ಕಾಪು : ಬಾಲಕಿಯ ಚಿಕಿತ್ಸೆಗಾಗಿ ವೇಷ ಧರಿಸಿ 10 ಲಕ್ಷ ರೂ. ಸಂಗ್ರಹಿಸಿದ ಯೂಟ್ಯೂಬರ್
ಸಾನ್ವಿಯ ಚಿಕಿತ್ಸೆಗೆ ಇನ್ನೂ 15-20 ಲಕ್ಷ ರೂ. ನ ಅವಶ್ಯಕತೆ
Team Udayavani, Aug 27, 2022, 3:50 PM IST
ಕಾಪು : ತಲಸೇಮಿಯಾ ಮೇಜರ್ ಎಂಬ ವಿಶಿಷ್ಟ ಕಾಯಿಲೆಯಿಂದ ಬಳಲುತ್ತಿರುವ ಹೆಬ್ರಿ ತಾಲೂಕು ಕುಚ್ಚಾರು ಗ್ರಾಮದ ಸಾನ್ವಿ ನಾಯ್ಕ ಎಂಬ ಬಾಲಕಿಯ ಬೋನ್‌ಮ್ಯಾರೋ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಗೆ ಸ್ಪಂದಿಸುವ ಉದ್ದೇಶದೊಂದಿಗೆ ಕಾಪುವಿನ ಯೂಟ್ಯೂಬರ್ ಸಚಿನ್ ಶೆಟ್ಟಿ ನೇತೃತ್ವದ ಶಟರ್ ಬಾಕ್ಸ್ ಫಿಲಮ್ಸ್ ತಂಡ ಅಷ್ಟಮಿಯ ದಿನ ವೇಷ ಧರಿಸಿ ಸಂಗ್ರಹಿಸಿದ 10.51 ಲ.ರೂ. ಮೊತ್ತದ ಸಹಾಯ ಧನವನ್ನು ಗುರುವಾರ ಬಾಲಕಿಯ ಹೆತ್ತವರಿಗೆ ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ಅವರ ಮೂಲಕ ಹಸ್ತಾಂತರಿಸಲಾಯಿತು.
ಸಚಿನ್ ಶೆಟ್ಟಿ ನೇತೃತ್ವದಲ್ಲಿ ಚೇತನ್ ಶೆಟ್ಟಿ, ನಿತೇಶ್ ಪೂಜಾರಿ, ಶ್ರೇಯಸ್, ಸುದೀಪ್ ಮೊದಲಾದವರು ರಕ್ಕಸ ವೇಷ ಧರಿಸಿ ಅಷ್ಟಮಿಯಂದು ಹಣ ಸಂಗ್ರಹಿಸಿದ್ದಲ್ಲದೆ ಸಾಮಾಜಿಕ ಜಾಲತಾಣದ ಮೂಲಕವೂ ದೇಣಿಗೆ ನೀಡುವಂತೆ ಮನವಿ ಮಾಡಿದ್ದರು. ತಂಡ ವೇಷ ಧರಿಸಿ 1.50 ಲಕ್ಷ ರೂ. ಸಂಗ್ರಹಿಸಿದ್ದು ಸಾಮಾಜಿಕ ಜಾಲತಾಣ ಮೂಲಕ ಸುಮಾರು 9 ಲಕ್ಷ ರೂ. ಸಂಗ್ರಹಿಸಿತ್ತು.
ಸಾನ್ವಿಯ ಚಿಕಿತ್ಸೆಗೆ ಸುಮಾರು 40 ಲ.ರೂ.ವರೆಗೆ ಬೇಕಿದ್ದು ಸಮಾಜದ ಹಲವಾರು ಸಂಘ ಸಂಸ್ಥೆಗಳು ತಮ್ಮ ಕೈಲಾದಷ್ಟು ಮೊತ್ತವನ್ನು ನೀಡಿದ್ದಾರೆ. ಚಿಕಿತ್ಸೆಗಾಗಿ ಇನ್ನೂ 15-20 ಲಕ್ಷ ರೂ. ವರೆಗೆ ಹಣ ಸಂಗ್ರಹವಾಗಬೇಕಾಗಿದೆ.
ಇದನ್ನೂ ಓದಿ : ಈ ಭಾರತೀಯ ಆಟಗಾರ ಏಷ್ಯಾಕಪ್ ನಲ್ಲಿ ದೊಡ್ಡ ಸ್ಕೋರ್ ಮಾಡಬಲ್ಲ: ರಶೀದ್ ಖಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.