![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, May 20, 2024, 1:06 AM IST
ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ 18ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಮೇ 21ರಿಂದ 24ರ ವರೆಗೆ ನೆರವೇರಲಿದೆ.
ಮೇ 20ರ ಸಂಜೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ವಾಸ್ತು ರಾಕ್ಷೋಘ್ನಾದಿ ಪ್ರಕ್ರಿಯೆಗಳು, ಪ್ರಕಾರ ಬಲಿ, ಸಪ್ತ ಶುದ್ಧಿ, ಪ್ರಸಾದ ಶುದ್ಧಿ ಇತ್ಯಾದಿ ನಡೆಯಲಿವೆ. ಮೇ 21ರ ಬೆಳಗ್ಗೆ ಸ್ವಸ್ತಿ ಪುಣ್ಯಾಹವಾಚನ, ದೇವನಾಂದಿ, ಆದ್ಯ ಗಣಪತಿಯಾಗ, ಪರಿವಾರ ದೇವರಿಗೆ ಪ್ರಧಾನ ಯಾಗ, ಸ್ನಪನ ಕಲಶಾಭಿಷೇಕ, ಪ್ರಸನ್ನ ಪೂಜೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಮೇ 22ರಂದು ಶ್ರೀ ಕ್ಷೇತ್ರದ ನಾಗಾಲಯದ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಪಂಚವಿಂಶತಿ, ಕಲಶಾರಾಧನೆ, ಪ್ರಧಾನ ಯಾಗ, ಕಲಶಾಭಿಷೇಕ, ಆಶ್ಲೇಷಾ ಬಲಿದಾನ, ಅಷ್ಟವಟು ಆರಾಧನೆ, ಪರಿವಾರ ದೇವರಿಗೆ ನವಕ ಕಲಶಾಭಿಷೇಕ, ಷಟ್ ಶಿರಾ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪವಮಾನ ಕಲಶಾಭಿಷೇಕ, ಪರಿವಾರ ಪೂಜೆ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ಮೇ 23ರ ಬೆಳಗ್ಗೆ ಶ್ರೀಚಕ್ರ ಪೀಠ ಸುರಪೂಜಿತೆಗೆ ಪಂಚವಿಂಶತಿ, ದ್ರವ್ಯ ಮಿಳಿತ, ಅಷ್ಟೋತ್ತರ, ಶತಬ್ರಹ್ಮ ಕುಂಭಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ಆರಾಧನಾ ರಂಗ ಪೂಜಾ ಮಹೋತ್ಸವ, ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ವಸಂತ ಪೂಜೆ ನೆರವೇರಲಿದೆ.
ಮೇ 24ರಂದು ಶ್ರೀ ಮಹಾ ಚಂಡಿಕಾಯಾಗ, ಕನ್ನಿಕಾರಾಧನೆ, ಮಹಾಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ ನೆರವೇರಲಿದೆ. ಪ್ರತೀ ಸಂಜೆ ನವಶಕ್ತಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ಷೇತ್ರದ ವಿಶೇಷ ಸೇವೆಯಾದ ನಾಟ್ಯರಾಣಿ ಗಂಧರ್ವ ಪ್ರೀತ್ಯರ್ಥ ವಿವಿಧ ನೃತ್ಯ ಪಟುಗಳಿಂದ ನೃತ್ಯಸೇವೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.