ಶ್ರೀ ಕ್ಷೇತ್ರ ಮೂಡುಸಗ್ರಿ ಫೆ. 9: ಸಿರಿ ಸಿಂಗಾರದ ನೇಮ
Team Udayavani, Feb 7, 2019, 12:30 AM IST
ಉಡುಪಿ: ಶ್ರೀ ಕ್ಷೇತ್ರ ಮೂಡುಸಗ್ರಿ ಸ್ವಾಮಿ ಶ್ರೀ ಮುಖ್ಯ ಪ್ರಾಣ, ಶ್ರೀ ಕಲ್ಕುಡ, ಕೊರಗಜ್ಜ ಸನ್ನಿಧಾನದಲ್ಲಿ ಫೆ. 9ರಂದು ಸಿರಿ ಸಿಂಗಾರದ ನೇಮ, ಶ್ರೀ ಕಲ್ಕುಡ ದೈವಕ್ಕೆ ಪಂಚಲೋಹ, ಬೆಳ್ಳಿ – ಬಂಗಾರದ ಕುದುರೆ ಸಮರ್ಪಣೆ, ಸಾಮೂಹಿಕ ಶ್ರೀ ಶನಿಪೂಜೆ, ಮಹಾ ಅನ್ನಸಂತರ್ಪಣೆ, ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಜರಗಲಿದೆ.
ಬೆಳಗ್ಗೆ 8ಕ್ಕೆ ತುಲಾಭಾರ ಸೇವೆ, 10ಕ್ಕೆ ಸಾಮೂಹಿಕ ಶ್ರೀ ಶನಿಪೂಜೆ, 11.30ಕ್ಕೆ ದೇವರ ಬಾಳು ಭಂಡಾರ ಬರುವುದು, 12.30ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ 7.30ಕ್ಕೆ ಕಲ್ಕುಡ ದೈವಕ್ಕೆ ಹೂವಿನ ಪೂಜೆ, 9.30ಕ್ಕೆ ಸಿರಿ ಸಿಂಗಾರದ ನೇಮ ನಡೆಯಲಿದೆ.
ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಉಪಸ್ಥಿತರಿರುವರು. ಅತಿಥಿಗಳಾಗಿ ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆ ಸದಸ್ಯೆ ಭಾರತಿ ಪ್ರಶಾಂತ್, ಸಮಾಜ ಸೇವಕ ಭಾಸ್ಕರ್ ಶೇರಿಗಾರ್ ಭಾಗವಹಿಸಲಿದ್ದಾರೆ.
ದಿ| ಕೊರತಿ ಪೂಜಾರಿ ಸ್ಮರಣಾರ್ಥ ಸಪ್ತ ಸಾಧಕರಾದ ಕುಂಜಾರುಗಿರಿ ಶ್ರೀ ಪಾಜಕ ಕ್ಷೇತ್ರದ ಧಾರ್ಮಿಕ ವಿಧಿ ತಜ್ಞ ಮಾಧವ ಉಪಾಧ್ಯಾಯ, ದೈವಾರಾಧನೆ ನಡೆಸುವ ಭಾಸ್ಕರ ಪಂಬದೆರ್ ಪಡುಬಿದ್ರಿ, ವ್ಯಾಪಾರಿ ಶೀನ ನಾಯ್ಕ ದೊಡ್ಡಣಗುಡ್ಡೆ, ತುಳು ಚಿತ್ರ ನಟಿ ರಂಜಿತಾ ಶೇಟ್, ಜಿಲ್ಲಾ ಭಜನ ಮಂಡಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ. ಶಿವಕುಮಾರ್ ಅಂಬಲಪಾಡಿ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಬಾಲ ಕಲಾವಿದ ಶ್ರೀಹರಿ ಪಾಡಿಗಾರ್, ಸ್ಯಾಕೊಫೋನ್ ಬಾಲ ಪ್ರತಿಭೆ ಶ್ರೀನಿಧಿ ದೇವಾಡಿಗ ಬಂಟಕಲ್ಲು ಅವರನ್ನು ಸಮ್ಮಾನಿಸಲಾಗುವುದೆಂದು ಭಾಸ್ಕರ ಗುಂಡಿಬೈಲು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.