ಇನ್ನೂ ಹಲವರಿಗೆ ರೋಷಾವೇಶ: ಶೋಭಾ ಕರಂದ್ಲಾಜೆ


Team Udayavani, May 23, 2019, 6:09 AM IST

shobha

ಉಡುಪಿ: ಮಾಜಿ ಸಚಿವ ರೋಷನ್‌ ಬೇಗ್‌ ಅವರಂತೆ ಹಲವು ಶಾಸಕರಿಗೆ ಅಸಮಾಧಾನ ಇದೆ. ರಾಜ್ಯ ಸರಕಾರ ದುರ್ಬಲ ಮತ್ತು ಅಸ್ಥಿರ ಆಗಿದೆ.ರೋಷನ್‌ ಬೇಗ್‌, ಎಚ್. ವಿಶ್ವನಾಥ್‌, ಎಸ್‌.ಟಿ. ಸೋಮಶೇಖರ್‌ ಅವರೂ ಅಸಮಾಧಾನ ಹೊರ ಹಾಕಿದ್ದಾರೆ. ರಮೇಶ್‌ ಜಾರಕಿಹೋಳಿ ಕಾಂಗ್ರೆಸ್‌ ನಾಯಕರಕೈಗೆ ಸಿಗುತ್ತಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ – ಜೆಡಿಎಸ್‌ನವರು ಜನಹಿತ ಮರೆತು ಅಧಿಕಾರ ಉಳಿಸಲೋಸುಗ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಬರಗಾಲದಿಂದ ಜೀವಿಗಳು ತತ್ತರಿಸಿವೆ. ಸರಕಾರ ಇದ್ದರೂ ಒಂದೇ ಬಿದ್ದರೂ ಒಂದೇ. ಇಷ್ಟೆಲ್ಲ ಗೊಂದಲ ಇದ್ದರೂ ಸರಕಾರವನ್ನು ಹೇಗೆ ನಿಭಾಯಿಸುತ್ತಿದ್ದಾರೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉತ್ತರ ಕೊಡಬೇಕು ಎಂದರು.

ಲೋಕ-ರಾಜ್ಯಸಭೆಯಲ್ಲಿ ಬಹುಮತ

ಮತದಾನೋತ್ತರ ಸಮೀಕ್ಷೆ ನರೇಂದ್ರ ಮೋದಿ ಸರಕಾರದ ಪರವಾಗಿದೆ. ಸಮೀಕ್ಷೆ ಪ್ರಕಾರ 325ರಿಂದ 350 ಸ್ಥಾನಗಳು ಎನ್‌ಡಿಎ ಪಾಲಾಗಲಿವೆ. ದೇಶದ ಹಲವಾರು ನಿರ್ಣಯಗಳಿಗೆ ಮೂರನೆಯ ಎರಡರಷ್ಟು ಬಹುಮತ ಬೇಕು. ಈ ಬಾರಿ ಲೋಕಸಭೆ,ರಾಜ್ಯಸಭೆಯಲ್ಲಿ ಬಹುಮತ ಸಿಗಲಿದೆ ಎಂದರು.

ಅತ್ಯಧಿಕ ಬಹುಮತ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹಿಂದಿಗಿಂತಲೂ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ. ದಕ್ಷಿಣ ಭಾರತದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಲಿದ್ದಾರೆ. ರಾಜ್ಯದಿಂದ 20ಕ್ಕೂ ಹೆಚ್ಚು ಸಂಸದರು ಪ್ರಧಾನಿ ಮೋದಿಯವರ ಕೈ ಬಲ ಪಡೆಸುತ್ತಾರೆ. ಎಂದು ಶೋಭಾ ವಿಶ್ವಾಸ ವ್ಯಕ್ತಪಡಿಸಿದರು.

ಆಗೇಕೆ ಸಂಶಯ ಬರಲಿಲ್ಲ?

ವಿವಿಪ್ಯಾಟ್ ಮೇಲೆ ವಿಪಕ್ಷ ನಾಯಕರು ಸಂಶಯ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಗೆದ್ದಾಗ ವಿವಿಪ್ಯಾಟ್‌ಗೆ ಏನಾಗಿತ್ತು? ವಿಪಕ್ಷಗಳ ಆರೋಪ ‘ಕುಣಿಯೋಕೆ ಬಾರದವ ನೆಲ ಡೊಂಕು’ ಎನ್ನುವ ಗಾದೆಯಂತಾಗಿದೆ. ಗೆಲ್ಲುವುದಕ್ಕೆ ಆಗೋದಿಲ್ಲ ಎಂದು ಈ ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಮತಯಂತ್ರ ದುರ್ಬಲವಲ್ಲ

ಪ್ರಪಂಚದಲ್ಲೇ ಅತ್ಯಂತ ಉತ್ತಮ ತಾಂತ್ರಿಕ ವ್ಯವಸ್ಥೆ ಇದೆ. ಮತಯಂತ್ರ ಯಾರ ಕಾಲದಲ್ಲಿ ಆಗಿದೆ? ಈ ಕುರಿತು ಎರಡು ಬಾರಿ ಯುಪಿಎ ಅಧಿಕಾರಕ್ಕೆ ಬಂದಾಗ ಆಕ್ಷೇಪಿಸಿಲ್ಲ ಏಕೆ? ಮತಯಂತ್ರ ದುರ್ಬಲವಾಗಿಲ್ಲ. ವಿಪಕ್ಷ ದುರ್ಬಲವಾಗಿದೆ. ಅವರ ಮನಸ್ಸೂ ದುರ್ಬಲವಾಗಿದೆ, ಮಹಾ ಘಟಬಂಧನ ದುರ್ಬಲವಾಗಿದೆ ಎಂದು ಶೋಭಾ ಲೇವಡಿ ಮಾಡಿದರು.

ಕಾಂಗ್ರೆಸ್‌ ಪಕ್ಷದ ಶಾಸಕರನ್ನು ಬಿಜೆಪಿಯು ಸೆಳೆಯುವುದಿಲ್ಲ. ಪಕ್ಷ ಬಿಟ್ಟ ಅನಂತರ ಶಾಸಕರನ್ನು ಬಿಜೆಪಿ ಮಾತನಾಡಿಸುತ್ತದೆ. ಬಿಜೆಪಿ ಒಂದು ದೊಡ್ಡ ಸಮುದ್ರವಿದ್ದಂತೆ. ಯಾರೂ ಬಿಜೆಪಿಗೆ ಬರಬಹುದು ಎಂದರು.

ಜನತಾ ಜನಾರ್ದನನನ್ನು ಮರೆತ ಸಿಎಂ

ಮುಖ್ಯಮಂತ್ರಿಗಳ ದೇವಸ್ಥಾನಗಳ ಭೇಟಿ ಕುರಿತು ಪ್ರಶ್ನಿಸಿದಾಗ, ಜನಸೇವೆಯೇ ಜನಾರ್ದನನ ಸೇವೆ ಎಂದು ಹಿರಿಯರು ಹೇಳಿದ್ದಾರೆ. ಮುಖ್ಯಮಂತ್ರಿಯಾದವರು ಇದನ್ನು ಪಾಲಿಸಬೇಕು. ಆದರೆ ಅವರು ಜನತಾ ಸೇವೆ ಬಿಟ್ಟು ಬಿಟ್ಟಿದ್ದಾರೆ. ಜನಾರ್ದನ- ದೇವರು ಕೈ ಹಿಡಿಯಬಹುದು ಎನ್ನುವುದು ಅವರ ನಂಬಿಕೆ ಇರಬಹುದು. ಕರ್ತವ್ಯ ನಿಭಾಯಿಸದವನನ್ನು ದೇವರೂ ಕೈ ಹಿಡಿಯುವುದಿಲ್ಲ. ಇದನ್ನು ಅರಿತು ಕೆಲಸ ಮಾಡಿದರೆ ಅವರಿಗೆ ಒಳ್ಳೆಯದಾಗಬಹುದು ಎಂದರು.

ಟಾಪ್ ನ್ಯೂಸ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.