ಹಿರಿಯಡಕ ದೇಗುಲ ನಕ್ಷತ್ರವನ: 100ಕ್ಕೂ ಮಿಕ್ಕಿ ಸಸ್ಯಸಂಕುಲ
Team Udayavani, Apr 18, 2018, 7:00 AM IST
ಹಿರಿಯಡಕ: 800 ವರ್ಷಗಳ ಇತಿಹಾಸ ಹೊಂದಿರುವ ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಅತ್ಯಾಕರ್ಷಕ ಕೆತ್ತನೆ ಹಾಗೂ ಕಾಷ್ಟ ಶಿಲ್ಪದ ರಚನೆಯಿಂದ ಈಗಾಗಲೇ ಜನರನ್ನು ಆಕರ್ಷಿಸುತ್ತಿರುವುದರೊಂದಿಗೆ ಇದೀಗ ಆದಿಬ್ರಹ್ಮಸ್ಥಾನದ ಗುಡಿಯ ಸಮೀಪ ಸುಮಾರು 100ಕ್ಕೂ ಮಿಕ್ಕಿ ಸಸ್ಯಸಂಕುಲಗಳಿಂದ ಕೂಡಿದ ನಕ್ಷತ್ರವನ ಹಾಗೂ ನವಗ್ರಹ ವನ ನಿರ್ಮಾಣಗೊಳ್ಳುತ್ತಿದ್ದು ಅಂತಿಮ ಹಂತದಲ್ಲಿದೆ
ದೇವಸ್ಥಾನದ ಪರಿಸರದಲ್ಲಿಯೇ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಅತ್ಯಾಕರ್ಷಕವಾಗಿ ನಿರ್ಮಾಣವಾದ ನಕ್ಷತ್ರ ವನದಲ್ಲಿ ಕಾಸರಕ, ನೆಲ್ಲಿ, ಅತ್ತಿಮರ, ನೇರಳೆ, ಕಾಚು, ಹಿಪ್ಪಲಿ, ಬಿದಿರು, ಅಶ್ವತ್ಥ, ನಾಗಸಂಪಿಗೆ, ಅಳಲೆ, ಬಸರಿ ಮರ, ಮುತ್ತುಗ, ಅಂಬಟೆ, ಬಿಲ್ವ, ಹೊಳೆಮತ್ತಿ, ಹಣ್ಣುಸಂಪಿಗೆ, ರೆಂಜೆ, ಸರಳ, ರಾಳ ಧೂಪ, ಬೀಟೆ, ಹಲಸು, ಎಕ್ಕೆಗಿಡ, ಶಮೀ, ಕದಂಬ, ಕಹಿಬೇವು, ಮಾವು, ಇಪ್ಪೆಮರ ಸೇರಿದಂತೆ ನೂರಕ್ಕೂ ಮಿಕ್ಕಿ ಸಸ್ಯಸಂಕುಲಗಳಿವೆ.
ಸುರೇಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ವಿಟ್ಲದ ದಿನೇಶ್ ನಾಯಕ್ ಅವರ ವಿಶೇಷ ಮುತುವರ್ಜಿಯೊಂದಿಗೆ ನಿರ್ಮಾಣ ಕಾರ್ಯ ನಡೆಯಿತ್ತಿದೆ.
ನವಗ್ರಹ ವನ: ನಕ್ಷತ್ರವನದ ಮಧ್ಯ ಭಾಗದಲ್ಲಿ ನವಗ್ರಹಗಳಿಗೆ ಸಂಬಂಧ ಪಟ್ಟ ಕೇತುವಿಗೆ ದರ್ಬೆ, ಗುರುವಿಗೆ ಅಶ್ವತ್ಥ, ಬುಧನಿಗೆ ಉತ್ತರಾಣಿ, ಶನಿಗೆ ಶಮೀ, ರವಿಗೆ ಬಿಳಿಎಕ್ಕ, ಶುಕ್ರನಿಗೆ ಅತ್ತಿಮರ, ರಾಹುವಿಗೆ ಗರಿಕೆ, ಮಂಗಳನಿಗೆ ಖದಿರ ಹಾಗೂ ಸೋಮ ಗ್ರಹಕ್ಕೆ ಮುತ್ತುಗ ಗಿಡವನ್ನು ನವಗ್ರಹವನದಲ್ಲಿ ಕಾಣಬಹುದಾಗಿದೆ.
ಸಕರಾತ್ಮಕ ಚಿಂತನೆ
ಉತ್ತಮ ಗಾಳಿ ,ಉತ್ತಮ ಆರೋಗ್ಯ ಭಾಗ್ಯಕ್ಕೆ ಹಾಗೂ ಸಕರಾತ್ಮಕ ಚಿಂತನೆಗಳನ್ನು ಹೊಂದಲು ನವಗ್ರಹ ವನಗಳು ಸಹಕಾರಿಯಾಗಿದೆ.ಈ ನಟ್ಟಿನಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾಧಿಗಳು ದೇವರ ದರ್ಶನ ಪಡೆದು ಅತ್ಯಾಕರ್ಷಕ ಕೆತ್ತನೆಯ ವೀಕ್ಷಣೆಯೊಂದಿಗೆ ನಕ್ಷತ್ರವನದಲ್ಲಿ ವಾಯುವಿಹಾರ ಮಾಡಲು ಪೂರಕವಾಗಿ ನಿರ್ಮಾಣವಾಗಿದೆ ಎಂದು ಜೀರ್ಣೋದ್ಧಾರ ಸಮಿತಿಯ ರಾಜರಾಮ ಹೆಗ್ಡೆ ಅವರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.