ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ನೂತನ ಯತಿ
ಸರಳ ಸಮಾರಂಭದಲ್ಲಿ ಪುತ್ತಿಗೆ ಮಠಕ್ಕೆ ಉತ್ತರಾಧಿಕಾರಿ ನೇಮಕ
Team Udayavani, Apr 23, 2019, 6:07 AM IST
ಉಡುಪಿ: ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸೋಮವಾರ ಹಿರಿಯಡಕ ಸಮೀಪದ ಪುತ್ತಿಗೆ ಗ್ರಾಮದ ಮೂಲ ಮಠದಲ್ಲಿ ಕುಂಜಿಬೆಟ್ಟು ನಿವಾಸಿ ಪ್ರಶಾಂತ್ ಆಚಾರ್ಯ ಅವರಿಗೆ ಶ್ರೀ ಸುಶ್ರೀಂದ್ರತೀರ್ಥ ಎಂದು ನಾಮಕರಣ ಮಾಡಿ ತಮ್ಮ ಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡಿದರು.
ಎ. 20ರಂದು ಮೂಲಮಠದ ಪರಿಸರದಲ್ಲಿ ಪೂರ್ವಭಾವಿಯಾಗಿ ವಿವಿಧ ವಿಧಿವಿಧಾನಗಳು ನಡೆದವು. ವಿದ್ವಾಂಸರಾದ ಹೆರ್ಗ ವೇದವ್ಯಾಸ ಭಟ್ ನೇತೃತ್ವದಲ್ಲಿ ವಿರಜಾ ಹೋಮ ಸಹಿತ ವಿವಿಧ ಹೋಮ, ಧಾರ್ಮಿಕ ಅನುಷ್ಠಾನಗಳು ನಡೆದವು.
ಎ. 21ರಂದು ಸನ್ಯಾಸಾಶ್ರಮ ಸ್ವೀಕರಿಸುವ ಮುನ್ನ ಆತ್ಮಶ್ರಾದ್ಧಾದಿ ಗಳನ್ನು ನಡೆಸಲಾಯಿತು ಮತ್ತು ಕೇಶ ಮುಂಡನ ಮಾಡಿಕೊಳ್ಳಲಾಯಿತು.
ಎ. 22ರಂದು ಸೋಮವಾರ ಬೆಳಗ್ಗೆ ಸರ್ವಸಂಗ ಪರಿತ್ಯಾಗಿಯ ಸಂಕೇತವಾಗಿ ವಸ್ತ್ರ-ವಸ್ತುಗಳನ್ನು ತ್ಯಾಗ ಮಾಡಿ ಸುವರ್ಣಾ ನದಿಗೆ ಇಳಿದ 29ರ ಹರೆಯದ ಪ್ರಶಾಂತ ಆಚಾರ್ಯ ಅವರು ಮೇಲೆ ಬರು ವಾಗ ಕಾಶಾಯ ವಸ್ತ್ರ, ದಂಡ, ಕಮಂಡಲ ಹಿಡಿದುಕೊಂಡು ಮಠದ ಪಟ್ಟದ ದೇವರು ವಿಟuಲ ಹಾಗೂ ಸ್ತಂಭ ನರಸಿಂಹ ಅವರನ್ನು ಪ್ರಾರ್ಥಿಸಿದರು.
ಪ್ರಣವ ಮಂತ್ರೋಪದೇಶ
ಬೆಳಗ್ಗೆ 10.10ಕ್ಕೆ ಸುವರ್ಣಾ ನದಿ ತೀರದಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರಶಾಂತ ಆಚಾರ್ಯ ಅವರಿಗೆ ಪ್ರಣವ ಮಂತ್ರವನ್ನು ಬೋಧಿಸಿ ವೇದಾಂತನಿಷ್ಠೆಯನ್ನು ಉಪದೇಶಿ ಸಿದರು. ಅನಂತರ ಅವರನ್ನು ಮಠದ ಉತ್ತರಾಧಿ ಕಾರಿಯಾಗಿ ಪಟ್ಟಾಭಿಷೇಕ ಮಾಡಿ ಶ್ರೀ ಸುಶ್ರೀಂದ್ರತೀರ್ಥರು ಎಂದು ನಾಮಕರಣ ಮಾಡಿದರು. ಪಟ್ಟಾಭಿಷೇಕ ಪ್ರಕ್ರಿಯೆಯಂತೆ ತಲೆ ಮೇಲೆ ಹರಿವಾಣದಲ್ಲಿ ದೇವರ ವಿಗ್ರಹ ಗಳನ್ನು ಇರಿಸಿ ಅದಕ್ಕೆ ಅಭಿಷೇಕ ಮಾಡಿದ ತೀರ್ಥದಿಂದ ಶ್ರೀ ಸುಶ್ರೀಂದ್ರತೀರ್ಥರ ದೇಹ ಒದ್ದೆಯಾಯಿತು. ವಿವಿಧ ಪ್ರಕ್ರಿಯೆ ಗಳಲ್ಲಿ ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೆàಂದ್ರ ತೀರ್ಥ ಶ್ರೀಪಾದರು ಪಾಲ್ಗೊಂಡರು. ವಿದ್ವಾಂಸರಾದ ಪಂಜ ಭಾಸ್ಕರ ಭಟ…, ಚಿಪ್ಪಗಿರಿ ನಾಗೇಂದ್ರ ಆಚಾರ್ಯ, ಡಾ| ಎನ್.ವೆಂಕಟೇಶಾಚಾರ್ಯ ಬೆಂಗಳೂರು, ಡಾ| ರಾಮನಾಥ ಆಚಾರ್ಯ ಮೊದಲಾದವರು, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್ ಮೊದಲಾದವರಿದ್ದರು.
ಅನಂತರ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಒಂದು ಶ್ಲೋಕವನ್ನು ಶ್ರೀ ಸುಶ್ರೀಂದ್ರತೀರ್ಥರಿಗೆ ಸಾಂಕೇತಿಕವಾಗಿ ಹೇಳಿಕೊಡುವ ಮೂಲಕ 12 ವರ್ಷದ ಶಾಸ್ತ್ರಾಭ್ಯಾಸಕ್ಕೆ ಚಾಲನೆ ನೀಡಿದರು.
ಹಿರಿಯರಿಗೆ ಸನ್ಯಾಸಾಶ್ರಮವಾಗಿ 45 ವರ್ಷ ಭರ್ತಿ
ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸನ್ಯಾಸಾಶ್ರಮ ಸ್ವೀಕರಿಸಿ ಎ. 22ಕ್ಕೆ 45 ವರ್ಷಗಳಾಗಿವೆ. ಇವರಿಗೆ 12ನೇ ವರ್ಷವಾಗುವಾಗ ಸನ್ಯಾಸಾಶ್ರಮ ಸ್ವೀಕರಿಸಿದ್ದರು. ಇದೇ ದಿನ ಶಿಷ್ಯಸ್ವೀಕಾರವನ್ನೂ ಅವರು ನಡೆಸಿದರು.
ಸನ್ಯಾಸಿಯಾದ ಸಾಫ್ಟ್ವೇರ್ ಎಂಜಿನಿಯರ್
ಉಡುಪಿಯ ಕುಂಜಿಬೆಟ್ಟು ನಿವಾಸಿಯಾದ ಪ್ರಶಾಂತ್ ಆಚಾರ್ಯ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ತಂದೆ ಗುರುರಾಜ ಆಚಾರ್ಯ ಹಾಗೂ ತಾಯಿ ವಿನುತಾ ಆಚಾರ್ಯ. ಗುರುರಾಜ್ ಅವರು ಕುಂಜಿಬೆಟ್ಟಿನಲ್ಲಿ ಹೊಟೇಲ್ ನಡೆಸುತ್ತಿದ್ದಾರೆ. ತಾಯಿ ಗೃಹಿಣಿ.
ಪ್ರಶಾಂತ್ ಅವರು ಸಂಸ್ಕೃತದ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದಿದ್ದಾರೆ. ಪ್ರಾಥಮಿಕ ಶಿಕ್ಷಣ ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಶಾಲೆ, ಪ್ರೌಢಶಿಕ್ಷಣವನ್ನು ಅಳಿಕೆಯ ಸತ್ಯಸಾಯಿಬಾಬಾ ಸಂಸ್ಥೆ, ಪಿಯುಸಿ ಶಿಕ್ಷಣವನ್ನು ಮಣಿಪಾಲ ಪ.ಪೂ. ಕಾಲೇಜು, ಎಂಜಿನಿಯರಿಂಗ್ ಪದವಿಯನ್ನು ಮಂಗಳೂರು ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪಡೆದರು. ಶಿಕ್ಷಣ ಪಡೆಯುವಾಗಲೇ ಕ್ಯಾಂಪಸ್ ಆಯ್ಕೆ ಮೂಲಕ ಎಚ್‌ಪಿ ಕಂಪೆನಿಗೆ ಆಯ್ಕೆಯಾದರು. ಅನಂತರ ಈಗ ಕಳೆದ 3 ವರ್ಷದಿಂದ ಬೆಂಗಳೂರಿನ ಎರಿಕ್‌ಸನ್ ಖಾಸಗಿ ಸಾಫ್ಟ್ವೇರ್ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಒಟ್ಟು ಐದು ವರ್ಷ ವೃತ್ತಿ ಜೀವನ ನಡೆಸಿದ್ದಾರೆ.
ಗುರುರಾಜ ಆಚಾರ್ಯರಿಗೆ ಇಬ್ಬರು ಪುತ್ರರಿದ್ದು ಪ್ರಶಾಂತರ ತಮ್ಮ ಪ್ರದ್ಯುಮ್ನ ಆಚಾರ್ಯ ಅವರು ಎಂಟೆಕ್ ಕಲಿತು ಪುಣೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. 29 ವರ್ಷದ ಪ್ರಶಾಂತ್ ಅವರು ಈಗ ಪುತ್ತಿಗೆ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಎಂಜಿನಿಯರಿಂಗ್ ಕಲಿತ ಅಷ್ಟಮಠಗಳ ಸ್ವಾಮೀಜಿಯವರಲ್ಲಿ ಇವರು ಎರಡನೆಯವರು. ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಎಂಜಿನಿಯರಿಂಗ್ ಪದವಿ ಪಡೆದಿದ್ದರು.
ಮಗನಿಗೆ ಚಿಕ್ಕ ಪ್ರಾಯದಿಂದಲೂ ಅಧ್ಯಾತ್ಮದ ಒಲವಿತ್ತು. ಮದುವೆ ಮಾಡಲು ಹೆಣ್ಣು ನೋಡಿದರೂ ಒಪ್ಪಿರಲಿಲ್ಲ. ಪುತ್ತಿಗೆ ಮಠದ ಸ್ವಾಮೀಜಿಯವರು ನಮ್ಮನ್ನು ಕರೆದು ಮಗನಿಗೆ ಜಾತಕ ಪ್ರಕಾರ ಸನ್ಯಾಸ ಯೋಗವಿದೆ. ಆದ್ದರಿಂದ ಮಠಕ್ಕೆ ಕೊಡಿ ಎಂದು ಕೇಳಿದರು. ಮಗನೂ ಅದಕ್ಕೆ ಒಲವು ವ್ಯಕ್ತಪಡಿಸಿದ. ತಾಯಿಗೆ ಮನಸ್ಸಿಲ್ಲದಿದ್ದರೂ ಮಗನಿಗಾಗಿ ಒಪ್ಪಿದಳು.
– ಗುರುರಾಜ ಆಚಾರ್ಯ, ಶ್ರೀ ಸುಶೀಂದ್ರತೀರ್ಥರ ಪೂರ್ವಾಶ್ರಮದ ತಂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್ ಶವವಾಗಿ ಪತ್ತೆ!
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Guns and Roses Review: ನೆತ್ತರ ಹಾದಿ ಪ್ರೇಮ್ ಕಹಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.