Udupi ಶ್ರೀಕೃಷ್ಣ ಜನ್ಮಾಷ್ಟಮಿ ಸಂದೇಶ : ಶ್ರೀಕೃಷ್ಣನ ಉಪದೇಶದಂತೆ ಸ್ವಾಸ್ಥ್ಯ-ಸಾಮರಸ್ಯ
Team Udayavani, Sep 6, 2023, 7:45 AM IST
“ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಎನ್ನುವುದು ಶ್ರೀಕೃಷ್ಣನ ಸಿದ್ಧ ಸಂಕಲ್ಪ. ಧರ್ಮ-ಅಧರ್ಮ, ದುಷ್ಟ- ಶಿಷ್ಟ ಮುಂತಾದವು ಎಲ್ಲ ಕಾಲದಲ್ಲಿ ಇರುತ್ತವೆ. ಅಧರ್ಮ ಅಂದರೆ ದುಷ್ಟ ಶಕ್ತಿಯು ವ್ಯಾಪಕವಾಗಿ ಉಲ್ಬಣಗೊಳ್ಳುವುದು. “ಧರ್ಮ’ ಅಂದರೆ ಸಾತ್ವಿಕ ಶಕ್ತಿಯ ಉಚ್ಛಾಯ.
ಅಧರ್ಮಾನುಷ್ಠಾನದಿಂದ ಸಜ್ಜನರು ಕ್ಷೇಶಪಡುತ್ತಾರೆ. ಸಮಾಜದಲ್ಲಿ ದುಷ್ಟರು-ವಂಚಕರು ಬಲಿಷ್ಠರಾದರೆ ಸ್ವಾಸ್ಥ್ಯ, ಸಾಮರಸ್ಯ ಮರೀಚಿಕೆಯಾಗುತ್ತದೆ. ದುಷ್ಟರ ದೌರ್ಜನ್ಯದಿಂದ ಶಿಷ್ಟರು ಮೂಲೆಗುಂಪಾಗುತ್ತಾರೆ. ಅವರ ಸಚಿಂತನೆ, ಸದುಪದೇಶಾದಿಗಳು ಅನಾದರಗೊಳ್ಳುತ್ತವೆ. ಅವರ ಬದುಕಿಗೆ ನೆಲೆ ಇಲ್ಲವಾಗುತ್ತದೆ. ಧರ್ಮ ವಿರೂಪಗೊಳ್ಳು ತ್ತದೆ. ಅಧರ್ಮವೇ ಧರ್ಮವೆನ್ನುವ ಸೋಗಿನಲ್ಲಿ ತಾಂಡವವಾಡುತ್ತದೆ. ದುಷ್ಟಶಕ್ತಿಯ ದಮನ ಅನಿವಾರ್ಯವಾಗುತ್ತದೆ. ಸಜ್ಜನರೆಲ್ಲಾ ಈ ಅನಿಷ್ಟದಿಂದ ಮುಕ್ತರಾಗಲು ಮುಕುಂದನಿಗೆ ಮೊರೆಹೊಗುವುದು ಆವಶ್ಯಕ. ಕಲಿಯುಗದಲ್ಲಿ ಶ್ರೀಹರಿಯ ಅವತಾರವಿಲ್ಲ. ಆದರೆ ಆ ದೇವನ ಉಪದೇಶವೇ ಆತನ ಮೂರ್ತರೂಪದಂತಿದೆ. ಆ ಹಿತೋಪದೇಶದ ಮರ್ಮವರಿತು ಹಿತಸಾಧಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶ್ರೀಕೃಷ್ಣ ಜಯಂತಿಯ ಈ ಸಮಯವು ಶ್ರೀ ಕೃಷ್ಣನ ದುಷ್ಟನಿಗ್ರಹ-ಶಿಷ್ಟಾನುಗ್ರಹ ಮಹಿಮೆಯನ್ನು ವಿಶೇಷವಾಗಿ ಸ್ಮರಣೆಗೆ ತಂದುಕೊಡುತ್ತದೆ. ಪ್ರಕೃತ, ಸಮಾಜದಲ್ಲಿಯ ದುಷ್ಟನಿಗ್ರಹಕ್ಕೆ ಶ್ರೀಕೃಷ್ಣನು ಉಪದೇಶದ ಮೂಲಕ ತೋರಿದ ಉಪಾಯವೇ ಎಲ್ಲ ರೀತಿಯಿಂದಲೂ ಉಪಾದೇಯವೆನಿಸಿದೆ.
ಲೋಕೋಪಕಾರಿ ಸತ್ಕರ್ಮವೂ ಭಗವತೂ³ಜೆ ಎಂದು ಅರಿತು, ನಿಸ್ವಾರ್ಥ ಬದುಕಿನಿಂದ ಸ್ವಾಸ್ಥ್ಯ-ಸಾಮರಸ್ಯ ಸಾಧಿಸಬೇಕಾಗಿದೆ. ಸಾಮಾಜಿಕ ಸ್ವಾಸ್ಥ್ಯ ದೇಶದ ಹಿತ (ಅಭಿವೃದ್ಧಿ) ಸಾಧಿಸುತ್ತದೆ ಎನ್ನುವಲ್ಲಿ ಎರಡು ಮಾತಿಲ್ಲ. ಇವೆಲ್ಲ ಸಾಧಿಸುವಂತಾಗಲೆಂದು ಶ್ರೀಕೃಷ್ಣನು ವಿಶೇಷವಾಗಿ ಅನುಗ್ರಹಿಸಲಿ.
– ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪರ್ಯಾಯ ಶ್ರೀ ಕೃಷ್ಣಾಪುರ ಮಠ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.