ವೈವಿಧ್ಯ ಅರ್ಥಪೂರ್ಣ ರಜತಮಹೋತ್ಸವ ಆಚರಣೆ: ಸಚಿವ ಸುನಿಲ್ ಕುಮಾರ್
ರಜತ ಮಹೋತ್ಸವ: ಅಗ್ನಿ ದೌಡ್ ಮ್ಯಾರಥಾನ್‌ಗೆ ಚಾಲನೆ
Team Udayavani, Aug 25, 2022, 6:30 AM IST
ಕಾರ್ಕಳ: ಅಭಿವೃದ್ಧಿಯಲ್ಲಿ ಉಡುಪಿ ಜಿಲ್ಲೆ ಸಾಕಷ್ಟು ಪ್ರಗತಿ ಸಾಧಿಸಿದೆ. ಕಳೆದ 25 ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಸರ್ವ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಕಂಡಿದೆ. ರಜತ ಮಹೋತ್ಸವ ಸಂದರ್ಭ ಮತ್ತಷ್ಟೂ ದೂರದೃಷ್ಟಿತ್ವದ ಯೋಜನೆ ಜತೆಗೆ ಯುವ ಜನಾಂಗಕ್ಕೆ ಹೆಚ್ಚು ಪ್ರಾಧ್ಯನ್ಯತೆಯ ಯೋಜನೆ ರೂಪಿಸಿ ವೈವಿಧ್ಯ, ಅರ್ಥಪೂರ್ಣ ಆಚರಣೆ ಮಾಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಹೇಳಿದರು.
ಉಡುಪಿ ಜಿಲ್ಲೆ ರಚನೆಯಾಗಿ 25 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಹಾಗೂ ಸರಕಾರದ ಮಹತ್ವಾಕಾಂಕ್ಷೆಯ ಅಗ್ನಿ ಪಥ್ ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ , ಕಾರ್ಕಳದ ಭುವನೇಂದ್ರ ಕಾಲೇಜು ನಿಂದ ಉಡುಪಿಯ ಅಜ್ಜರಕಾಡು ಕ್ರೀಡಾಂಗಣದ ವರೆಗೆ ನಡೆಯುವ ಅಗ್ನಿದೌಡ್ 75 ಕಿಮೀ ಓಟ ಕ್ಕೆ ಭುವನೇಂದ್ರ ಕಾಲೇಜು ಮುಂಭಾಗ ಅವರು ಚಾಲನೆ ನೀಡಿ ಮಾತನಾಡಿದರು.ಅಗ್ನಿಪಥ್ ಯೋಜನೆ ಅತ್ಯಂತ ಮಹತ್ವದ ಯೋಜನೆಯಾಗಿದೆ. ಭವಿಷ್ಯದ ಭಾರತ ಕಟ್ಟುವಲ್ಲಿ ಯುವ ಜನತೆಯ ಪಾತ್ರ ಮುಖ್ಯ. ಆ ದೃಷ್ಟಿಯಿಂದ ಯುವ ಶಕ್ತಿಗೆ ಶಕ್ತಿ ತುಂಬುವ ಕಾರ್ಯ ಈ ಸುಸಂದರ್ಭದಲ್ಲಿ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ. ಉಡುಪಿ ಶಾಸಕ ರಘುಪತಿ ಭಟ್ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ , ಪುರಸಭಾ ಮುಖ್ಯಾಧಿಕಾರಿ ಟಿ. ರೂಪಾ ಶೆಟ್ಟಿ , ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಕೋಟ್ಯಾನ್ , ಪ್ರಮುಖರಾದ ಮಹಾವೀರ ಹೆಗ್ಡೆ, ವಿಖ್ಯಾತ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಆಕರ್ಷಕ ಚೆಂಡೆ ಮೂಲಕ ಸ್ವಾಗತ
ಕಾರ್ಕಳದಿಂದ ಆರಂಭಗೊಂಡ ಮ್ಯಾರಥಾನ್ ಓಟದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದವು. ಮ್ಯಾರಥಾನ್ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಬೆಳ್ಮಣ್ ಮೂಲಕ ಕಾಪು ತಲುಪಿ ಬಳಿಕ ಉಡುಪಿ ಸೇರಲಿದೆ. ಕಾರ್ಕಳದಿಂದ ಹೊರಟ ಮ್ಯಾರಥಾನ್ ಓಟದ ಸಂದರ್ಭ ಅಲ್ಲಲ್ಲಿ ಆಕರ್ಷಕ ಚೆಂಡೆ ನಿನಾದದೊಂದಿಗೆ ಓಟಗಾರರನ್ನು ಸ್ವಾಗತಿಸಲಾಗಿತ್ತು. ತಂಡ ತಂಡವಾಗಿ ಮ್ಯಾರಥಾನ್ ಓಟ 75 ಕಿ.ಮೀ ಕ್ರಮಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.