ಶೋಭಾ ಕೇಮ್ ಬ್ಯಾಕ್: ಉಳಿದಿವೆ ಹತ್ತಾರು ಸಮಸ್ಯೆ
ಗರಿಗೆದರಿವೆೆ ನಿರೀಕ್ಷೆಗಳು
Team Udayavani, May 24, 2019, 6:10 AM IST
ಉಡುಪಿ: ಕೆಲವು ಮಂದಿ ಸ್ವಪಕ್ಷೀಯರಿಂದಲೇ ಸಾಮಾಜಿಕ ಜಾಲತಾಣದಲ್ಲಿ “ಗೋ ಬ್ಯಾಕ್’ ಪ್ರತಿರೋಧ ಎದುರಿಸಿದ ಶೋಭಾ ಕರಂದ್ಲಾಜೆ ಇದನ್ನು ಮೀರಿ ಭರ್ಜರಿ ಜಯ ಸಾಧಿಸಿದ್ದಾರೆ. ಶೋಭಾ ಗೋ ಬ್ಯಾಕ್ ಚಳವಳಿ ಆರಂಭವಾದ ಹೊತ್ತಿಗೆ ಅದಕ್ಕೆ ಇತರ ಕೆಲವರು ಧ್ವನಿ ಸೇರಿಸಿ “ಶೋಭಾ ಕ್ಷೇತ್ರದ ಕಡೆ ಹೆಚ್ಚು ಓಡಾಟ ಮಾಡಿಲ್ಲ’ ಎಂದು ಆರೋಪಿಸಿದ್ದರು. ಇದಕ್ಕೆ ಶೋಭಾ ಸಮರ್ಥವಾಗಿ ಉತ್ತರ ನೀಡಿದ್ದರಾದರೂ ಕೆಲವೊಂದು ಸಮಸ್ಯೆಗಳು ಈಗಲೂ ಹಾಗೆಯೇ ಉಳಿದುಕೊಂಡಿವೆ. ಶೋಭಾ ಮತ್ತೆ ಗೆದ್ದು ಬಂದಿದ್ದಾರೆ. ಈ ಬಾರಿ ನಮ್ಮ ಬೇಡಿಕೆಗಳು ಈಡೇರಬಹುದು ಎಂಬ ನಿರೀಕ್ಷೆ ಕ್ಷೇತ್ರದ ಜನರಲ್ಲಿ ಸಹಜವಾಗಿಯೇ ಬಲಗೊಂಡಿವೆ.
ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿ 66ರ ಅಪೂರ್ಣ, ಅವೈಜ್ಞಾನಿಕ ಕಾಮಗಾರಿಯ ಸಮಸ್ಯೆ ಉಳಿದುಕೊಂಡಿದೆ. ಇದೇ ರೀತಿ ತುರ್ತಾಗಿ ಪರಿಹರಿಸಬೇಕಾದ ಇನ್ನೊಂದು ಸಮಸ್ಯೆ ಮರಳಿನದ್ದು. ಮರಳುಗಾರಿಕೆಗೆ ಹಸಿರುನಿಶಾನೆ ದೊರೆಯದೆ ಜಿಲ್ಲೆಯ ಆರ್ಥಿಕ ಚಟುವಟಿಕೆ ಮಂಕಾಗಿದೆ. ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಜಿಲ್ಲೆಯಾದ್ಯಂತ ತಲೆದೋರಿದ್ದು ಶಾಶ್ವತ ಪರಿಹಾರ ಯೋಜನೆ, ಅಂತರ್ಜಲ ವೃದ್ಧಿಗೆ ಅಗತ್ಯ ಕ್ರಮ ಅನುಷ್ಠಾನಗೊಳ್ಳಬೇಕಿದೆ. ಹಕ್ಕುಪತ್ರ, ಡೀಮ್ಡ್ ಫಾರೆಸ್ಟ್ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಬೇಕಿದೆ. ಮೀನುಗಾರರಿಗೆ ಡೀಸೆಲ್ ಸಬ್ಸಿಡಿ, ಸುವರ್ಣ ತ್ರಿಭುಜ ಬೋಟ್‌ನ ಅವಶೇಷ ಮೇಲೆತ್ತುವುದು, ಬಂದರುಗಳ ಅಭಿವೃದ್ಧಿ, ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ಮೊದಲಾದ ಬೇಡಿಕೆಗಳು ಹಾಗೆಯೇ ಉಳಿದಿವೆ.
ಚಿಕ್ಕಮಗಳೂರು ಭಾಗದಲ್ಲಿ ಕಾಫಿ ಬೆಳೆಗಾರರು ಮತ್ತು ಅಡಿಕೆ ಬೆಳೆಗಾರರ ಸಮಸ್ಯೆಗಳು, ಕಸ್ತೂರಿ ರಂಗನ್ ವರದಿ ಆತಂಕ, ಕಾಡುಪ್ರಾಣಿಗಳ ಹಾವಳಿ ಮೊದಲಾದವುಗಳಿಗೆ ಪರಿಹಾರ ಬೇಕಿದೆ. ಉಡುಪಿ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪನೆಯಾಗಬೇಕು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಗೊಳ್ಳಬೇಕು. ಕೃಷಿಕರಿಗೆ ಸವಲತ್ತುಗಳನ್ನು ಒದಗಿಸಬೇಕು ಇತ್ಯಾದಿ ಹಳೆಯ ಬೇಡಿಕೆಗಳು.
ಇದರ ಜತೆಗೆ ರೈಲ್ವೆ ಅಭಿವೃದ್ಧಿ, ರಸ್ತೆ ಸಂಪರ್ಕ ಅಭಿವೃದ್ಧಿ, ಐಟಿ ಕ್ಷೇತ್ರದ ಬೆಳವಣಿಗೆ, ಇತರ ಪರಿಸರ ಪೂರಕ ಕಾರ್ಖಾನೆಗಳ ಸ್ಥಾಪನೆ, ಗ್ರಾಮೀಣ ಮಹಿಳೆಯರ ಕೈಗೆ ಉದ್ಯೋಗ ಒದಗಿಸುವುದು ಮೊದಲಾದವುಗಳತ್ತ ಗಮನ ನೀಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.