![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 2, 2023, 10:27 PM IST
ಮಣಿಪಾಲ: 38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಸಂಭ್ರಮದಲ್ಲಿ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮತ್ತು ಮಣಿಪಾಲ್ ಸ್ಕೂಲ್ ಆಫ್ ಇನ್ಫರ್ಮೇಷನ್ ಸೈನ್ಸ್, ಸಕ್ಷಮ – ಕರ್ನಾಟಕ, ನೇತ್ರಶಾಸ್ತ್ರ ವಿಭಾಗ, ಕಸ್ತೂರ್ಬಾ ಆಸ್ಪತ್ರೆ ಮತ್ತು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಸಹಭಾಗಿತ್ವದಲ್ಲಿ ಸೈಟ್-ಎ-ಥಾನ್ 2023 ಅನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವು ಸಾರ್ವಜನಿಕರಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಡಿಗೆಯನ್ನು ಒಳಗೊಂಡಿತ್ತು.
ಕಾರ್ಯಕ್ರಮವನ್ನು ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್, ಪ್ರೊ ವೈಸ್ ಚಾನ್ಸೆಲರ್ ಡಾ. ನಾರಾಯಣ ಸಭಾಹಿತ್, ಮತ್ತು ಸಕ್ಷಮ್‌ನ ರಾಷ್ಟ್ರೀಯ ಸಂಯೋಜಕರಾದ ವಿನೋದ್ ಪ್ರಕಾಶ್ ಆರ್ ಅವರು ಧ್ವಜಾರೋಹಣ ಮೂಲಕ ಉದ್ಘಾಟಿಸಿದರು.
ಡಾ.ಪದ್ಮರಾಜ್ ಹೆಗ್ಡೆ, ಡೀನ್ ಕೆಎಂಸಿ, ಮಣಿಪಾಲ, ಡಾ. ಜಿ ಅರುಣ್ ಮಯ್ಯ, ಡೀನ್ MCHP, ಡಾ. ಆನಂದ್ ವೇಣುಗೋಪಾಲ್, ಸಿಒಒ -ಬೋಧನಾ ಆಸ್ಪತ್ರೆ, ಮಾಹೆ, ಮಣಿಪಾಲ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ,ನೇತ್ರವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಯೋಗೀಶ್ ಕಾಮತ್, ಡಾ.ಕೀರ್ತನಾ ಪ್ರಸಾದ್, ನಿರ್ದೇಶಕರು, ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಇವರು ಉಪಸ್ಥಿತರಿದ್ದರು.
ನೇತ್ರಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮನಾಲಿ ಹಜಾರಿಕಾ ನೇತ್ರದಾನದ ಮಹತ್ವದ ಕುರಿತು ಮಾಹಿತಿ ನೀಡಿದರು. ಮಣಿಪಾಲ ಸ್ಕೂಲ್ ಆಫ್ ಇನ್‌ಫರ್ಮೇಶನ್ ಸೈನ್ಸಸ್‌ನ ನಿರ್ದೇಶಕಿ ಡಾ.ಕೀರ್ತನಾ ಪ್ರಸಾದ್ ಅವರು ಆಗಮಿಸಿದವರನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಸಕ್ಷಮ ದ ಕಾರ್ಯಕ್ರಮವನ್ನು ಪರಿಚಯಿಸಿದರು. ಅವರು ಮಣಿಪಾಲ್ ಸ್ಕೂಲ್ ಆಫ್ ಇನ್ಫರ್ಮೇಷನ್ ಸೈನ್ಸಸ್ ಬಗ್ಗೆ ತಿಳಿಸುತ್ತಾ , ಪ್ರಸ್ತುತ ಅದರ ಸೇವೆಯ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ ಎಂದರು.
ಸಮಾರಂಭದಲ್ಲಿ, ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್ ಮಾತನಾಡಿ ನೇತ್ರದಾನದ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು, ಹಳೆಯ ವಿದ್ಯಾರ್ಥಿ, ಹರಿಕೃಷ್ಣ ರೈ (MSIS ನ 1 ನೇ ಬ್ಯಾಚ್‌ನ ಸದಸ್ಯ) ಮತ್ತು ಅವರ ರಾಷ್ಟ್ರೀಯ ಸಂಯೋಜಕ, ಶ್ರೀ ವಿನೋದ್ ಪ್ರಕಾಶ್, ನೇತೃತ್ವದ NGO ಸಕ್ಷಮ ಕರ್ನಾಟಕ ಸಹಯೋಗದಲ್ಲಿ ಹೆಮ್ಮೆ ವ್ಯಕ್ತಪಡಿಸಿದರು.
ಒಟ್ಟಾಗಿ, ಈ ಕಾರ್ಯವು ಕಾರ್ನಿಯಲ್ ಕುರುಡುತನದೊಂದಿಗೆ ಹೋರಾಡುವ ವ್ಯಕ್ತಿಗಳ ಜೀವನದ ಮೇಲೆ ಅರ್ಥಪೂರ್ಣ ಪ್ರಭಾವ ಬೀರುವ ಗುರಿಯನ್ನು ಹೊಂದಿದೇ ಎಂದರು. ದೃಷ್ಟಿಹೀನ ವ್ಯಕ್ತಿಗಳನ್ನು ಬೆಂಬಲಿಸುವಂತೆ ಅವರು ಪ್ರೇಕ್ಷಕರನ್ನು ಒತ್ತಾಯಿಸಿದರು ಮತ್ತು ನೇತ್ರದಾನದ ಮೂಲಕ ನಾವು ದೃಷ್ಟಿಯನ್ನು ಪುನಃಸ್ಥಾಪಿಸಬಹುದು, ಭರವಸೆಯನ್ನು ತರಬಹುದು ಮತ್ತು ಜೀವನವನ್ನು ಪರಿವರ್ತಿಸಬಹುದು ಎಂದು ಒತ್ತಿ ಹೇಳಿದರು.
ವಿನೋದ್ ಪ್ರಕಾಶ್ ಅವರು ಸಕ್ಷಮದ ರಾಷ್ಟ್ರೀಯ ಮಟ್ಟದ ಚಟುವಟಿಕೆಗಳ ಅವಲೋಕನವನ್ನು ಒದಗಿಸಿದರು. ಹಾಗು ಮಾಹೆ ಯಾ ಎಲ್ಲಾ ಪಧಾಧಿಕಾರಿಗಳಿಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಸೈಟ್-ಎ-ಥಾನ್ ಮಾಹೆ ಪ್ರವೇಶದ್ವಾರದಲ್ಲಿ ಪ್ರಾರಂಭವಾಯಿತು, ಟೈಗರ್ ಸರ್ಕಲ್, ತುರ್ತು ಚಿಕಿತ್ಸಾ ವಿಭಾಗದ ಮೂಲಕ ಹಾದು, ಕಸ್ತೂರ್ಬಾ ಆಸ್ಪತ್ರೆ ಒಪಿಡಿ ಯಲ್ಲಿ ಮುಕ್ತಾಯವಾಯಿತು. ವೈದ್ಯರು, ವಿದ್ಯಾರ್ಥಿಗಳು, ಸಕ್ಷಮ ಸ್ವಯಂಸೇವಕರು, ಕೆನರಾ ಬ್ಯಾಂಕಿನ ಉದ್ಯೋಗಿಗಳು, ಮಣಿಪಾಲ ಮಹಿಳಾ ಸಮಾಜದ ಭಾಂಧವರು ಮತ್ತು ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 1000 ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ನೇತ್ರದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಭಾರತದಲ್ಲಿ ಕಳೆದ 38 ವರ್ಷಗಳಿಂದ ವಾರ್ಷಿಕವಾಗಿ ಆಗಸ್ಟ್ 25 ಮತ್ತು ಸೆಪ್ಟೆಂಬರ್ 8ರ ನಡುವೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ, ಅಗತ್ಯವಿರುವವರಿಗೆ ದೃಷ್ಟಿಯನ್ನು ಒದಗಿಸುವ ಮೂಲಕ ಶಾಶ್ವತವಾಗಿ ನೇತ್ರದಾನವನ್ನು ಉತ್ತೇಜಿಸಲು ಸ್ಥಳೀಯ ಮತ್ತು ರಾಷ್ಟ್ರೀಯ ಸಂಸ್ಥೆಗಳು ಸಹಕರಿಸುತ್ತವೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.