
ಪಚ್ಚೆಮಣಿ ಚಿನ್ನದ ಹಾರ ಕೃಷ್ಣಾರ್ಪಣ; ಶ್ರೀ ಕಾಶೀ ಮಠಾಧೀಶರ ಕಾಣಿಕೆ
Team Udayavani, Jan 5, 2022, 5:50 AM IST

ಉಡುಪಿ: ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು ಕಾಣಿಕೆಯಾಗಿ ಅರ್ಪಿಸಿದ ಪಚ್ಚೆ ಮಣಿಯ ಚಿನ್ನದ ಹಾರದಿಂದ ಶ್ರೀಕೃಷ್ಣ ದೇವರ ವಿಗ್ರಹವನ್ನು ಅಲಂಕರಿಸಲಾಯಿತು.
ಕಾಶೀ ಮಠಾಧೀಶರ ಜನ್ಮನಕ್ಷತ್ರಕ್ಕೆ ಅನುಗುಣವಾಗಿ ಸೋಮವಾರ ಬೆಳಗ್ಗೆ ಸಮರ್ಪಿಸಲಾಯಿತು. ಮಂಗಳವಾರವೂ ಹಾರದಿಂದ ಅಲಂಕರಿಸಲಾಯಿತು. ಎರಡೂ ದಿನ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಅಲಂಕಾರ ಪೂಜೆಯನ್ನು ನಡೆಸಿದರೆ, ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು. ಎರಡೂ ದಿನ ಕಡೆಗೋಲು ಕೃಷ್ಣನ ಅಲಂಕಾರವನ್ನು ಮಾಡಲಾಗಿತ್ತು.
ಇದನ್ನೂ ಓದಿ:ಸ್ಯಾಮ್‌ಸಂಗ್‌ನಿಂದ ಹೊಸ ಫೋನ್; ಪ್ರಸಕ್ತ ವರ್ಷದ ಮೊದಲ ಸ್ಮಾರ್ಟ್‌ಫೋನ್
ಕಾಶೀ ಮಠಾಧೀಶರು ಡಿ. 18ರಂದು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಹಿನ್ನೆಲೆಯಲ್ಲಿ ಶ್ರೀಪಾದರು ನೀಡಿದ ಪಚ್ಚೆ ಮಣಿಯ ಚಿನ್ನದ ಹಾರವನ್ನು ಡಿ. 31ರಂದು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ದೇವಸ್ಥಾನಗಳ ಪ್ರಮುಖರು ಪರ್ಯಾಯ ಶ್ರೀಪಾದರಿಗೆ ಹಸ್ತಾಂತರಿಸಿದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.