“ಶಿವಾಜಿ ಮಹಾರಾಜ್-ಅಖಂಡ ಹಿಂದೂ ಸಮಾಜಕ್ಕೆ ಆದರ್ಶಪ್ರಾಯ’
Team Udayavani, Mar 16, 2017, 4:11 PM IST
ಉಡುಪಿ: ಶಿವಾಜಿ ಮಹಾರಾಜ್ ಯಾವುದೋ ಒಂದು ಜಾತಿ, ಸಂಪ್ರದಾಯಕ್ಕೆ ಸೀಮಿತವಾಗದೆ ಅಖಂಡ ಹಿಂದೂ ಸಮಾಜಕ್ಕೆ ಆದರ್ಶಪ್ರಾಯವಾಗಿರುವ ವ್ಯಕ್ತಿ. ಶಿವಾಜಿಯ ಗುಣ, ಆದರ್ಶಗಳನ್ನು ಪಾಲಿಸಬೇಕು ಎಂದು ಉಡುಪಿ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿಯ ಮುಖಂಡ ವಿಜಯಕುಮಾರ್ ಅವರು ಹೇಳಿದರು.
ಛತ್ರಪತಿ ಶಿವಾಜಿ ವಿವಿಧೋದ್ಧೇಶ ಸಹಕಾರ ಸಂಘ ಹಾಗೂ ರಾಜೇ ಛತ್ರಪತಿ ಗೋಲ್ಡ್ ಆ್ಯಂಡ್ ಸಿಲ್ವರ್ ರಿಫೈನರಿ ಅಸೋಸಿಯೇಶನ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ನೈವೇದ್ಯ ಹೊಟೇಲ್ ಸಭಾಂಗಣದಲ್ಲಿ ಬುಧವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ 390ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂಗಳು ಇವತ್ತು ಇದ್ದಾರೆಂದರೆ ಅದಕ್ಕೆ ಕಾರಣ ಶಿವಾಜಿಯ ಅಂದಿನ ಹೋರಾಟ. ಮೊಘಲರ ಕಾಲದಲ್ಲಿ ಗೋಹತ್ಯೆ, ಅತ್ಯಾಚಾರ, ಅನ್ಯಾಯಗಳು ಮಿತಿಮೀರಿದಾಗ ಜನ್ಮ ತಾಳಿದ ಶಿವಾಜಿಯು ಸಂತರೀರ್ವರ ಮಾರ್ಗದರ್ಶನ, ಕುಲದೇವರು ಅಂಬಾಭವಾನಿಯ ಆಶೀರ್ವಾದದಲ್ಲಿ ಹಿಂದ್ ಸ್ವರಾಜ್ಯ ಸ್ಥಾಪನೆ ಮಾಡಿ ಹೋರಾಟ ನಡೆಸಿದರು ಎಂದರು.
ಛತ್ರಪತಿ ಶಿವಾಜಿ ಮಹಾರಾಜರ ಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಹರಿದಾಸ ಬಿ.ಸಿ. ರಾವ್ ಶಿವಪುರ ಅವರು ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಉಡುಪಿ ಛತ್ರಪತಿ ಶಿವಾಜಿ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ಸಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ರಾಜೇ ಛತ್ರಪತಿ ಗೋಲ್ಡ್ ಆ್ಯಂಡ್ ಸಿಲ್ವರ್ ರಿಫೈನರಿ ಅಸೋಸಿ ಯೇಶನ್ ಅಧ್ಯಕ್ಷ ಮಹಾದೇವ್ ಭಗವಾನ್ ಜಾಂಕರ್, ನ್ಯಾಯವಾದಿಗಳ ವಿವಿಧೋದ್ಧೇಶ ಸಹಕಾರ ಸಂಘದ ಉಪಾಧ್ಯಕ್ಷ ಮಂಜುನಾಥ ಎಸ್.ಕೆ., ಕ್ಷತ್ರಿಯ ಮರಾಠ ಪರಿಷತ್ ಕಾರ್ಕಳ ತಾಲೂಕು ಪ್ರ.ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಹಿರಿಯಡಕ ವಲಯ ಬಜರಂಗದಳ ಸಂಚಾಲಕ ಉದಯ ನಾಯ್ಕ, ತಾ.ಪಂ. ಸದಸ್ಯ ಸುಭಾಷ್ ನಾಯ್ಕ, ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಅಧ್ಯಕ್ಷ ಆರ್.ಸಿ. ನಾಯ್ಕ, ಮರಾಠ ಸ್ವಾಭಿಮಾನ ಜಾಗೃತಿ ಪ್ರತಿಷ್ಠಾನದ ಪ್ರ.ಕಾರ್ಯದರ್ಶಿ ಅಜಿತ್ ಕುಮಾರ್ ನಾಯ್ಕ ಉಪಸ್ಥಿತರಿದ್ದರು.ಗಣೇಶ್ ಸ್ವಾಗತಿಸಿದರು. ಯಶಸ್ವಿನಿ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
“ಹಿಂದೂ ರಾಷ್ಟ್ರಕ್ಕಾಗಿ ಹೋರಾಟ’
ಮೊಘಲರ ಕಾಲದಲ್ಲಿದ್ದ ಸನ್ನಿವೇಶವೇ ಇಂದು ನಿರ್ಮಾಣಗೊಂಡಿದೆ. ಭಯೋತ್ಪಾದನೆ, ಮತಾಂತರ, ಲವ್‌ಜಿಹಾದ್, ಅತ್ಯಾಚಾರ ಹೆಚ್ಚುತ್ತಲಿದೆ. ಅಂದು ಶಿವಾಜಿ ಹಿಂದ್ ವೇ ಸ್ವರಾಜ್ಯ ನಿರ್ಮಾಣ ಮಾಡಿದಂತೆ ಇಂದು ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹೋರಾಟ ಮಾಡುವ ಸಮಯ ಬಂದೊದಗಿದೆ. ತಮ್ಮ ವಾಹನಗಳಲ್ಲಿ ಶಿವಾಜಿಯ ಚಿತ್ರಗಳನ್ನು ಹಾಕಿಕೊಂಡು ಹೋಗುವುದು ಮಾತ್ರವಲ್ಲದೆ ಶಿವಾಜಿಯ ನೈಜ ಗುಣಾದರ್ಶಗಳನ್ನು ಪಾಲನೆ ಮಾಡಿಕೊಂಡು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದು ವಿಜಯ ಕುಮಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.