ಶಿರ್ವ: ಮನೆಗೆ ಸಿಡಿಲು ಬಡಿದು ಹಾನಿ
Team Udayavani, Jun 7, 2017, 12:07 PM IST
ಶಿರ್ವ: ಇಲ್ಲಿನ ಬಲ್ಲಾಡಿ ಕಲ್ಲುಮುರ ಗಿರಿಜಾ ಆಚಾರ್ತಿ ಅವರ ಮನೆಗೆ ಸೋಮವಾರ ರಾತ್ರಿ 9.30ರ ವೇಳೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.
ಸಿಡಿಲಿನ ರಭಸಕ್ಕೆ ಮನೆಯ ಮಣ್ಣಿನ ಇಟ್ಟಿಗೆಯ ಗೋಡೆಯ ಭಾಗ ಕುಸಿದು ಬಿದ್ದಿದೆ. ಮನೆಯ ಫ್ಯಾನ್, ವಿದ್ಯುತ್ ಮೀಟರ್, ಸರ್ವೀಸ್ ವಯರ್ ಹಾಗೂ ವಿದ್ಯುತ್ ಪಂಪ್ ಸುಟ್ಟು ಹೋಗಿದೆ. ಬಚ್ಚಲು ಮನೆಯ ಮಾಡಿನ ಹೆಂಚುಗಳು ಒಡೆದು ಹೋಗಿವೆ. ಮನೆಯ ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು ವಿದ್ಯುತ್ ಉಪಕರಣಗಳು ಪುಡಿ ಪುಡಿಯಾಗಿ ಸುಮಾರು 5 ಲಕ್ಷ ರೂ.ಹಾನಿ ಸಂಭವಿಸಿದೆ. ಮನೆಯಲ್ಲಿ ತಂದೆ, ತಾಯಿ ಮತು ಇಬ್ಬರು ಹೆಣ್ಮಕ್ಕಳು ವಾಸವಿದ್ದು ರಾತ್ರಿ ನೆರೆಮನೆಯಲ್ಲಿ ಆಶ್ರಯ ಪಡೆದರು.
ಮನೆಯ ಕಪಾಟಿನ ಗಾಜುಗಳು ಪುಡಿಯಾಗಿ ಗಾಜಿನ ಚೂರು ತಾಗಿ ಸಣ್ಣ ಪುಟ್ಟ ಗಾಯಗಳಾಗಿವೆ. ಶಿರ್ವ ಜಿ.ಪಂ. ಸದಸ್ಯ ವಿಲ್ಸನ್ ರೊಡ್ರಿಗಸ್, ಶಿರ್ವ ಗ್ರಾ.ಪಂ. ಅಧ್ಯಕ್ಷೆ ವಾರಿಜಾ ಪೂಜಾರ್ತಿ,ಪಿಡಿಒ ಮಾಲತಿ, ಗ್ರಾಮ ಕರಣಿಕ ವಿಜಯ್ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಶಿರ್ವ ಗ್ರಾ.ಪಂ.ಸದಸ್ಯರಾದ ರತನ್ ಶೆಟ್ಟಿ, ಕೆ.ಆರ್.ಪಾಟ್ಕರ್, ದೀಪಾ, ಶಿರ್ವ ಸ್ಥಾನೀಯ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ ಮತ್ತಿತರ ಮುಖಂಡರು ಮನೆಗೆ ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನರೇಗಾದಿಂದ ಆಲೂರಿನ ಮಹಿಳೆಯ ಸ್ವಾವಲಂಬಿ ಬದುಕು
HMP ವೈರಸ್: ಜನರು ಭಯಪಡುವ ಅಗತ್ಯವಿಲ್ಲ-ಮಾಸ್ಕ್ ಬಗ್ಗೆ ಸಚಿವ ಗುಂಡೂರಾವ್ ಹೇಳಿದ್ದೇನು?
Andhra: ʼಗೇಮ್ ಚೇಂಜರ್ʼ ಈವೆಂಟ್ನಿಂದ ಮರಳುತ್ತಿದ್ದ ಅಭಿಮಾನಿಗಳು ರಸ್ತೆ ಅಪಘಾತಕ್ಕೆ ಬಲಿ
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.