ಕೃಷ್ಣಾಷ್ಟಮಿ: ಮಕ್ಕಳ ಚಿಕಿತ್ಸೆಗೆ ವೇಷ ಹಾಕಲಿರುವ ರವಿ ಕಟಪಾಡಿ
Team Udayavani, Sep 12, 2017, 7:00 AM IST
ಉಡುಪಿ: ಕಳೆದ 3 ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ವಿವಿಧ ವೇಷ ಧರಿಸಿ, ಬಡ ಮಕ್ಕಳಿಗೆ ನೆರವಾಗುತ್ತಿರುವ ರವಿ ಕಟಪಾಡಿ ಅವರು ಬಳಗದೊಂದಿಗೆ ಸೇರಿ ಈ ಬಾರಿಯೂ 4 ಮಕ್ಕಳ ಚಿಕಿತ್ಸೆಗೆ ನೆರವಾಗುವ ಮಹಾದಾಸೆ ಹೊಂದಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ ಕೆ. ಅವರು ರವಿ ಮತ್ತು ಫ್ರೆಂಡ್ಸ್ ಕಟಪಾಡಿ ಬಳಗವು ಅನಾರೋಗ್ಯದಿಂದ ಬಳಲುತ್ತಿರುವ 4 ಬಡ ಮಕ್ಕಳ ಕುಟುಂಬಕ್ಕೆ ಆರ್ಥಿಕ ಸಹಾಯ ಹಸ್ತ ನೀಡುವ ಉದ್ದೇಶದಿಂದ ಸೆ. 13, 14ರಂದು ಕ್ರಾಂಪಸ್ ವೇಷ ತೊಟ್ಟು ಹಣ ಸಂಗ್ರಹಿಸಲು ಮುಂದಾಗಿದೆ. ಸೆ.13, ಬೆಳಗ್ಗೆ 7 ಗಂಟೆಗೆ ಗ್ರಾಂಪಸ್ ವೇಷದೊಂದಿಗೆ ಕಟಪಾಡಿಯಿಂದ ಹೊರಡಲಿದ್ದೇವೆ.
ಕಟಪಾಡಿ, ಮಲ್ಪೆ, ಪಡುಕೆರೆ, ಉದ್ಯಾವರ, ಉಡುಪಿ, ನಿಟ್ಟೂರು, ರಾಜಾಂಗಣದಲ್ಲಿ ಪ್ರದರ್ಶನ ನೀಡಿ, ಸಂಗ್ರಹವಾಗುವ ಹಣವನ್ನು ಮಕ್ಕಳಿಗೆ ನೀಡಲಿದ್ದೇವೆ ಎಂದರು.
ಮೂಡುಬಿದಿರೆಯ ದರೆಗುಡ್ಡೆ – ಪಣಪಿಲ ಪುನಿಕೆಬೆಟ್ಟುವಿನ ಒಂದೂವರೆ ವರ್ಷದ ಲಾವಣ್ಯ, ಶಿವಮೊಗ್ಗದ ಶಾಹೀನಾ ಅವರ ಪುತ್ರಿ ಮೆಹಕ್ ಜಿ, ಉಡುಪಿ ದೆಂದೂರುಕಟ್ಟೆಯ ಸುನೀತಾ ಪ್ರಕಾಶ್ ಅವರ ಒಂದುವರೆ ತಿಂಗಳಿನ ಮಗು ಹಾಗೂ ಬನ್ನಂಜೆಯ ಎಳೆಯ ಮಗುವಿಗೆ ಆರ್ಥಿಕ ಸಹಾಯ ಹಸ್ತ ನೀಡಲಿದ್ದಾರೆ.
ಈ ವೇಷಕ್ಕಾಗಿ ನನ್ನ 75ಕ್ಕೂ ಅಧಿಕ ಸ್ನೇಹಿತರು ದುಡಿಯುತ್ತಿದ್ದು, ಸಂಗ್ರಹವಾದ ಹಣವನ್ನು ಸಮನಾಗಿ ಹಂಚಿ ನಾಲ್ವರು ಮಕ್ಕಳ ಚಿಕಿತ್ಸೆಗೆ ನೀಡಲಿದ್ದೇವೆ. ಸೆ. 19ರ ಸಂಜೆ 4 ಗಂಟೆಗೆ ಕಟಪಾಡಿ ವಿಜಯ ಬ್ಯಾಂಕಿನ ಬಳಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಕೇಮಾರು ಮಠದ ಶ್ರೀ ಈಶ ವಿಠಲದಾಸ ಶ್ರೀಪಾದರು, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಎಸ್ಪಿ ಡಾ| ಸಂಜೀವ್ ಎಂ. ಪಾಟೀಲ್ ಭಾಗವಹಿಸಲಿದ್ದಾರೆ ಎಂದರು.
ನೀವು ನೆರವು ನೀಡಬಹುದು ಆರೋಗ್ಯ ಸಮಸ್ಯೆಯಿಂದ ಬಳಲು ತ್ತಿರುವ ಮಕ್ಕಳ ಚಿಕಿತ್ಸೆ ವೆಚ್ಚಕ್ಕಾಗಿ ವೇಷ ಹಾಕುವ ರವಿ ಕೆ. ಅವರ ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸುವ ದಾನಿಗಳು ಪಾಂಗಾಳ ವಿಜಯ ಬ್ಯಾಂಕಿನ ಎಸ್‌ಬಿ ಖಾತೆ: 117206331000013 (ಐಎಫ್‌ಎಸ್‌ಸಿ ಕೋಡ್: VIGB 0001172) ಗೆ ಜಮಾ ಮಾಡಬಹುದು.
ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕ ದಯಾನಂದ, ಸುಧೀಶ್, ಚರಣ್‌ರಾಜ್, ಅರುಣ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.