ದಯನಂದ.ಕೆ, ಬೆಳ್ಳೆ ಅರಣ್ಯ ರಕ್ಷಕ ಗಣಪತಿ ನಾಯಕ್, ಅರಣ್ಯ ವೀಕ್ಷಕ ಪರಶುರಾಮ ಮೇಠಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.