Shirva Sri Kashimath: ಶ್ರೀ ಸುಧೀಂದ್ರ ವನಕ್ಕೆ ಚಾಲನೆ
Team Udayavani, Aug 19, 2024, 11:29 AM IST
ಶಿರ್ವ: ಶ್ರೀ ಕಾಶೀಮಠದ ಹಿರಿಯ ಯತಿಗಳಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಮಹೋತ್ಸವದ ಪ್ರಯುಕ್ತ ಶಿರ್ವ ಶ್ರೀ ಕಾಶೀಮಠ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಜಮೀನಿನಲ್ಲಿ ಶ್ರೀ ಸುಧೀಂದ್ರ ಫಲೋಧ್ಯಾನಕ್ಕೆ ರವಿವಾರ ಚಾಲನೆ ನೀಡಲಾಯಿತು.
ದೇಗುಲದಲ್ಲಿ ಪ್ರಾರ್ಥನೆ ನೆರವೇರಿದ ಬಳಿಕ ಶ್ರೀಮದ್ ಸುಧೀಂದ್ರ ತೀರ್ಥರ ಭಾವಚಿತ್ರವನ್ನು ಕುಲಾವಿ ಭಜಕ ಬಾಂಧವರು ಬೆಳ್ಳಿಯ ಪಲ್ಲಕ್ಕಿಯಲಿಟ್ಟು ಮೆರವಣಿಗೆಯಲ್ಲಿ ಕೊಂಡೊಯ್ದ ಬಳಿಕ ಸುಧೀಂದ್ರ ವನದಲ್ಲಿ ವೇ|ಮೂ| ಕೆ.ರವೀಂದ್ರ ಭಟ್‌ಮತ್ತು ದೇಗುಲದ ಪ್ರಧಾನ ಅರ್ಚಕ ರಘುರಾಮ ಭಟ್ ಅವರ ನೇತೃತ್ವದಲ್ಲಿ ಗುರುಪೂಜೆ ಮತ್ತು ವೃಕ್ಷಪೂಜೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೆರಿಸಲಾಯಿತು. ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ| ದಾಮೋದರ ಪೈ ದೀಪ ಬೆಳಗಿಸಿ ಉದ್ಘಾಟಿಸಿ ಸುಧೀಂದ್ರ ವನಕ್ಕೆ ಚಾಲನೆ ನೀಡಿದರು.
ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ವೇ|ಮೂ| ರವಿ ಭಟ್ ಮಾತನಾಡಿ ಪರಿಸರ ಪ್ರೇಮಿಯಾಗಿದ್ದು, ಪಕ್ಷಿ ಸಂಕುಲದ ಆಹಾರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶ್ರೀಮದ್ ಸುಧೀಂದ್ರ ತೀರ್ಥರ ಆಶಯದಂತೆ ಅವರ ಜನ್ಮ ಶತಾಬ್ದಿಯ ಪ್ರಯುಕ್ತ ದೇಗುಲಕ್ಕೆ ಸಂಬಂಧ ಪಟ್ಟ ಪ್ರತಿಯೊಂದು ಕುಲಾವಿಗಳು ಪಕ್ಷಿ ಸಂಕುಲದ ಉಳಿವಿಗಾಗಿ ಫಲೋಧ್ಯಾನದಲ್ಲಿ ಹಣ್ಣಿನ ಗಿಡ ನೆಟ್ಟು ಸ್ವಾಮೀಜಿಯವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಹೇಳಿದರು. ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ರಾಮದಾಸ ಶೆಣೈ,ನವೀನ್ ಶೆಣೈ ಮತ್ತು ಭಕ್ತರು ಉಪಸ್ಥಿತರಿದ್ದರು.
ಕೇಂದ್ರೀಯ ಸಮಿತಿಯ ಲೆಕ್ಕಪರಿಶೋಧಕ ಸುರೇಂದ್ರ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಚಿದಾನಂದ ಪೈ ಗಿಡ ನೆಡುವ ಬಗ್ಗೆ ಮಾಹಿತಿ ನೀಡಿ ವಂದಿಸಿದರು. ದೇಗುಲದ ಭಕ್ತ ಸಮೂಹಕ್ಕೆ ಫಲ ಬರುವ ಗಿಡಗಳನ್ನು ವಿತರಿಸಿದ ಬಳಿಕ ಸಾಮೂಹಿಕವಾಗಿ ತರಹೇವಾರಿ ಹಣ್ಣಿನಗಿಡ ,ರಕ್ತಚಂದನ ಮತ್ತು ಸಾಗುವಾನಿ ಗಿಡಗಳನ್ನು ನೆಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ
Udupi: ಕಲ್ಸಂಕ ಜಂಕ್ಷನ್; ಹಗಲು-ರಾತ್ರಿ ಟ್ರಾಫಿಕ್ ಕಿರಿಕಿರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.