ಸಿದ್ದರಾಮಯ್ಯಗೆ ಕೃಷ್ಣ ಮಠಕ್ಕೆ ಬರಲು ಮನಸ್ಸಿದೆ,ಆದರೆ..
Team Udayavani, Jan 18, 2018, 10:46 AM IST
ಉಡುಪಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಠಕ್ಕೆ ಬರಲು ಮನಸ್ಸಿದೆ ಆದರೆ ಮಧ್ಯ ತೆಡೆ ಹಾಕುವವರು ಇದ್ದಾರೆ’ ಎಂದು ಪರ್ಯಾಯ ಪಲಿಮಾರು ಶ್ರೀಗಳಾದ ವಿದ್ಯಾಧೀಶ ತೀರ್ಥ ಶ್ರೀಗಳು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಉಪಸ್ಥಿತರಿದ್ದ ಗಣ್ಯರನ್ನು ಅಭಿನಂದಿಸುತ್ತಾ ‘ನಾವು ಎಲ್ಲರಿಗೂ ಆಮಂತ್ರಣ ನೀಡಿದ್ದೇವೆ. ಮುಖ್ಯಮಂತ್ರಿಗಳಿಗೂ ಆಮಂತ್ರಣ ನೀಡಿದ್ದೆವು. ಪೇಜಾವರ ಶ್ರೀಗಳು ಹೇಳಿದಂತೆ ಸಿದ್ದರಾಮಯ್ಯ ಅವರಿಗೆ ಮಠಕ್ಕೆ ಬರಲು ಮನಸ್ಸಿದೆ, ಆದರೆ ಮಧ್ಯ ತಡೆ ಇದೆ. ಮುಂದಿನ ದಿನಗಳಲ್ಲಿ ಅವರೂ ಬರುವ ವಿಶ್ವಾಸ ನಮ್ಮದು’ ಎಂದರು.
‘ಪರ್ಯಾಯ ಅವಧಿಯಲ್ಲಿ ನಾನು ಬೀಗುವುದು ಯಾಕೆಂದರೆ 5 ಪರ್ಯಾಯ ಗಳನ್ನು ಮುಗಿಸಿರುವ ಪೇಜಾವರ ಶ್ರೀಗಳು ಅಧಿಕಾರವನ್ನು ಮುಟ್ಟಿ ಕೊಟ್ಟಿರುವುದರಿಂದ ನನಗೂ ಮಹತ್ವ ಬಂತು. ಎಲ್ಲದರಲ್ಲಿಯೂ ಪ್ರವೇಶ ಪಡೆದ ಶ್ರೀಪಾದರು ದಾಖಲೆ ಮಾಡಿದ್ದು, ಪರ್ಯಾಯ ಹೇಗೆ ಮಾಡಬೇಕು ಎಂಬ ಆದರ್ಶವನ್ನು ನಮ್ಮೆಲ್ಲರ ಮುಂದಿಟ್ಟಿದ್ದಾರೆ. ಅವರು ಜ್ಞಾನದ ಬೆಂಕಿ , ಅವರ ಪಕ್ಕದಲ್ಲಿ ಕೂತರೆ ವಿಶೇಷ ಶಕ್ತಿ ಪಡೆಯಬಹುದಾಗಿದೆ. ಪೂಜ್ಯರು ಮಾಡಿದ ಸೇವೆಯನ್ನು ಅನುಸಂಧಾನ ಮಾಡಲು ನಾವು ಸೇವೆ ಮಾಡಬೇಕಿದೆ’ ಎಂದರು.
ದರ್ಬಾರ್ ವೇದಿಕೆಯಲ್ಲಿ ಪೇಜಾವರ ಶ್ರೀ ಸೇರಿದಂತೆ 7 ಮಠಗಳ ಯತಿಗಳು, ಗಣ್ಯರ ಸಾಲಿನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ, ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜೆಡಿಎಸ್ ನಾಯಕ ಪಿಜಿಆರ್ ಸಿಂಧ್ಯಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಪರ್ಯಾಯ ಸಂಭ್ರಮದ ವೇಳೆ ಉಡುಪಿಯಲ್ಲಿ ಬುಧವಾರ ಸಂಜೆಯಾಗುತ್ತಲೇ ಜನಸಾಗರವೇ ಕಾಣಿಸಿಕೊಂಡಿತ್ತು. ಕರಾವಳಿ ಮಾತ್ರವಲ್ಲದೆ, ಹೊರಜಿಲ್ಲೆಗಳ, ರಾಜ್ಯಗಳ ಭಕ್ತರು ಉಡುಪಿಗೆದೌಡಾಯಿಸಿದ್ದರು. ಉಡುಪಿ ನಗರದಸುತ್ತಮುತ್ತ ವಿಶೇಷ ಸಾಂಸ್ಕೃತಿಕಕಾರ್ಯಕ್ರಮಗಳು ರಾತ್ರಿ 8 ಗಂಟೆಗೆ ಆರಂಭಗೊಂಡಿದ್ದುಬೆಳಗಿನ 3 ಗಂಟೆಯ ವರೆಗೂ ನಡೆದವು. ಹೆಚ್ಚಿನ ಕಡೆ ಕಾಲು ಹಾಕುವುದಕ್ಕೂಜಾಗವಿಲ್ಲದಷ್ಟು ಜನ ಸೇರಿದ್ದರು. ಉಡುಪಿ ನಗರದೊಳಗೆ ವಾಹನಸಂಚಾರವನ್ನು ಸಂಪೂರ್ಣ ಸ್ತಬ್ಧಗೊಳಿಸಲಾಗಿತ್ತು. ಬಿಗು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.