ಕರಾರಿಗೆ ಸಹಿ: ನಾಪತ್ತೆಯಾಗಿರುವ ಮೀನುಗಾರರ ಕುಟುಂಬ ನಿರ್ಧಾರ
Team Udayavani, May 13, 2019, 6:10 AM IST
ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ನಲ್ಲಿದ್ದು ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರ ಕುಟುಂಬಗಳಿಗೆ ರಾಜ್ಯ ಸರಕಾರವು ತಲಾ 10 ಲಕ್ಷ ರೂ.ಗಳಂತೆ ಪರಿಹಾರ ಮಂಜೂರು ಮಾಡಿದ್ದು, ಅದನ್ನು ಪಡೆಯುವಲ್ಲಿ ಅಗತ್ಯವಿರುವ ಕರಾರು ಒಪ್ಪಂದಕ್ಕೆ ಸಹಿ ಹಾಕಲು ನಾಪತ್ತೆಯಾಗಿರುವ ಎಲ್ಲ ಮೀನುಗಾರರ ಕುಟುಂಬಗಳು ನಿರ್ಧರಿ ಸಿವೆ ಎಂದು ತಿಳಿದು ಬಂದಿದೆ.
ಉತ್ತರ ಕನ್ನಡ ಮತ್ತು ಮಲ್ಪೆಯ ಮೀನುಗಾರರ ಕುಟುಂಬ ಸದಸ್ಯರು ಸೋಮವಾರ ಮೀನುಗಾರಿಕೆ ಇಲಾಖೆಗೆ ತೆರಳಿ ಇಂಡೆನಿ¾ಟಿ ಬಾಂಡ್‌ಗೆ ಸಹಿ ಹಾಕಲಿವೆ.
ಹಿಂದೇಟು ಹಾಕಿದ್ದರು?
ನಮಗೆ ಪರಿಹಾರಕ್ಕಿಂತ ಮುಖ್ಯ ವಾದುದು ಬೋಟು ಅವಘಡಕ್ಕೆ ನಿಖರ ಕಾರಣ ಏನು ಎನ್ನುವುದು. ಹೀಗಾಗಿ ಬೋಟನ್ನು ಮೇಲೆತ್ತು ವುದರ ಮೂಲಕ ನಾಪತ್ತೆ ಯಾಗಿರುವ ಮೀನುಗಾರರು ಏನಾದರೆಂದು ಮೊದಲು ತಿಳಿಸುವ ಕೆಲಸವಾಗಬೇಕು. ಒಂದು ವೇಳೆ ಪರಿಹಾರ ನೀಡಿದ ಬಳಿಕ ಘಟನೆಗೆ ಸಂಬಂಧಿಸಿ ತನಿಖೆ ಮಾಡದಿದ್ದರೆ, ಪರಿಹಾರ ತೆಗೆದು ಕೊಂಡ ಬಳಿಕ ಘಟನೆಗೆ ಸಂಬಂಧಿಸಿ ರಾಜ್ಯ ಮತ್ತು ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೆ ಇದ್ದರೆ ಎಂಬ ಸಂದೇಹಗಳನ್ನು ಮುಂದಿಟ್ಟು ಬಾಂಡ್‌ಗೆ ಸಹಿ ಹಾಕಲು ಇದಕ್ಕೆ ಮುನ್ನ ಮೀನುಗಾರ ಕುಟುಂಬದವರು ಹಿಂದೇಟು ಹಾಕಿದ್ದರು ಎನ್ನಲಾಗಿತ್ತು.
ರಾಜ್ಯ ಸರಕಾರವು ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ 6 ಲಕ್ಷ ರೂ., ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂ. – ಹೀಗೆ ಒಟ್ಟು 10 ಲಕ್ಷ ರೂ. ಮಂಜೂರು ಮಾಡಿದೆ. ಆದರೆ ಅದನ್ನು ನೀಡುವುದಕ್ಕೆ ಇಂಡೆನಿ¾ಟಿ ಬಾಂಡ್‌ಗೆ ಸಹಿ ಹಾಕಲು ಹೇಳಿದೆ. ಒಂದು ವೇಳೆ ನಾಪತ್ತೆಯಾಗಿರುವ ಮೀನುಗಾರರು ವಾಪಸು ಬಂದರೆ ಸಂಕಷ್ಟ ಪರಿಹಾರ ನಿಧಿಯ 6 ಲಕ್ಷ ರೂ.ಗಳನ್ನು ಸರಕಾರ ಹಿಂಪಡೆಯುತ್ತದೆ ಎಂಬ ಷರತ್ತನ್ನು ಬಾಂಡ್‌ನಲ್ಲಿ ವಿಧಿಸಲಾಗಿದೆ.
ಮೇ 16ರ ಬಳಿಕ ಮೀನುಗಾರ ಮುಖಂಡರು, ಜನಪ್ರತಿನಿಧಿಗಳು ದಿಲ್ಲಿಗೆ ಕುಟುಂಬ ಸದಸ್ಯರೊಡನೆ ನಿಯೋಗ ತೆರಳಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಚರ್ಚಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲಿ ನಮಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂಬ ನಿರೀಕ್ಷೆ ಇದೆ ಎಂದು ಮೀನುಗಾರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.