ಸಿದ್ದಾಪುರ: ಅಕ್ರಮ ಬೇಟೆಗಾರರ ಬಂಧನ
Team Udayavani, May 22, 2018, 8:50 AM IST
ಸಿದ್ದಾಪುರ: ಕಿಲಂದೂರು ಅರಣ್ಯದ ಹಂಗರಮಕ್ಕಿ ಬಳಿ ಬೇಟೆಯಾಡುತ್ತಿದ್ದ ಇಬ್ಬರನ್ನು ಪರವಾನಿಗೆರಹಿತ ಕೋವಿ, ಮದ್ದುಗುಂಡು ಸಹಿತ ಅರಣ್ಯ ಇಲಾಖೆ ಸಿಬಂದಿ ಬಂಧಿಸಿದ್ದಾರೆ.
ಕುದುರೆಮುಖ ವನ್ಯಜೀವಿ ವಿಭಾಗದ ಸಿದ್ದಾಪುರ ಉಪ ವಿಭಾಗದ ಸಿದ್ದಾಪುರ ವನ್ಯಜೀವಿ ವಲಯ ವ್ಯಾಪ್ತಿಯ ಕಿಲಂದೂರು ಅರಣ್ಯದ ಹಂಗರಮಕ್ಕಿ ಬಳಿ ಹೊಸನಗರ ತಾಲೂಕಿನ ಹಲಸಿನಹಳ್ಳಿ ಕರಿಮನೆ ಗೋಪಾಲ ಮತ್ತು ಮುಳಲ್ಲಿ ಗ್ರಾಮದ ಚಕ್ರನಗರದ ನಾಗರಾಜ ಅವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಬೈಕ್, ಒಂದು ಕೋವಿ, ಮದ್ದುಗುಂಡು, ಚಾಕು, ಹೆಡ್‌ಲೈಟ್, ಮದ್ದುಗುಂಡು ತುಂಬಿದ ಚೀಲವನ್ನು ವಶಕ್ಕೆ ಪಡೆದು, ಹೊಸನಗರ ಕೋರ್ಟಿಗೆ ಹಾಜರುಪಡಿಸಿ, ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ.
ಡಿಸಿಎಫ್ ಅವರ ಮಾರ್ಗದರ್ಶನ ದಲ್ಲಿ ಎಸಿಎಫ್ ಭಗವಾನ್‌ದಾಸ್, ವಲಯ ಅರಣ್ಯಾಧಿಕಾರಿ ಸವಿತಾ ಆರ್. ದೇವಾಡಿಗ, ಉಪ ವಲಯ ಅರಣ್ಯಾಧಿಕಾರಿಗಳಾದ ಪೂರ್ಣಾನಂದ, ಮಂಜುನಾಥ ಎಸ್., ಗಾರ್ಡ್‌ಗಳಾದ ಕೇಶವ ಮೇಸ್ತ, ರಾಮಚಂದ್ರ ನಾಯ್ಕ, ರವಿ ಕುಮಾರ, ಪ್ರಜ್ವಲ್ ಕುಮಾರ್, ವಾಹನ ಚಾಲಕ ಉದಯ ಎಲ್. ಮೊದಲಾದವರು ಈ ಕಾರ್ಯಾಚರಣೆಯಲ್ಲಿ ಭಾಗ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.