ಪುತ್ತಿಗೆ ಶ್ರೀಗಳಿಗೆ ಇಂದು ಅಭಿನಂದನೆ
Team Udayavani, Jul 22, 2017, 7:30 AM IST
ಉಡುಪಿ: ವಿದೇಶಗಳಲ್ಲಿ ಹಲವು ಧಾರ್ಮಿಕ ಕೇಂದ್ರಗಳನ್ನು ತೆರೆದ ಉಡುಪಿಯ ಮೊದಲ ಯತಿ ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜು. 22 ಸಂಜೆ 5ಕ್ಕೆ ನಾಗರಿಕರ ವತಿಯಿಂದ ಸಮ್ಮಾನಿಸಲಾಗುತ್ತಿದೆ.
ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ಧರ್ಮ ಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ, ಸಚಿವ ಪ್ರಮೋದ್ ಮಧ್ವರಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೋಡುಕಟ್ಟೆ ಯಿಂದ 4 ಗಂಟೆಗೆ ಶೋಭಾಯಾತ್ರೆಯಲ್ಲಿ ಶ್ರೀಪಾದ ರನ್ನು ಬರಮಾಡಿಕೊಳ್ಳಲಾಗುತ್ತದೆ.
ಶ್ರೀಪಾದರು ಅಮೆರಿಕ, ಕೆನಡ, ಇಂಗ್ಲೆಂಡ್, ಆಸ್ಟ್ರೇಲಿಯ ಮೊದಲಾದ ದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಭಾರತೀಯ ಮೂಲದವರು ತಮ್ಮ ಧಾರ್ಮಿಕ ಆಚರಣೆಗಳಿಗೆ ಅಗತ್ಯದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಬೇಡಿಕೆ ಇಟ್ಟರು. ಇದರ ಪರಿಣಾಮವೇ ಒಂದೊಂದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಶ್ರದ್ಧಾ ಕೇಂದ್ರಗಳು. ಅಲ್ಲಿನ ಕಾನೂನು, ಹಣಕಾಸು ವ್ಯವಸ್ಥೆ, ಕಾಲಮಾನ ಎಲ್ಲವೂ ಭಾರತಕ್ಕಿಂತ ಸಂಪೂರ್ಣ ಭಿನ್ನವಾಗಿದ್ದರೂ, ಇಲ್ಲಿನ ಧಾರ್ಮಿಕ ನಿಯಮಗಳನ್ನೂ ಉಳಿಸಿಕೊಂಡು ಆ ವ್ಯವಸ್ಥೆಯಲ್ಲಿ ಕೇಂದ್ರಗಳನ್ನು ತೆರೆದುದು ಶ್ರೀಪಾದರ ಸಾಗರೋತ್ತರ ಸಾಧನೆಯಾಗಿದೆ.
ಮೊದಲು ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ತಾತ್ಕಾಲಿಕ ಕೇಂದ್ರಗಳನ್ನು ತೆರೆದ ಶ್ರೀಪಾದರು ವ್ಯವಸ್ಥೆಗಳನ್ನು ಕ್ರೋಡೀಕರಿಸಿಕೊಂಡು ವಿಗ್ರಹಗಳ ಪ್ರತಿಷ್ಠಾಪನೆ ಮಾಡಿದರು. ಇದಕ್ಕಾಗಿ ಕೋಟ್ಯಂತರ ರೂ. ವೆಚ್ಚವಾಗುತ್ತಿದೆ.
ಗಜಪೃಷ್ಠ- ಬ್ರಹ್ಮರಥ ಶೈಲಿ
ಎಂಟು ವರ್ಷಗಳ ಹಿಂದೆ ಅಮೆರಿಕದ ಎಡಿಸನ್ ನಗರದಲ್ಲಿ ಜಾಗವನ್ನು ಖರೀದಿಸಿ “ಕೃಷ್ಣ ವೃಂದಾವನ’ ಕ್ಷೇತ್ರವೆಂದು ಹೆಸರಿಸಿದ್ದ ಶ್ರೀಪಾದರು ಇತ್ತೀಚೆಗೆ ಅಲ್ಲಿ ಉಡುಪಿ ಶ್ರೀಕೃಷ್ಣನನ್ನು ಹೋಲುವ ಕೃಷ್ಣ ವಿಗ್ರಹದ ಪ್ರತಿಷ್ಠೆ ನಡೆಸಿದರು.
ದೇವಸ್ಥಾನವನ್ನು ಉಡುಪಿ ಅನಂತೇಶ್ವರ ದೇವಸ್ಥಾನದ ಗಜಪೃಷ್ಠ ಆಯದಲ್ಲಿ, ಶ್ರೀಕೃಷ್ಣ ಮಠದ ಬ್ರಹ್ಮರಥದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಒಟ್ಟು ವಿಸ್ತೀರ್ಣ ಸುಮಾರು 3.5 ಎಕ್ರೆ. ಪೂಜಾಗೃಹ, ಭೋಜನಾಲಯ, ಸಿಬಂದಿ ವಸತಿಗೃಹ, ಸುಮಾರು 300 ಜನರು ಸೇರಬಹುದಾದ ಸಮುದಾಯ ಸಭಾಂಗಣವಿದೆ. ದಾರುಶಿಲ್ಪ ವೈಭವ, ವಾಸ್ತುಶಿಲ್ಪದ ಸಮ್ಮಿಲನಗಳು ಇದರ ವೈಶಿಷ್ಟé.
ಕುಶಲಕರ್ಮಿಗಳು
ವಿಗ್ರಹದ ಪಾಣಿಪೀಠ (ಕಲ್ಲು), ಮರದ ಕೆತ್ತನೆಗಳನ್ನು ಮೂಡಬಿದಿರೆಯ ಹರೀಶ ಆಚಾರ್ಯರ ನೇತೃತ್ವದಲ್ಲಿ ನಿರ್ಮಿಸಿ ಸಮುದ್ರದ ಮಾರ್ಗದ ಮೂಲಕ ಎಡಿಸನ್‌ಗೆ ಸಾಗಿಸಿ ಜೋಡಿಸಲಾಗಿದೆ. ಎಡಿಸನ್‌ನಲ್ಲಿ ಮರದ ಕೆತ್ತನೆಗಳನ್ನುಹರೀಶ ಆಚಾರ್ಯರ ಕುಶಲಕರ್ಮಿಗಳು ಜೋಡಿಸಿ ದರು. ಇದರ ಸಾಗಾಟದ ಖರ್ಚೇ ಸುಮಾರು 50 ಲ.ರೂ. ಕೃಷ್ಣ ವಿಗ್ರಹವನ್ನು ಸಾಲಿಗ್ರಾಮ ಶಿಲೆಯಿಂದ ರಚಿಸಲಾಗಿದೆ. ನೇಪಾಲದ ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮದ ಶಿಲೆಯಲ್ಲಿ ವಿಗ್ರಹವನ್ನು ನೇಪಾಲದಲ್ಲಿ ನಿಂತು ಸುಮಾರು ಆರು ತಿಂಗಳ ಪರಿಶ್ರಮದಲ್ಲಿ ಕಡೆದವರು ಶಿರಸಿಯ ಹರೀಶ ಆಚಾರ್ಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.