ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ನೃತ್ಯಸೇವೆಗೆ ಆಕಾಂಕ್ಷಿಗಳ ದಂಡು
Team Udayavani, Oct 14, 2021, 3:03 AM IST
ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಡೆಯುತ್ತಿರುವ ನವರಾತ್ರಿ ಪರ್ವಕಾಲದಲ್ಲಿ ಕ್ಷೇತ್ರದ ವಿಶೇಷ ಸೇವೆಗಳಲ್ಲಿ ಒಂದಾದ ನೃತ್ಯಸೇವೆಗೆ ದಿನದಿಂದ ದಿನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ.
ಗತಕಾಲದಲ್ಲಿ ನಾಟ್ಯರಾಣಿ ಗಂಧರ್ವ ಕನ್ಯೆಯಿಂದ ಪ್ರತಿಷ್ಠಾಪಿಸಲ್ಪಟ್ಟ ದೇವಿಯ ಕ್ಷೇತ್ರವಾದ ಇಲ್ಲಿ ನೃತ್ಯಸೇವೆಗೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇಲ್ಲಿ ನೃತ್ಯಸೇವೆ ಸಲ್ಲಿಸಿದರೆ ಮನೋಕಾಮನೆ ನೆರವೇರಲಿದೆ ಎನ್ನುವ ಪ್ರತೀತಿ ಇದ್ದು, ಉಡುಪಿ ಆಸುಪಾಸಿನವರಲ್ಲದೆ, ಪರವೂರಿನಿಂದಲೂ ಕ್ಷೇತ್ರಕ್ಕೆ ಬಂದು ನೃತ್ಯಸೇವೆ ನೀಡಿ ಕೃತಾರ್ಥ ರಾಗುತ್ತಿದ್ದಾರೆ.
ನವರಾತ್ರಿ ಸಂದರ್ಭ ದಿನನಿತ್ಯ ಊರ, ಪರವೂರ ಭಕ್ತರ ಸೇವಾರೂಪದ ಚಂಡಿಕಾಯಾಗ, ಸಹಸ್ರ ನಾಮಾರ್ಚನೆ, ಕಲೊ³àಕ್ತ ಪೂಜೆ, ರಂಗಪೂಜೆ, ಶ್ರೀ ದುರ್ಗಾ ನಮಸ್ಕಾರ ಪೂಜೆ, ದೀಪಾರಾಧನೆ, ಬಲಿ ಉತ್ಸವ ನಡೆಯುತ್ತಿದೆ. ಇದಲ್ಲದೆ ಲಲಿತಾ ಪಂಚಮಿಯಂದು ಜೋಡಿ ಶ್ರೀ ಲಲಿತಾ ಸಹಸ್ರ ಕದಳೀಯಾಗ ನೆರವೇರಿದೆ. ನಿರಂತರವಾಗಿ ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದ ವಿತರಣೆ ನಡೆಯುತ್ತಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವಿವಿಧ ಭಜನ ತಂಡಗಳಿಂದ ಭಜನ ಸಂಕೀರ್ತನೆ, ಕುಣಿತ ಭಜನೆ, ಪ್ರಸಿದ್ಧ ಚಂಡೆ ಬಳಗದ ಚಂಡೆ ವಾದನ, ವಿವಿಧೆಡೆಗಳ ಕಲಾ ತಂಡಗಳಿಂದ ವೈವಿಧ್ಯಮಯ ಮನೋರಂಜನ ಕಾರ್ಯಕ್ರಮಗಳು ನಡೆಯುತ್ತಿವೆ. ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಎಲ್ಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ:ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಏಮ್ಸ್ ಗೆ ದಾಖಲು
ನೃತ್ಯಸೇವೆಗೊಲಿವ ದೇವಿ
ಕ್ಷೇತ್ರದ ಪ್ರಮುಖ ಸೇವೆಯಾದ ನೃತ್ಯಸೇವೆ ಸಮರ್ಪಿಸಲು ಕ್ಷೇತ್ರಕ್ಕೆ ನೃತ್ಯಾಕಾಂಕ್ಷಿಗಳು ಹೆಚ್ಚೆಚ್ಚು ಆಗಮಿಸಲು ಆದಿಶಕ್ತಿಯ ಮಹಿಮೆಯೇ ಕಾರಣ. ಈ ಮೊದಲು ಸೇವೆ ಸಲ್ಲಿಸಿದ ನೃತ್ಯ ಸೇವಾರ್ಥಿಗಳ ಇಚ್ಛೆ ನೆರವೇರಿದೆ. ಇಲ್ಲಿ ನೃತ್ಯಸೇವೆ ಸಲ್ಲಿಸಲು ಶುಲ್ಕ ಪಾವತಿಸಬೇಕಾಗಿಲ್ಲ. ಹೆಸರು ನೋಂದಾಯಿಸಿದರೆ ಸಾಕು. ಕ್ಷೇತ್ರದಿಂದಲೇ ಅನುಗ್ರಹ ಪ್ರಸಾದ ನೀಡಲಾಗುವುದು. ನೃತ್ಯಸೇವೆ ಸಮರ್ಪಿಸಿದ, ಸಮರ್ಪಿಸಲಿರುವ ಸೇವಾರ್ಥಿಗಳ ಮನದಿಂಗಿತವನ್ನು ಮಾತೆ ಈಡೇರಿಸಲಿ.
-ಶ್ರೀ ರಮಾನಂದ ಗುರೂಜಿ, ಧರ್ಮದರ್ಶಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.